Tuesday, December 24, 2024

Latest Posts

Rain : ಮಳೆಗೆ ಒದ್ದೆಯಾಗಿ ಸೇವಿಸಬೇಡಿ ಟೀ…! ಪರ್ಯಾಯ ಮಾರ್ಗ ಇಲ್ಲಿವೆ ನೋಡಿ..!

- Advertisement -

Health Tips : ಮಳೆ ಮತ್ತು  ಟೀ ಗೆ ಅದೇನೋ ಅವಿನಾಭಾವ ಸಂಬಂಧ ಮಳೆ ಬಂದ ತಕ್ಷಣ  ಬಿಸಿ ಬಿಸಿ  ಟೀ ಕುಡಿಬೇಕು ಅನ್ಸುತ್ತೆ , ಮಳೆಯಲ್ಲಿ ಒದ್ದೆಯಾದ ಟೈಂನಲ್ಲಿ ಬಿಸಿ ಟೀ ಕುಡಿಯೋ ಅಭ್ಯಾಸ ಕೆಲವರಿಗೆ ಹೆಚ್ಚಾಗಿ ಇರುತ್ತೆ ಆದ್ರೆ ನಿಮಗೇನಾದ್ರು ಈ ಅಭ್ಯಾಸ ಇದ್ರೆ  ತಕ್ಷಣ ಬಿಟ್ಟು ಬಿಡಿ. ಯಾಕೆ ಗೊತ್ತಾ ಬಿಸಿ ಟೀ ಮಳೆಯಲ್ಲಿ ಒದ್ದೆಯಾದಾಗ ಕುಡಿದ್ರೆ ಆರೋಗ್ಯಕ್ಕೆ ಅದು ಒಳ್ಳೆಯದಲ್ವಂತೆ ಹಾಗಿದ್ರೆ ಮಳೆಯಲ್ಲಿ ಒದ್ದೆಯಾದಾಗ ಆರೋಗ್ಯದ ಮುಂಜಾಗ್ರತೆ ಹೇಗಿರ್ಬೇಕು ಗೊತ್ತಾ..? ಈ ಸ್ಟೋರಿ ನೋಡಿ……

ಮಳೆ ಅಂದ್ರೆ ಎಲ್ಲರಿಗೂ ಇಷ್ಟಾನೆ ಮಳೆಯಲ್ಲಿ ನೆನೆಯೋದಂದ್ರೆ ಇನ್ನು ಖುಷಿ ಆದ್ರೆ ನೆನೆದಾದ್ಮೇಲೆ  ನಮ್ಮನ್ನು ಕಾಡೋದೇ ಆರೋಗ್ಯ ಸಮಸ್ಯೆಯ ಭಯ ಕೆಲವರು ಮಳೆಯಿಂದ ಒದ್ದೆಯಾಗಿ ಬಂದ ತಕ್ಷಣ ಬಿಸಿ ಪಾನೀಯವನ್ನು ಹೀರುವ ಅಭ್ಯಾಸ ಆದ್ರೆ ಇದನ್ನು ಬಿಟ್ಟು ಬಿಡಿ ನಾ ವು ಹೇಳೋ ರೂಲ್ಸ್ ನ  ಫಾಲೋ  ಮಾಡಿ…..

ಮಳೆಯಲ್ಲಿ ಒದ್ದೆಯಾಗಿ ಬಂದ ತಕ್ಷಣ ಬಿಸಿನೀರಿನ ಸ್ನಾನ ಮಾಡಿ ಮತ್ತು ತಾಜಾ ಬಟ್ಟೆಗಳನ್ನು ಬದಲಿಸಬೇಕು ಒದ್ದೆಯಾದ ತಕ್ಷಣ ಚಹಾ ಅಥವಾ ಬಿಸಿ ಪಾನೀಯವನ್ನು ಕುಡಿಯುವುದು ಒಳ್ಳೆಯದಲ್ಲ. ಇದು ನಿಮ್ಮ ದೇಹಕ್ಕೆ ಅಂಟಿಕೊಂಡಿರುವ ಸೂಕ್ಷ್ಮಜೀವಿಗಳಿಂದ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ಮಳೆಯಲ್ಲಿ ಒದ್ದೆಯಾದ ನಂತರ ನಿಮ್ಮನ್ನು ಆರೋಗ್ಯವಾಗಿರಲು 5 ಬಿಸಿ ಪಾನೀಯಗಳ  ಬಗ್ಗೆ   ನಾವು ಹೇಳ್ತೇವೆ ನೋಡಿ…..

