ಕುಸ್ತಿಪಟು ಕ್ರೀಡೆಯಲ್ಲಿ ದೆಹಲಿ ಸ್ಪೋರ್ಟ್ಸ್ ಯುನಿವರ್ಸಿಟಿಗೆ ಧಾರವಾಡದ ಯುವಕ..

Hubballi News: ಹುಬ್ಬಳ್ಳಿ: ವಾಯುಪುತ್ರ ಸ್ಪೋರ್ಟ್ ಫೌಂಡೇಶನ್ ಮತ್ತು ಶ್ರೀ ಶಂಕ್ರಣ್ಣ ಚಿಲ್ಲಣ್ಣವರ ಸಂಯುಕ್ತಾಶ್ರಯದಲ್ಲಿ ದೆಹಲಿ ಸ್ಪೋರ್ಟ್ಸ್ ಯೂನಿವರ್ಸಿಟಿಗೆ ಆಯ್ಕೆಯಾದ ಕು. ಮಡಿವಾಳೇಶ ಅಶೋಕ ಚಿಲ್ಲಣ್ಣವರರಿಂದ ಗುರುವಂದನಾ ಕಾರ್ಯಕ್ರಮವನ್ನು ನಗರದ ಉಣಕಲ್ ನ ಕಲ್ಮೇಶ್ವರ ಓಣಿಯ ಶ್ರೀ ಕಲ್ಮೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಅಗಷ್ಟ್ ೧೨ ರಂದು ಬೆಳಿಗ್ಗೆ ೧೨ ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ವಾಯುಪುತ್ರ ಸ್ಪೋರ್ಟ್ಸ್ ಫೌಂಡೇಶನ್ ಅಧ್ಯಕ್ಷರಾದ ಸಂತೋಷ್ ಇಂಚಲ ಹೇಳಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಯುಪುತ್ರ ಸ್ಪೋರ್ಟ್ಸ್ ಫೌಂಡೇಶನ್ ವತಿಯಿಂದ ಸಾಕಷ್ಟು ಕ್ರೀಡೆಗಳು‌ ನಡೆದಿವೆ. ಈ ನಿಟ್ಟಿನಲ್ಲಿ ಕರ್ನಾಟಕದ ೩ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಧಾರವಾಡ ಜಿಲ್ಲೆಯಿಂದ ಒಬ್ಬ ವಿದ್ಯಾರ್ಥಿಯು ಕುಸ್ತಿಪಟು ಕ್ರೀಡೆಯಲ್ಲಿ ದೆಹಲಿ ಸ್ಪೋರ್ಟ್ಸ್ ಯುನಿವರ್ಸಿಟಿಗೆ ಆಯ್ಕೆಯಾಗಿದ್ದು ಖುಷಿಯ ಸಂಗತಿ ಎಂದರು.

ಹಾಗೇಯೇ ಅನೇಕ ಕುಸ್ತಿಪಟುಗಳು ಬೆಳೆಯಲಿ ಹಾಗೂ ರಾಜ್ಯ ಹಾಗೂ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಲಿ ಎಂದರು. ಅಶೋಕ ಚಿಲ್ಲಣ್ಣವರ, ಶ್ರೀನಿವಾಸ ಶಾಸ್ತ್ರಿ, ಸಿದ್ದು ಮಾಯಣ್ಣವರ ಉಪಸ್ಥಿತರಿದ್ದರು.

ಗುತ್ತಿಗೆದಾರರು ಬೇರೆ ನಾಯಕರ ಭೇಟಿ ಮಾಡೋದನ್ನು ತಡೆಯಲಾಗದು: ಡಿಸಿಎಂ ಡಿ.ಕೆ. ಶಿವಕುಮಾರ್

‘ಕೆಂಪಣ್ಣನವರ ಕೃಪಾಕಟಾಕ್ಷದಿಂದಲೇ ಅಧಿಕಾರಕ್ಕೆ ಬಂದಿದ್ದೀರಿ. ಈಗ ಅವರನ್ನೇ ಬೆಂಕಿಗೆ ಹಾಕಲು ಹೊರಟಿದ್ದೀರಿ’

ಭಗವಂತನನ್ನು ಪ್ರಶ್ನೆ ಮಾಡಲಾಗದು, ಆದರೆ ಸ್ಪಂದನಾ ಸಾವು ಘೋರ ಅನ್ಯಾಯ: ಡಿಸಿಎಂ ಡಿ.ಕೆ. ಶಿವಕುಮಾರ್

About The Author