Thursday, August 7, 2025

Latest Posts

Helping Nature: ರಸ್ತೆಯಲ್ಲಿ ಬಿದ್ದು ನರಳಾಡುತ್ತಿದ್ದವನಿಗೆ ನೆರವು: ಆಸ್ಪತ್ರೆಗೆ ಸೇರಿಸಿದ ಶಿವಶಂಕರ..!

- Advertisement -

ಹುಬ್ಬಳ್ಳಿ: ಅಪರಿಚಿತ ವ್ಯಕ್ತಿಗೆ ಪರಿಚಯದವರಿಗಿಂತಲೂ ಹೆಚ್ಚಿಗೆ ಆರೈಕೆ ಮಾಡುವ ಮೂಲಕ ಕಿಮ್ಸ್ ಆಸ್ಪತ್ರೆಯ ಸಿಬ್ಬಂದಿಯೊಬ್ಬ ಮಾನವೀಯತೆ ಮೆರೆದಿದ್ದಾರೆ. ಮತ್ತೊಬ್ಬರಿಗೆ ಕಷ್ಟ ಎಂದಾಕ್ಷಣ ಮರೆಯಾಗುವವರ ಮಧ್ಯದಲ್ಲಿ ಮುಂದೆ ನಿಂತು ಸಹಾಯ ಮಾಡಿದ್ದಾರೆ.

ಹೌದು.. ಹುಬ್ಬಳ್ಳಿಯ ವಿದ್ಯಾನಗರದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಅಸ್ವಸ್ಥಗೊಂಡು ಮಲಗಿದ್ದನ್ನು ಗಮನಿಸಿದ ಕಿಮ್ಸ್ ಸಿಬ್ಬಂದಿ ಶಿವಶಂಕರ ಭಂಡಾರಿ ತಕ್ಷಣವೇ ಬೈಕ್ ಆಂಬ್ಯುಲೆನ್ಸ್ ತರೆಸಿ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಆರೈಕೆ ಮಾಡುತ್ತಿದ್ದಾರೆ. ನಮ್ಮವರೇ ನಮ್ಮ ಕಷ್ಟದ ಕಾಲದಲ್ಲಿ ದೂರಾಗುವ ಸಂದರ್ಭದಲ್ಲಿ ಶಿವಶಂಕರ ಭಂಡಾರಿ ಆ ಮಾರ್ಗಮಧ್ಯದಲ್ಲಿ ಹೋಗುತಿದ್ದಾಗ ಈ ಅಸ್ವಸ್ಥಗೊಂಡ ವ್ಯಕ್ತಿಯನ್ನು ನೋಡಿ ತಕ್ಷಣವೇ ಆಸ್ಪತ್ರೆಗೆ ಸೇರಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಇನ್ನೂ ಅಪರಿಚಿತ ವ್ಯಕ್ತಿ ತನ್ನ ಪರಿಚಯದಲ್ಲಿ ನಾನು ಶಿವಾನಂದ ಪೊಲೀಸ್ ಎಂದು ಹೇಳುವ ಮೂಲಕ ಸಾಕಷ್ಟು ಗೊಂದಲ ಸೃಷ್ಟಿಸಿದ್ದು, ಅದು ಏನೇ ಇರಲಿ ಕಷ್ಟದಲ್ಲಿ ಇರುವವರಿಗೆ ನೆರವಾಗುವುದು ನಿಜಕ್ಕೂ ಮಾನವೀಯತೆಯ ಸಂಕೇತವಾಗಿದೆ.

Satish jarakihole: ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿ ಮಾಡಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ

Fundamental rights: 60 ವರ್ಷಗಳಿಂದ ಸರಕಾರಿ ಸೌಲಭ್ಯಗಳಿಂದ ವಂಚಿತರದ ಬಡಕುಟುಂಬ

Bustand: 60 ವರ್ಷದ ಬಾಳಿಕೆಯ ಕಟ್ಟಡ ಹತ್ತು ವರ್ಷದಲ್ಲಿಯೇ ಸೋರಿಕೆ:ಬಸ್ ನಿಲ್ದಾಣದಲ್ಲಿ ಕೊಡೆಯ ಅನಿವಾರ್ಯತೆ

- Advertisement -

Latest Posts

Don't Miss