ಮಸಾಲೆಯುಕ್ತ ಕಾಫಿ: ಮಳೆಯಲ್ಲಿ ನೆನೆದ ನಂತರ ಕಾಫಿ ಪ್ರಿಯರಿಗೆ, ಬೆಚ್ಚಗಿನ ಮತ್ತು ಆರಾಮದಾಯಕ ಪಾನೀಯವನ್ನು ಕಾಫಿ ಮತ್ತು ಮಸಾಲೆಗಳ ಮಿಶ್ರಣವನ್ನು ಸೇವಿಸಬಹುದು.

ಮಸಾಲಾ ಚಹಾ: ಮಸಾಲಾ ಚಾಯ್ ಅಧಿಕ ಶಕ್ತಿಯುನ್ನು  ಒದಗಿಸುತ್ತದೆ.  ಬಳಸಲಾಗುವ ವಿವಿಧ ಮಸಾಲೆಗಳ ಆರೋಗ್ಯ ಪ್ರಯೋಜನಗಳಿಂದ ಕೂಡಿವೆ.

ಶುಂಠಿ ಶಾಟ್: ಶುಂಠಿ, ಆರೋಗ್ಯ ಪ್ರಯೋಜನಗಳಿಗೆ ಹೆಸರುವಾಸಿ. ಇದು ದೇಹಕ್ಕೆ ಉಷ್ಣತೆಯನ್ನು ಸೇರಿಸುತ್ತದೆ ಮತ್ತು ಶೀತ ಮತ್ತು ಜ್ವರವನ್ನು ತಡೆಯಲು ಸಹಾಯ ಮಾಡುತ್ತದೆ.

ಅರಿಶಿನ ಹಾಲು: ಅರಿಶಿನ ಮತ್ತು ಬೆಚ್ಚಗಿನ ಹಾಲಿನ ಸಂಯೋಜನೆಯು ಆಂಟಿಬ್ಯಾಕ್ಟೀರಿಯಲ್, ಆಂಟಿ-ಸೆಪ್ಟಿಕ್ ಮತ್ತು ಉರಿಯೂತದ ಗುಣಲಕ್ಷಣಗಳನ್ನು ನಿವಾರಿಸುತ್ತದೆ. ಶೀತ ಮತ್ತು ಜ್ವರದಿಂದ ರಕ್ಷಿಸಲು ಸಹಾಯ ಮಾಡುತ್ತದೆ.

ಬಿಸಿ ನಿಂಬೆ ನೀರು: ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿರುವ ನಿಂಬೆ ನೀರು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ವಿಷವನ್ನು ಹೊರಹಾಕುತ್ತದೆ ಮತ್ತು ಉರಿಯೂತವನ್ನು ತಡೆಯುತ್ತದೆ.

ಈ ಎಲ್ಲಾ  ಮಾರ್ಗಗಳನ್ನು ಅನುಸರಿಸಿ ಬೆಚ್ಚಗೆ ಇರಿ, ಆರೋಗ್ಯವಾಗಿರಿ ಮತ್ತು ಈ ಮಳೆಗಾಲವನ್ನು ಸಂಪೂರ್ಣವಾಗಿ ಆನಂದಿಸಿ.

40 ವಯಸ್ಸಾದ ಬಳಿಕ ಗರ್ಭಿಣಿಯಾದರೆ, ಯಾವೆಲ್ಲ ಸಮಸ್ಯೆಗಳು ಬರುತ್ತದೆ..?

ಮಗುವಾದ ಬಳಿಕ ಕೂದಲು ಉದುರುವಿಕೆಗೆ ಇಲ್ಲಿದೆ ಪರಿಹಾರ..

ಮೂಗುತಿ ಹಾಕುವುದರಿಂದ ಆರೋಗ್ಯಕ್ಕಾಗುವ ಲಾಭವೇನು..?

- Advertisement -

Latest Posts

Don't Miss