Thursday, December 5, 2024

Latest Posts

Mobile : ಹೊಸ ಮೊಬೈಲ್ ಫುಲ್  ಚಾರ್ಜ್​ ಮಾಡಲು ಹೇಳೋದು ಯಾಕೆ..?!

- Advertisement -

Techno News : ಹೊಸದಾಗಿ ಮೊಬೈಲ್ ತೆಗೆದುಕೊಂಡ್ರೆ ಶಾಪ್ ನ ವ  ಮೊದಲು  ಹೇಳೋ ಮಾತು ಅಂದ್ರೆ ಅದು ಚಾರ್ಜ ಫುಲ್  ಮಾಡಿ ಆಮೇಲೆ ಬಳಸಿ ಆದ್ರೆ ಚಾರ್ಜ್​ ಮಾಡದೇ ಮೊಬೈಲ್ ಬಳಸಿದ್ರೆ ಏನಾಗುತ್ತೆ…?! ಯಾಕೆ ಫುಲೀ  ಚಾರ್ಜ್​ ಮಾಡೋಕೆ ಹೇಳ್ತಾರೆ ಗೊತ್ತಾ..?! ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್…………..

ನೀವು ಯಾವುದೇ ಹೊಸ ಮೊಬೈಲ್ ಅನ್ನು ಖರೀದಿಸಿದಾಗ ಚಾರ್ಜ್ ಫುಲ್ ಮಾಡಿದ ನಂತರವೇ ಉಪಯೋಗಿಸಿ, ಯಾವುದೇ ಕಾರಣಕ್ಕೂ ಚಾರ್ಜ್ ಮಾಡದೆ ಈ ಹೊಸ ಮೊಬೈಲ್ ಅನ್ನು ಬಳಕೆ ಮಾಡಬೇಡಿ ಎಂದು ಹೇಳುತ್ತಾರೆ.

ಇದಕ್ಕೆ ಪ್ರಮುಖ  ಕಾರಣನೇ ಮೊಬೈಲ್  ನಲ್ಲಿರೋ  ಲೀ-ಐಯಾನ್ ಬ್ಯಾಟರಿ : ಲಿ- ಐಯಾನ್ ಬ್ಯಾಟರಿಯಲ್ಲಿನ ಪ್ರತಿ ಕೋಶದ ಡೆಪ್ತ್ ಆಫ್ ಡಿಸ್ಟಾರ್ಜ್ ಅನ್ನು ಪೂರ್ತಿ ತಗ್ಗಿಸಲು ಮೊಬೈಲ್ ಕಂಪನಿಗಳು ಸೂಚಿಸುತ್ತವೆ. ಬ್ಯಾಟರಿಯು ಶೇ. 100 ರಷ್ಟು ಸಂಪೂರ್ಣ ಚಾರ್ಜ್ ಆಗಿದ್ದರೆ ಬ್ಯಾಟರಿಯ ಡಿಒಡಿ 0% ಆಗಿದೆ ಎಂದರ್ಥ.ಆಗ ನಿಮ್ಮ ಮೊಬೈಲ್​ಗೆ ಯಾವುದೆ ತೊಂದರೆ ಆಗುವುದಿಲ್ಲ.

20% ಗಿಂತ ಕಡಿಮೆ ಇರಬೇಕು: ಮೇಲೆ ತಿಳಿಸಿದಂತೆ ಲಿ-ಐಯಾನ್ ಬ್ಯಾಟರಿಯ ಆಔಆ ಡೆಪ್ತ್ ಆಫ್ ಡಿಸ್ಟಾರ್ಜ್ ಪೂರ್ತಿ ಕಡಿಮೆ ಇದ್ದರೆ ಒಳ್ಳೆಯದು. ಅಂದರೆ, ಸಂಪೂರ್ಣ ಚಾರ್ಜ್ ಆದ ಬ್ಯಾಟರಿ ಫೋನ್ ಶುರು ಮಾಡಲು ಇರಬೇಕು.

ಹಾಗಾಗಿ, ಬ್ಯಾಟರಿಯಲ್ಲಿ ಕನಿಷ್ಟಪಕ್ಷ 20% ಗಿಂತ ಕಡಿಮೆ ಡಿಒಡಿ ಇರಬೇಕು.  ಅಂದರೆ 80% ಹೆಚ್ಚು ಬ್ಯಾಟರಿ ಶಕ್ತಿ ತುಂಬಿರಬೇಕು. ಹಾರ್ಡ್‌ವೇರ್ ರಕ್ಷಣೆಗಾಗಿ: ತುಂಬಾ ದಿನಗಳಿಂದ ಬಳಕೆಯಲ್ಲಿರದ ಮೊಬೈಲ್ ಬ್ಯಾಟರಿ, ಒಮ್ಮೆಲೇ ಮೊಬೈಲ್‌ನ ಎಲ್ಲಾ ಬಿಡಿಭಾಗಗಳಿಗೂ ವಿಧ್ಯುತ್ ಶಕ್ತಿಯನ್ನು ಪೂರೈಸಬೇಕಾಗುತ್ತದೆ.

ಇಂತಹ ಸಮಯದಲ್ಲಿ ಮೊಬೈಲ್‌ನ ಹಾರ್ಡ್​ವೇರ್ ಭಾಗಗಳು ಹೆಚ್ಚು ವಿಧ್ಯುತ್ ಶಕ್ತಿಯನ್ನು ಬೇಡುವುದರಿಂದ ಮೊಬೈಲ್ ಬ್ಯಾಟರಿ ಪೂರ್ತಿ ತುಂಬಿರಬೇಕಾಗುತ್ತದೆ.

ಚಾರ್ಜ್ ಮಾಡದಿದ್ದರೆ ಏನಾಗುತ್ತದೆ?: ಮೊಬೈಲ್‌ಗಳು ತಯಾರಾಗಿ ಓರ್ವ ಗ್ರಾಹಕನ ಕೈ ತಲುಪಲು ಕನಿಷ್ಟ ಎಂದರೂ 3 ರಿಂದ 6 ತಿಂಗಳ ಸಮಯ ಹಿಡಿಯುತ್ತದೆ. ಈ ಸಮಯದಲ್ಲಿ ಬ್ಯಾಟರಿ ಸೆಲ್‌ಗಳು ಸಂಕುಚಿತಗೊಂಡಿರುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಒಮ್ಮೆ ಬ್ಯಾಟರಿ ಪೂರ್ಣ ಡೆಡ್ ಆದರೆ ಅದರ ಕಾರ್ಯನಿರ್ವಹಣಾ ಶಕ್ತಿ ಕುಂದುತ್ತದೆ.

Chocolate : ಆಯುರ್ವೇದ ಹೆಸರಲ್ಲಿ ಗಾಂಜಾ ಚಾಕಲೇಟ್…! ಮಕ್ಕಳೇ ಇವರ ಟಾರ್ಗೆಟ್ ..?!

Rahul Gandhi : ನಾನು ಕ್ಷಮೆಯಾಚಿಸಲ್ಲ : ರಾಗಾ ಖಡಕ್ ನಿರ್ಧಾರ

Siddaramaiah : ರಾಜನಾಥ್ ಸಿಂಗ್ ಭೇಟಿಯಾದ ಸಿಎಂ ಸಿದ್ದರಾಮಯ್ಯ…!

- Advertisement -

Latest Posts

Don't Miss