Tuesday, March 11, 2025

Latest Posts

Jagadish Shetter: ಇದೆಲ್ಲ ಬಿಜೆಪಿ ಸರ್ಕಾರದಲ್ಲಿನ ರಾಡಿ. ಕಾಂಗ್ರೆಸ್ ಸರ್ಕಾರದ ಯಾವುದೇ ರಾಡಿ ಇಲ್ಲ…!

- Advertisement -

ಹುಬ್ಬಳ್ಳಿ: ಇದು ಕಾಂಗ್ರೆಸ್ ಕಾರ್ಬನ್ ಕಾಪಿ ಎಂದ ಜಗದೀಶ್ ಶೆಟ್ಟರ್. ಪೇ ಸಿಎಮ್ ಗೆ ಅರ್ಥನೆ ಇಲ್ಲ.ಜನ‌ ನಂಬಲ್ಲ ಎಂದ ಜಗದೀಶ್ ಶೆಟ್ಟರ್. ಪೇ ಸಿಎಮ್ ಅವತ್ತಿಗೆ ಲೇಟೆಸ್ಟ್. ಕಾಂಗ್ರೆಸ್ ನವರು ಮಾಡಿದ್ದನ್ನೆ ಕಾಪಿ ಮಾಡೋಕೆ ಹೊರಟಿದ್ದಾರೆ ಜನ ನಂಬಲ್ಲ.ಬಿಜೆಪಿ  ಸರ್ಕಾರ ಬಂದ ನಾಲ್ಕು ವರ್ಷಗಳ ಬಳಿಕ ಅಭಿಯಾನ ಆರಂಭವಾಗಿತ್ತು.

ಆದ್ರೆ ಮೂರು ತಿಂಗಳಲ್ಲಿ ಬಿಜೆಪಿಯವರು ಮಾಡ್ತಾರೆ  ಅಂದ್ರೆ ಅದಕ್ಕೆ ಅರ್ಥ ಇಲ್ಲ. ಬಿಜೆಪಿಯಲ್ಲಿದ್ದಾಗ ಎಲ್ಲ‌ ವಿಷಯಗಳನ್ನು ನಾನು ಕೋರ್ ಕಮಿಟಿಯಲ್ಲಿ ಹೇಳಿದ್ದೆ. ಹೊರಗಡೆ ಹೇಳೋಕೆ ಆಗದ ವಿಷಯವನ್ನು ಹೇಳಿದ್ದೆ ಆದ್ರೆ ಅವರು ತಿಳಿದುಕೊಳ್ಳಲಿಲ್ಲ.

ದೆಹಲಿಗೆ ನಾನು ಹೋಗಿದ್ದೆ. ಖುದ್ದು ರಾಹುಲ್ ಗಾಂಧಿ ಮೂರು ಗಂಟೆ ನಮ್ಮ ಜೊತೆ ಚರ್ಚೆ ಮಾಡಿದ್ರು. ಲೋಕಸಭೆಯಲ್ಲಿ ಹೇಗೆ ನಾವು ಗೆಲ್ಲಬೇಕು ಅನ್ನೋ ಚರ್ಚೆ ಆಯ್ತು. ಗ್ಯಾರಂಟಿ ಅನುಷ್ಠಾನದ ಬಗ್ಗೆಯೂ ಚರ್ಚೆ ಆಯ್ತು ರಾಜ್ಯ ರಾಜಕಾರಣದ ಅವಲೋಕನ ರಾಹುಲ್ ಗಾಂಧಿ ತಿಳಿದುಕೊಂಡರು.ಯಾವ ಟಾಸ್ಕ್ ಕೊಟ್ಟಿಲ್ಲ.ಕೆಲ ವಿಚಾರಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಎಲ್ಲರದ್ದೂ ಒಂದೇ ಲೋಕಸಭೆಯಲ್ಲಿ ನಾವು 15 ರಿಂದ 20 ಸೀಟ್ ಗೆಲ್ಲಬೇಕು. ಬಿಜೆಪಿ ದಿನದಿಂದ ದಿನಕ್ಕೆ ತನ್ನ ಅಸ್ತಿತ್ವ ಕಳೆದುಕೊಳ್ತಿದೆ. ಲೀಡರ್ ಲೆಸ್ ಪಾರ್ಟಿ ಆಗಿದೆ.ಮೂರು ತಿಂಗಳಿದಾರೂ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲಾಗ್ತಿಲ್ಲ.ಬಿಜೆಪಿ ದಯನೀಯ ಪರಸ್ಥಿತಿ ಬಗ್ಗೆಯೂ ಚರ್ಚೆ ಆಯ್ತು.

ನಾನು ಯಾವುದೇ ಕಂಡೀಷನ್ ಹಾಕಿಲ್ಲ..ನಾನು ನನಗೆ ಸೀಟ್ ಬೇಕು ಯಾವ ಬೇಡಿಕೆಯನ್ನು ಹಾಕಿಲ್ಲ. ಬಿಜೆಪಿ ಮಾಜಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಚರ್ಚೆ ಆಗಿಲ್ಲ.ಬೊಮ್ಮಾಯಿ ಅವರಿದ್ದಾಗ ಬೇಕಾಬಿಟ್ಟಿ ಕಾಮಗಾರಿ ಮಂಜೂರು ಮಾಡಿದ್ರು. ಇದಕ್ಕೆ ಹಣಕಾಸು ಇಲಾಖೆ ಒಪ್ಪಿಗೆ ಇರಲಿಲ್ಲ. ಸರ್ಕಾರ ಬಂದು ಮೂರು ತಿಂಗಳಾಗಿದೆ. ಗುತ್ತಿಗೆದಾರರ ಬಿಲ್ ಬಾಕಿ ಇರೋದು ಕಳೆದ ಸರ್ಕಾರದ್ದು..

ಇವಾಗ ಆಪಾದನೆ ಮಾಡೋದು ದುರುದ್ದೇಶದಿಂದ. ಇದರಲ್ಲಿ ಯಾವುದೇ ಸತ್ಯಾಂಶ ಇಲ್ಲ. ಬಿಜೆಪಿ ಸರ್ಕಾರದಲ್ಲಿನ ರಾಡಿ. ಸಿದ್ದರಾಮಯ್ಯ ಸರ್ಕಾರದಲ್ಲಿ ಯಾವುದೇ ಕಾಮಗಾರಿ ಬಾಕಿ‌ ಇಲ್ಲ.ಬಿಜೆಪಿ‌ ಸರ್ಕಾರದ ರಾಡಿನೇ ಇದೆಲ್ಲ ಎಂದು ಶೆಟ್ಟರ್ ವಾಗ್ದಾಳಿ ಮಾಡಿದರು.

Instagramನಲ್ಲಿ ಹವಾ ಮೆಂಟೇನ್ ಮಾಡಿದ ಕೊಹ್ಲಿ: ಒಂದು ಪೋಸ್ಟ್‌ಗೆ ಕೋಟಿ ಕೋಟಿ ಹಣ..

ಕೊಂಬಿನಿಂದ ತಿವಿದು ಬಾಲಕಿಯನ್ನು ಬಿಸಾಕಿದ ಹಸು- ವೀಡಿಯೋ ವೈರಲ್

Viral video: ಬಿಜೆಪಿ ಮಹಿಳಾ ನಾಯಕಿಯ ಪಲ್ಲಂಗದಾಟದ ವೀಡಿಯೋ ವೈರಲ್

 

- Advertisement -

Latest Posts

Don't Miss