Monday, December 23, 2024

Latest Posts

Road widening: ಅಪಾಯಕಾರಿ ತಿರುವು ರಸ್ತೆಗೆ ಬೇಕಾಗಿದೆ ಮುಕ್ತಿ

- Advertisement -

ಕಾರ್ಕಳ: ಅಪಾಯಕಾರಿ ತಿರುವು ರಸ್ತೆ, ಚರಂಡಿ ವ್ಯವಸ್ಥೆಯಿಲ್ಲದೆ ರಸ್ತೆಯಲ್ಲೇ ಶೇಖರಣೆಯಾಗುವ ಮಳೆ ನೀರು ನಿತ್ಯ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ.

ಮುಂಡ್ಕೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಜೈನ್ ಪೇಟೆ ಪರಿಸರದಲ್ಲಿ ಹಾದು ಹೋಗುವ ಬೆಳ್ಮಣ್ ಕಿನ್ನಿಗೋಳಿ ರಾಜ್ಯ ಹೆದ್ದಾರಿಯೂ ತುಂಬಾನೇ ಅಪಾಯಕಾರಿಯಾಗಿದೆ. ತಿರುವುಳ್ಳ ರಸ್ತೆಯಲ್ಲಿ ಈಗಾಗಲೇ ಅನೇಕ ಅಪಘಾತಗಳು ನಡೆದು ಸವಾರರು ಕೈಕಾಲು ಮುರಿದುಕೊಂಡ ನಿದರ್ಶನವೂ ಇಲ್ಲಿದೆ. ತಿರುವು ರಸ್ತೆಯಲ್ಲೇ ಮಳೆಯ ನೀರು ನಿಲ್ಲುತ್ತಿದ್ದು ಕಲ್ಲು ಮಣ್ಣು ಎಲ್ಲವೂ ರಾಶಿ ಬಿದ್ದು ಬೈಕ್ ಸವಾರರು ಬಿದ್ದು ಏಳುವುದು ಇಲ್ಲಿ ಮಾಮೂಲಾಗಿದೆ. ಜೈನ್ ಪೇಟೆಯ ಪರಿಸರದಲ್ಲಿ ಈಗಾಗಲೇ ಅನೇಕ ಅಪಘಾತಗಳು ನಡೆದು ವಾಹನ ಸವಾರರು ಸಮಸ್ಯೆಯನ್ನು ಎದುರಿಸುತ್ತಿದ್ದರೂ ಯಾವುದೇ ಕ್ರಮವನ್ನು ಇಲಾಖೆ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ರಸ್ತೆಯ ಅಗಲೀಕರಣಕ್ಕೆ ಒತ್ತಾಯ : ಈಗಾಗಲೇ ಸಾಕಷ್ಟು ಅಪಘಾತಗಳಿಗೆ ಕಾರಣವಾಗಿದ್ದ ಮುಂಡ್ಕೂರಿನ ಜೈನ ಪೇಟೆಯ ತಿರುವು ರಸ್ತೆಯನ್ನು ಅಗಲೀಕರಣಗೊಳಿಸುವಂತೆ ಈಗಾಗಲೇ ಈ ಭಾಗದ ಜನ ಸಾಕಷ್ಟು ಭಾರೀ ಅಧಿಕಾರಿಗಳಿಗೆ ಮನವಿಯನ್ನು ಮಾಡಿಕೊಂಡರೂ ಯಾವುದೇ ಪ್ರಯೀಜನವಾಗಿಲ್ಲ. ಇದೀಗ ರಸ್ತೆಯೂ ಅಲ್ಲಲ್ಲಿ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದರೂ ಇಲ್ಲಿನ ಅಪಾಯಕಾರಿ ತಿರುವು ರಸ್ತೆಯನ್ನು ಸರಿಪಡಿಸುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಮನಸ್ಸು ಮಾಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಚರಂಡಿ ನಿರ್ಮಾಣದ ಅಗತ್ಯ : ತಿರುವು ರಸ್ತೆಯ ಸಮೀಪದಲ್ಲೇ ಮಳೆ ನೀರು ಸರಿಯಾಗಿ ಹರಿದು ಹೋಗಲು ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲದೆ ಇಡೀ ರಸ್ತೆಯಲ್ಲೇ ಮಳೆ ನೀರು ಹರಿದಾಡುತ್ತದೆ ಈ ಸಂದರ್ಭ ಸಣ್ಣ ಪುಟ್ಟ ವಾಹನ ಸವಾರರಿಗೆ ತುಂಬಾನೇ ಅಪಾಯಕಾರಿಯಾಗಿದ್ದು. ಕೂಡಲೇ ಸ್ಥಳೀಯ ಗ್ರಾ.ಪಂ ಈ ಭಾಗದಲ್ಲೊಂದು ಚರಂಡಿ ವ್ಯವಸ್ಥೆಯನ್ನಾದರೂ ನಿರ್ಮಿಸಿ ರಸ್ತೆಯಲ್ಲೇ ಶೇಖರಣೆಯಾಗುವ ಮಳೆ ನೀರಿನಿಂದ ಮುಕ್ತಿಕೊಡುವಂತೆ ಕೇಳಿಕೊಂಡರು.

Gruhalaxmi: ಕನಕಪುರದ ಕರ್ನಾಟಕ ಒನ್ ಸೇವಾ ಕೇಂದ್ರಕ್ಕೆ ಡಿಸಿಎಂ ದಿಢೀರ್ ಭೇಟಿ: ಗೃಹಲಕ್ಷಿ ನೋಂದಣಿ ಪ್ರಕ್ರಿಯೆ ಪರಿಶೀಲನೆ

Kolara BJP Protest: ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟನೆ ಮಾಡಿದ ಬಿಜೆಪಿ ನಾಯಕರು..!

Nandalike Road : ನಂದಳಿಕೆ ಕೊಪ್ಪಳ ರಸ್ತೆ ಕಾಮಗಾರಿ ಸ್ಥಗಿತ: ಓಡಾಟಕ್ಕೆ ಜನರ ಪರದಾಟ

- Advertisement -

Latest Posts

Don't Miss