Hubballi News: ಹುಬ್ಬಳ್ಳಿ: ಮಳೆ ಕಡಿಮೆಯಾದ ಕಾರಣ, ಕೆರೆ ಬತ್ತಿ ಹೋಗುವ ಆತಂಕದಲ್ಲಿ ಹುಬ್ಬಳಿಯ ಹಲವು ಗ್ರಾಮದ ಜನರಿದ್ದಾರೆ. 14 ಗ್ರಾಮಗಳಿಗೆ ನೀರಿನ ಹಾಹಾಕಾರ ಬಂದೊದಗುವ ಆತಂಕವಿದ್ದು, ಹುಬ್ಬಳ್ಳಿ ತಾಲೂಕಿನ ಕಿರೆಸೂರು ಗ್ರಾಮದ ಬಳಿ ಇರುವ ಕೆರೆ ಬತ್ತಿ ಹೋಗುತ್ತಿದೆ.
ಸುಮಾರು 20 ಎಕರೆ ಪ್ರದೇಶದಲ್ಲಿ ಈ ಕೆರೆ ಇದ್ದು, ಕುಂದಗೋಳ ತಾಲೂಕಿನ ಹದಿನಾಲ್ಕು ಗ್ರಾಮಗಳಿಗೆ ಇದೇ ಕೆರೆಯಿಂದ ನೀರು ಸರಬರಾಜು ಆಗುತ್ತಿತ್ತು. ಬಹು ಗ್ರಾಮ ಯೋಜನೆಯಡಿ ಕುಡಿಯುವ ನೀರಿನ ಕೆರೆ ನಿರ್ಮಾಣವಾಗಿದ್ದು, ಕುಂದಗೋಳ ತಾಲೂಕಿನ ಯರಿನಾರಾಯಣಪುರ ಗ್ರಾಮ ಸೇರಿದಂತೆ ಹದಿನಾಲ್ಕು ಗ್ರಾಮಗಳಿಗೆ ಇದೇ ಕೆರೆಯಿಂದ ನೀರು ಹೋಗುತ್ತಿತ್ತು.
ಈ ಬಾರಿ ಮಳೆ ಕಡಿಮೆ ಇರುವ ಹಿನ್ನೆಲೆ, ಈ ರೀತಿಯಾಗಿ ಕೆರೆಗಳು ಬತ್ತಿ ಹೋಗುತ್ತಿದೆ. ಕೆಲ ದಿನಗಳ ಹಿಂದೆ ಚೆನ್ನಾಗಿ ಮಳೆ ಸುರಿದಾಗ, ಮಲಪ್ರಭಾ ಕಾಲುವೆ ಮೂಲಕ ಕೆರೆ ಭರ್ತಿಯಾಗಿತ್ತು. ವರ್ಷಕ್ಕೆ ಮೂರು ಬಾರಿ ಕಾಲುವೆಯಿಂದ ನೀರು ಹರಿ ಬಿಡಲಾಗುತ್ತಿತ್ತು. ಆದರೆ ಮಳೆ ಕಡಿಮೆಯಾದ ಕಾರಣ, ಕಾಲುವೆಗೆ ಈ ಬಾರಿ ನೀರು ಸರಿಯಾಗಿ ಬಿಡುತ್ತಿಲ್ಲ. ಇನ್ನು ಸುಮಾರು 15 ದಿನಗಳವರೆಗೆ ಪೂರೈಸುವಷ್ಟು ಮಾತ್ರ ನೀರು ಶೇಖರಣೆಯಾಗಿದೆ. ಇದಾದ ಬಳಿ ಗ್ರಾಮಗಳಿಗೆ ನೀರು ಇಲ್ಲದೇ, ನೀರಿನ ತತ್ವಾರ ಸೃಷ್ಟಿಯಾಗುವ ಭೀತಿ ಇದೆ.
