Political news: ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾಗಿ ಬಜೆಟ್ ಸಹ ಮಂಡನೆಯಾಗಿದೆ ಆದರೆ ಇಲ್ಲಿಯವರೆಗೂ ವಿಪಕ್ಷ ನಾಯಕರ ಆಯ್ಕೆ ಆಗದಿರುವುದು ಕಾಂಗ್ರೆಸ್ ನವರ ಬಾಯಿಗೆ ತುತ್ತಾಗಿದ್ದಾರೆ. ಇನ್ನು ಈ ಬಗ್ಗೆ ವಿಪಕ್ಷ ನಾಯಕರ ಆಯ್ಕೆ ವಿಚಾರದಲ್ಲಿ ವಿಪಕ್ಷ ನಾಯಕರಿಗೆ ಯಾರನ್ನು ವಿಪಕ್ಷ ನಾಯಕನನ್ನಾಗಿ ಮಾಡಬೇಕೆಂಬ ಗೊಂದಲದಲ್ಲಿದ್ದಾರೆ.
ಆದರೆ ರಾಜಕೀಯ ವಲಯದಲ್ಲಿ ಇರುವರನ್ನು ಬಿಟ್ಟು ಹೊಸ ಶಾಸಕರಿಗೆ ಮಣೆ ಹಾಕಲು ಸಿದ್ದರಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕೆಲವು ದಿನಗಳ ಹಿಂದೆ ಮಾಜಿ ಸಚಿವ ಬಿ ಎಸ್ ಯಡಿಯೂರಪ್ಪ ಪುತ್ರ ಬಿವೈ ವಿಜಯೇಂದ್ರ ರಾಷ್ಟ್ರೀಯ ಅಧ್ಯಕ್ಷ ಜಿಪಿ ನಡ್ಡಾ ಅವರನ್ನು ಭೇಟಿ ಮಾಡಿ ರಾಜ್ಯದಲ್ಲಿ ಕಾಂಗ್ರೆಸ್ ವೈಫಲ್ಯದ ಬಗ್ಗೆ ಹಅಗೂ ಜನವಿರೋಧಿ ಕ್ರಮಗಳ ವಿರುದ್ದ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
ಈಗಾಗಲೇ ವಿಧಾನಸಭೆಯಲ್ಲಿ ಕಲಾಪ ನಡೆದ ಸಂದರ್ಭದಲ್ಲಿ ಬಹಳಷ್ಟು ಜನರ ನಾ ಮುಂದು ತಾ ಮುಂದು ಎನ್ನುವಂತೆ ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷದ ಯೋಜನೆಗಳ ವಿರುದ್ದ ದನಿ ಎತ್ತಿರುವುದು ಕಂಡುಬಂದಿದೆ.ಯಾರು ಎಷ್ಟೇ ಮಾತನಾಡಿದರೂ ವಿಪಕ್ಷ ನಾಯಕನ ವಿಚಾರ ಮಾತ್ರ ಎನ್ನು ಬಹಿರಂಗವಾಗಿಲ್ಲ.