Political News : ಸದನದಲ್ಲಿ ಇಂದು ಅಂದರೆ ಜುಲೈ 19ರಂದು ನಾಯಕರ ಹೈ ಡ್ರಾಮವೇ ನಡೆಯಿತು. ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ಮಾತಿನ ಚಕಮಕಿಯಿಂದ ಅಸಭ್ಯ ವರ್ತನೆ ಪ್ರದರ್ಶನವಾಯಿತು. ಈ ಕಾರಣದಿಂದ 10 ಬಿಜೆಪಿ ನಾಯಕರನ್ನು ಅಮಾನತು ಮಾಡಲಾಯಿತು. ಇದರ ವಿರುದ್ಧ ಬಿಜೆಪಿ ನಾಯಕರು ಪ್ರತಿಭಟನೆಗೆ ಮುಂದಾಗಿದ್ದಾರೆ.
ಕಾಂಗ್ರೆಸ್ ಮಹಾ ಮೈತ್ರಿ ಗೆ ಆಗಮಿಸಿದ ನಾಯಕರಿಗೆ ಐಎಎಸ್ ಅಧಿಕಾರಿಗಳಿಂದ ಉಪಚಾರ ಮಾಡಿಸಲಾಗಿದೆ ಎಂಬ ಆರೋಪದಡಿ ಬಿಜೆಪಿ ನಾಯಕರು ಮಾತಿನ ಚಕಮಕಿ ನಡೆಸಿದರು. ಜೊತೆಗೆ ಕೇವಲ ಮಾತಿನ ಚಕಮಕಿ ಅಷ್ಟೇ ಆಗಿಲ್ಲ ಸದನದ ಬಾವಿಗಿಳಿದು ಬಿಜೆಪಿ ನಾಯಕರು ವಿಧೇಯಕ ಪತ್ರದ ಜೊತೆಗೆ ಬಿಲ್ ಗಳನ್ನು ಹರಿದು ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಲಂಬಾಣಿ ಅವರ ಮೇಲೆ ಎಸೆದು ಅಸಭ್ಯ ವರ್ತನೆ ಎಸಗಿದರು.
ಈ ಕಾರಣಕ್ಕಾಗಿ ಸದನ ಮುಗಿಯುವ ವರೆಗೂ 10 ವಿಪಕ್ಷ ಬಿಜೆಪಿ ನಾಯಕರನ್ನು ಅಮಾನತು ಮಾಡಿ ಆದೇಶ ನೀಡಲಾಯಿತು. ಸುನೀಲ್ ಕುಮಾರ್, ಅಶ್ವತ್ಥ್ ನಾರಾಯಣ, ವೇದವ್ಯಾಸ್ ಕಾಮತ್ ,ಉಮನಾಥ್ ಕೋಟ್ಯಾನ್, ಭರತ್ ಶೆಟ್ಟಿ, ಆರ್ ಅಶೊಕ್, ಅರವಿಂದ್ ಲಿಂಬಾವಳಿ, ಯಶ್ ಪಾಲ್ ಸುವರ್ಣ, ಧೀಜರಜ್ ಮುನಿರಾಜ್ ,ಆರಗ ಜ್ಞಾನೇಂದ್ರ ಇವರನ್ನು ಅಮಾನತು ಮಾಡಲಾಯಿತು.
ಈ ಕಾರಣದಿಂದ ಬಿಜೆಪಿ ಸದಸ್ಯರನ್ನು ಸದನದಿಂದ ಅಮಾನತು ಮಾಡಿರುವುದನ್ನು ಖಂಡಿಸಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ವಿಧಾನಸಭೆಯ ಸ್ಪೀಕರ್ ಕಚೇರಿ ಎದುರು ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಿದರು.
VidhanaSoudha: ಕಲಾಪದಲ್ಲಿ ಅಸಭ್ಯ ವರ್ತನೆ ತೊರಿದ ಬಿಜೆಪಿ ನಾಯಕರು ಅಮಾನತು
Air pollution: ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಗೆ ಕಾಯಕಲ್ಪ: ಈಶ್ವರ ಖಂಡ್ರೆ
Eshwar Khandre: ಅಮೂಲ್ಯ ಸಸ್ಯ, ಪ್ರಾಣಿ ಸಂಕುಲ ರಕ್ಷಣೆಗೆ ಸರ್ಕಾರ ಬದ್ಧ : ಈಶ್ವರ ಖಂಡ್ರೆ