ಒಂದೆಡೆ ನೀರು ಖಾಲಿಯಾಗುವ ಆತಂಕ ಇದ್ರೆ, ಇನ್ನೊಂದೆಡೆ ಕೊಳಚೆ ನೀರು ಸರಬರಾಜು ಆರೋಪವಿದ್ದು, ಕಳೆದ ಕೆಡಿಪಿ ಸಭೆಯಲ್ಲೂ ಈ ಬಗ್ಗೆ ಪ್ರಸ್ತಾಪ ಮಾಡಲಾಗಿತ್ತು. ಈ ಕೆರೆ ಸಂಪೂರ್ಣ ಕೊಳಚೆಯಿಂದ ಕೂಡಿದ್ದು, ಬಿಯರ್ ಬಾಟಲಿಗಳು ಬಿದ್ದಿದೆ. ಹಾಗಾಗಿ ನೀರನ್ನು ಸರಿಯಾಗಿ ಶುದ್ಧಗೊಳಿಸದೇ, ಗ್ರಾಮಗಳಿಗೆ ನೀರು ಸರಬರಾಜು ಮಾಡುವ ಆರೋಪ ಮಾಡಲಾಗಿದೆ.
ಅಲ್ಲದೇ, ಇಷ್ಟು ದೊಡ್ಡ ಕೆರೆಗೆ ಕೇವಲ ಒಂದೇ ಫಿಲ್ಟರ್ ಮಾಡುವ ಟ್ಯಾಂಕ್ ಇದ್ದು, ಆದರೂ ಅಷ್ಟೊಂದು ನೀರನ್ನು ಶುದ್ದಿಗೊಳಿಸುವ ಸಾಮರ್ಥ್ಯ ಇದೆ ಅಂತಾ ಅಧಿಕಾರಿಗಳು ಹೇಳುತ್ತಾರೆ. ಲ್ಯಾಬೋರೆಟರಿಯಲ್ಲಿ ನೀರಿನ ಗುಣಮಟ್ಟ ಚೆನ್ನಾಗಿದೆ. ಆದರೂ ಲ್ಯಾಮ್ ಲ್ಯಾಕ್ ಕ್ಲಾರಿಫೈಯರ್ ಹಾಕಲು 2.50 ಕೋಟಿ ಕೂಡ ಸ್ಯಾಕ್ಷನ್ ಆಗಿದೆ. ಆದಷ್ಟು ಬೇಗ ಅದನ್ನು ಕೂರಿಸುವ ಕೆಲಸ ಮಾಡ್ತೇವೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಹೇಳಿದ್ದಾರೆ.
ನೀರು ಸರಬರಾಜಿಗೆ ಕುಂದಗೋಳದ ಜಿಲ್ಲಾ ಪಂಚಾಯತ್ ಅಧಿಕಾರಿಗಳಿಂದ, ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ. ನೀರು ಬಿಡುತ್ತೇವೆ ಎಂದು ಜನಪ್ರತಿನಿಧಿಗಳು ಭರವಸೆ ಕೂಡ ಕೊಟ್ಟಿದ್ದಾರೆ.
ಪ್ರತಿಪಕ್ಷದ ನಾಯಕನ ಸ್ಥಾನ ಆಗಸ್ಟ್ 15 ರ ನಂತರ ತೀರ್ಮಾನ: ಬಸವರಾಜ ಬೊಮ್ಮಾಯಿ
ಆ. 27 ರಂದು ಏಕಕಾಲದಲ್ಲಿ 11 ಸಾವಿರ ಕಡೆ ಗೃಹಲಕ್ಷ್ಮಿ ಯೋಜನೆಗೆ ಚಾಲನೆ: ಡಿ.ಕೆ. ಶಿವಕುಮಾರ್
‘ರಾಹುಲ್ ಗಾಂಧಿ ಮಧ್ಯಪ್ರವೇಶಿಸಲಿ: ಇಲ್ಲದಿದ್ದರೆ ಕರ್ನಾಟಕ ಎಟಿಎಂ ಅಂತ ಸಾಬೀತು’