Shivamoggaದಲ್ಲಿಂದು ಮಾಧ್ಯಮದ ಜತೆ ಮಾತನಾಡಿದ ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ, ಹಾಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಆರ್ಎಸ್ಎಸ್ ವಿರುದ್ಧ ಮಾತನಾಡಿದ್ರೆ, ಅದು ಮುಸ್ಲಿಂಮರಿಗೆ ಕೇಳಿಸುತ್ತೆ. ಮತ್ತು ಅವರು ಕಾಂಗ್ರೆಸ್ಗೆ ಓಟ್ ಹಾಕುತ್ತಾರೆಂಬ ಭ್ರಮೆಯಲ್ಲಿ ಕಾಂಗ್ರೆಸ್ಸಿಗರಿದ್ದಾರೆ. ಹಾಗಾಗಿ ಆರ್ಎಸ್ಎಸ್ ವಿರುದ್ಧ ಕಾಂಗ್ರೆಸ್ಸಿಗರು ವಾಗ್ದಾಳಿ ನಡೆುತ್ತಿದ್ದಾರೆಂದು ಅರಗ ಜ್ಞಾನೇಂದ್ರ ಆರೋಪಿಸಿದ್ದಾರೆ.
ಆರ್ಎಸ್ಎಸ್ ಬಗ್ಗೆ ಪ್ರಿಯಾಂಕ್ ಖರ್ಗೆ ಮತ್ತು ಹರಿಪ್ರಸಾದ್ ಹಗುರವಾಗಿ ಮಾತನಾಡುತ್ತಿದ್ದಾರೆ. ಈ ಹಿಂದೆ ಹಿಂದೂ ಧರ್ಮದ ಬಗ್ಗೆಯೂ ಕೀಳಾಗಿ ಮಾತನಾಡಿದ್ದರು. ಆದರೆ ಈಗ ಹಿಂದೂ ಧರ್ಮದ ಬಗ್ಗೆ ಮಾತನಾಡಿದ್ರೆ, ಓಟ್ ಸಿಗುವುದಿಲ್ಲ ಎಂದು ತಿಳಿದಿದೆ. ಹಾಗಾಗಿ ಆರ್ಎಸ್ಎಸ್ನ್ನು ಟಾರ್ಗೇಟ್ ಮಾಡಿ ಮಾತನಾಡುತ್ತಿದ್ದಾರೆ ಎಂದು ಅರಗ ಜ್ಞಾನೇಂದ್ರ ಕಿಡಿಕಾರಿದ್ದಾರೆ.
ಅಲ್ಲದೇ, ಮೌಲ್ವಿಗಳು, ಅವರ ಧರ್ಮಗುರುಗಳು ನಮ್ಮವರಿಗೆ ಮಂತ್ರಿ ಸ್ಥಾನ ನೀಡಿ, ನಮ್ಮವರಿಂದಲೇ ನಿಮ್ಮ ಪಕ್ಷ ಆಡಳಿತ ನಡೆಸುತ್ತಿದ್ದೆ. ಇದಕ್ಕೆಲ್ಲ ನಮ್ಮ ಬೆಂಬಲವೇ ಕಾರಣ ಎಂದು ಫೋರ್ಸ್ ಹಾಕಿದ್ದಾರೆ. ಅದನ್ನು ತಡೆಯಲಾಗದೇ, ಕಾಂಗ್ರೆಸ್ ಆರ್ಎಸ್ಎಸ್ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದೆ. ಇದು ರಾಜಕೀಯ ತಂತ್ರ ಅಷ್ಟೇ. ಇವರ ಪ್ರಶ್ನೆಗೆ ಮೋಹನ್ ಭಾಗವತ್ ಅವರು ನೀಡಿದ್ದ ಉತ್ತರ ಸರಿಯಾಗಿದೆ ಎಂದು ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.




