Sunday, May 11, 2025

Latest Posts

Chalavadi Narayana Swami : ಕಾಂಗ್ರೆಸ್ ಗೋಮುಖ ವ್ಯಾಘ್ರ : ಛಲವಾದಿ

- Advertisement -

Political News : ಸದನದಲ್ಲಿ ಬಿಜೆಪಿ ನಾಯಕರು ಅತಿರೇಕದ ವರ್ತನೆ ಮಾಡಿದ್ದಾರೆಂದು 10 ಬಿಜೆಪಿ  ನಾಯಕರನ್ನು ಅಮಾನತು ಮಾಡಲಾಗಿತ್ತು.  ಈ ವಿಚಾರವಾಗಿ ವಿಧಾನ ಸೌಧದ ಗಾಂಧಿ ಪ್ರತಿಮೆ  ಬಳಿ ಜುಲೈ 20 ಅಂದರೆ ಗುರುವಾರ  ಪ್ರತಿಭಟನೆ ಮಾಡುತ್ತಿದ್ದಾರೆ. ಇನ್ನು ಬಿಜೆಪಿಗರ ವಿಚಾರವಾಗಿ ಡಿಸಿಎಂ ಡಿಕೆಶಿ ಬಿಜೆಪಿಗರು ದಲಿತ ಡೆಪ್ಯುಟಿ ಸ್ಪೀಕರ್ ಮೇಲೆ ಬಿಲ್ ಹರಿದು ಬಿಸಾಕಿದ್ದಾರೆ ಎಂದು ಹೇಳಿದ್ದಾರೆ.

ಇದಕ್ಕೆ ಪ್ರತಿಯಾಗಿ ಮಾತನಾಡಿದ ಛಲವಾದಿ ನಾರಾಯಣ ಸ್ವಾಮಿ ಕಾಂ ಗ್ರೆಸ್ಸಿಗರು ದಲಿತ ಕಾರ್ಡ್​ ಉಪಯೋಗಿಸುತ್ತಿದ್ದಾರೆ. ಅವರಿಗೆ ದಲಿತರ ಬಗ್ಗೆ ಅಷ್ಟೊಂದು ಕಾಳಜಿ ಇರುವುದೇ ನಿಜವಾಗಿದ್ದರೆ ಮುಖ್ಯಮಂತ್ರಿಯನ್ನು ಯಾರನ್ನಾದರೂ ದಲಿತರನ್ನು ಮಾಡಬಹುದಿತ್ತಲ್ಲ ಪರಮೇಶ್ವರ್ ಗೆ ಇಲ್ಲ ಉಳಿದ ದಲಿತ ನಾಯಕರಿಗೆ ಪದವಿ ನೀಡಬಹುದಲ್ಲವೇ.. ನಿಮ್ಮ ಕಾಳಜಿ  ಸತ್ಯವಾಗಿದ್ದರೆ ನಿಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ದಲಿತರಿಗೆ ಪದವಿ ನೀಡಿ ಅದು ಬಿಟ್ಟು ಗೋಮುಖ ವ್ಯಾಘ್ರ ಅವತಾರ ಮಾಡಬೇಡಿ ಎಂಬುವುದಾಗಿ ಹೇಳಿದ್ದಾರೆ.

ಕಾಂಗ್ರೆಸ್ ಒಂದು ಗೋಮುಖ ವ್ಯಾಘ್ರ ನೀತಿ ಅನುಸರಿಸುತ್ತಿದೆ. ಯಾವುದೇ ರೀತಿಯ ಕಾಳಜಿ ಇಲ್ಲದಿದ್ದರೂ ಮೇಲ್ನೋಟಕ್ಕೆ ದಿಲಿತ ಕಾರ್ಡ್​  ಬಳಸುತ್ತಿದ್ದಾರೆ ಎಂದು ಹೇಳಿದ್ದಾರೆ.

- Advertisement -

Latest Posts

Don't Miss