ಇನ್ಮುಂದೆ ಫೋಟೋಶೂಟ್, ವೀಡಿಯೋ ಶೂಟ್‌ಗೆ ಹೆಚ್ಚು ರೇಟ್..

Hubballi news: ಹುಬ್ಬಳ್ಳಿ: ಹುಬ್ಬಳ್ಳಿ ಫೋಟೋ ಹಾಗೂ ವಿಡಿಯೋಗ್ರಾಫರ್ ಅಸೋಸಿಯೇಶನ್ ವತಿಯಿಂದ ತಮ್ಮ ಛಾಯಾ ವೃತ್ತಿಯ ಬೆಲೆಗಳನ್ನು ಪರಿಷ್ಕರಿಸಿ ಹೆಚ್ಚಳ ಮಾಡಲಾಗಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಹುಬ್ಬಳ್ಳಿ ಫೋಟೋ ಮತ್ತು ವಿಡಿಯೋಗ್ರಾಫರ ಸಂಘದ ಅಧ್ಯಕ್ಷ ಕಿರಣ್ ಬಾಕಳೆ ಹೇಳಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಛಾಯಾವೃತ್ತಿಯ ಉಪಕರಣಗಳು, ಲೆನ್ಸ್, ಡಿಜಿಟಲ್ ಕ್ಯಾಮರಾ ಹಾಗೂ ಇನ್ನಿತರ ಸಾಮಗ್ರಿಯ ಬೆಲೆಗಳಲ್ಲಿ ಭಾರಿ ಏರಿಕೆಯಾಗಿದ್ದರಿಂದ ಸಂಘದ ಕೋರಿಕೆಯನ್ನು ಪರಿಗಣಿಸಿ ಸಂಘದ ಸಭೆಯಲ್ಲಿ ಬೆಲೆಗಳನ್ನು ಏರಿಸುವ ನಿರ್ಧಾರ ಮಾಡಲಾಗಿದೆ ಎಂದರು.

ಛಾಯಾ ವೃತ್ತಿಯ ಎಲ್ಲಾ ಬೆಲೆಗಳ ದರಪಟ್ಟಿಯನ್ನು ತಿಳಿದುಕೊಳ್ಳಲು ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ತಿಳಿದುಕೊಳ್ಳಬಹುದಾಗಿದೆ ಎಂದರು. ಸಾರ್ವಜನಿಕರು ಬುಕ್ಕಿಂಗ್ ಮಾಡುವಾಗ ಛಾಯಾಗ್ರಾಹಕನ ಸಂಘದ ಸದಸ್ಯರ ಗುರುತಿನ ಪತ್ರವನ್ನು ಪರಿಶೀಲಿಸಿ ಖಚಿತ ಪಡಿಸಿಕೊಂಡು ಗುಣಮಟ್ಟದ ಕೆಲಸವನ್ನು ತಗೆದುಕೊಳ್ಳಬಹುದಾಗಿದೆ‌. ಎಂದ ಅವರು ಗುರುತಿನ ಪತ್ರವಿಲ್ಲದ ಛಾಯಾಗ್ರಾಹಕನಿಂದ ತಗೆದುಕೊಂಡ ಕೆಲಸಗಳಿಗೆ ಸಂಘವು ಸ್ಪಂದಿಸುವುದಿಲ್ಲ ಸಂಘ ತಿಳಿಸಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷರಾದ ದಿನೇಶ್ ದಾಬಡೆ, ಕಾರ್ಯದರ್ಶಿಯಾದ ರವೀಂದ್ರ ಕಾಟೀಗರ ಹಾಗೂ ಖಜಾಂಚಿಯಾದ ಅನಿಲ ತುರಮರಿ ಸೇರಿದಂತೆ ಉಪಸ್ಥಿತರಿದ್ದರು.

ಗುತ್ತಿಗೆದಾರರು ಬೇರೆ ನಾಯಕರ ಭೇಟಿ ಮಾಡೋದನ್ನು ತಡೆಯಲಾಗದು: ಡಿಸಿಎಂ ಡಿ.ಕೆ. ಶಿವಕುಮಾರ್

‘ಕೆಂಪಣ್ಣನವರ ಕೃಪಾಕಟಾಕ್ಷದಿಂದಲೇ ಅಧಿಕಾರಕ್ಕೆ ಬಂದಿದ್ದೀರಿ. ಈಗ ಅವರನ್ನೇ ಬೆಂಕಿಗೆ ಹಾಕಲು ಹೊರಟಿದ್ದೀರಿ’

ಭಗವಂತನನ್ನು ಪ್ರಶ್ನೆ ಮಾಡಲಾಗದು, ಆದರೆ ಸ್ಪಂದನಾ ಸಾವು ಘೋರ ಅನ್ಯಾಯ: ಡಿಸಿಎಂ ಡಿ.ಕೆ. ಶಿವಕುಮಾರ್

About The Author