ಸಿನಿಮಾ ಸುದ್ದಿ: ರಶ್ಮಿಕಾ ಮಂದಣ್ಣ ಕನ್ನಡದ ರಕ್ಷಿತ್ ಶೆಟ್ಟಿ ಅವರೊಟ್ಟಿಗೆ ನಿಶ್ಚಿತಾರ್ಥ ಮುರಿದುಕೊಂಡ ನಂತರ ಅವರು ನೇರವಾಗಿ ತೆಲುಗು ಚಿತ್ರ ರಂಗಕ್ಕೆ ಹಾರಿದರು ಅಲ್ಲಿ ವಿಜಯ್ ದೇವರ ಕೊಂಡ ಜೊತೆ ಗೀತಾ ಗೋವಿಂದಂ ಸಿನಿಮಾದಲ್ಲಿ ಒಟ್ಟಿಗೆ ನಟಿಸುವ ಮೂಲಕ ಅವರ ಸಂಬಂಧವನ್ನು ಗಟ್ಟಿಗೊಳಿಸಿಕೊಂಡರು .ಆದರೆ ನಂತರ ಯಾಕೋ ಏನೂ ಗೊತ್ತಿಲ್ಲ ಕೆಲವು ತಿಂಗಳುಗಳ ಕಾಲ ಇವರಿಬ್ಬರು ಒಟ್ಟಿಗೆ ಕಾಣಿಸಿಕೊಳ್ಳಲ್ಲಿಲ್ಲ.
ಅದಕ್ಕಾಗಿ ಸಾಕಷ್ಟು ಜನ ಟ್ರೋಲರ್ ಗಳು ಗೋವಿಂದ ಅಂತ ರಶ್ಮಿಕಾ ಅನ್ನು ಗೇಲಿ ಮಾಡಿದರು ಆದರೆ ಇತ್ತೀಚಿಗೆ ವಿಜಯ್ ದೇವರಕೊಂಡ ಅವರು ಕುಟುಂಬದವರ ಜೊತೆ ಅವರ ಮನೆಯಲ್ಲಿ ಊಟಕ್ಕೆ ಹೋದಾಗ ಕ್ಲಿಕ್ಕಿಸಿದ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ನಂತರ ಓ ಹೋ ಇವರಿಬ್ಬರು ಬೇರೆಯಾಗಿಲ್ಲ ಎಂದು ಹುಬ್ಬೇರಿಸಿಕೊಂಡರು ಅದೇ ರೀತಿ ಮತ್ತೆ ಒಂದು ವಿಮಾನ ನಿಲ್ದಾಣದಲ್ಲಿ ಬೇರೆಯದ್ದೇ ರೀತಿಯಲ್ಲಿ ಕಾಣಿಸಿಕೊಂಡು ವಿಜಯ್ ದೇವರಕೊಂಡ ಅವರ ಜೊತೆಗಿನ ಸಂಬಂಧವನ್ನು ಇನ್ನು ಗಟ್ಟಿಗೊಳಿಸಲು ಹೀಗೆ ಬಂದಿದ್ದಾರೆ.
ಆದರೆ ಈಗ ರಶ್ಮಿಕಾ ಏರ್ ಪೋರ್ಟ್ ನಲ್ಲಿ ಕ್ಯಾಮೆರಾ ಕಣ್ಣಿಗೆ ಸರಿಯಾಗಿಯೇ ಸಿಕ್ಕಿಹಾಕಿಕೊಂಡಿದ್ದಾರೆ. ಅದು ವಿಜಯ್ ದೇವರಕೊಂಡ ಜೊತೆಗಲ್ಲ ಬದಲಿಗೆ ವಿಜಯ್ ದೇವರಕೊಂಡ ಧರಿಸಿದ್ದ ಶರ್ಟ್ ಅನ್ನು ತಾನು ಧರಿಸೋ ಮೂಲಕ ಭಾರೀ ಸುದ್ದಿಯಾಗಿದ್ದಾರೆ. ವಿಜಯ್ ದೇವರಕೊಂಡ ಈ ಹಿಂದೆ ನೇರಳೆ ಬಣ್ಣದ ಸ್ಟ್ರೈಪ್ಸ್ ಶರ್ಟ್ ಅನ್ನು ಏರ್ ಪೋರ್ಟ್ ನಿಂದ ಬರುವಾಗ ತೊಟ್ಟಿದ್ರು, ಈಗ ನೋಡಿದ್ರೆ ರಶ್ಮಿಕಾ ವಿಜಯ್ ದೇವರಕೊಂಡ ಹಾಕಿದ್ದ ಅಂಗಿಯನ್ನೇ ಹಾಕೋ ಮೂಲಕ ನಮ್ಮಿಬ್ಬರ ದೇಹ ಬೇರೆಯಾದ್ರೂ.. ಮನಸ್ಸು ಒಂದೇ, ಅಲ್ಲ ಅಲ್ಲ ಶರ್ಟ್ ಕೂಡ ಒಂದೇ ಅನ್ನೋ ಕ್ಲೂ ಕೊಟ್ಟಿದ್ದಾರೆ.
Sanamtha: ಸಿನಮಾದಿಂದ ಬ್ರೇಕ್ ತೆಗೆದುಕೊಂಡು ವಿದೇಶದಲ್ಲಿ ಸಮಂತಾ ಪ್ರವಾಸ
Vijay Sethupathi : ವಿಜಯ್ ಸೇತುಪತಿಗೆ ‘ಸಾವಿನ ವ್ಯಾಪಾರಿ’ ಟ್ಯಾಗ್ ಲೈನ್..?!




