ಜೂಮ್ ಆಪ್ ಸೇಫ್ ಅಲ್ಲ, ಬಳಸೋಕು ಮುನ್ನ ಎಚ್ಚರ ಎಚ್ಚರ..!

ಕರ್ನಾಟಕ ಟಿವಿ : ಕಳೆದ ಒಂದೆರಡು ತಿಂಗಳಿನಿಂದ ಜೂಮ್ ಆಪ್ ಭಾರತದಲ್ಲಿ ಮಿಲಿಯನ್ ಗಟ್ಟಲೇ ಡೌನ್ ಲೋಡ್ ಆಗಿದೆ.. ಲಾಕ್ ಡೌನ್ ಹಿನ್ನೆಲೆ ಬಹುತೇಕ ಕಂಪನಿಗಳು ಟ್ರೈನಿಂಗ್ ಸೆಂಟರ್ ಗಳು ಜೂಮ್ ಮೂಲಕವೇ ವಿಡಿಯೋ ಕಾನ್ಫರೆನ್ಸ್ ಮಾಡ್ತಿದ್ದಾರೆ.. ತರಗತಿಗಳನ್ನ ನಡೆಸ್ತಿದ್ದಾರೆ.. ಆದ್ರೆ ಜೂಮ್ ಆಪ್ ಸೇಫ್ ಅಲ್ಲ ಅಂತ ಕೇಂದ್ರ ಸರ್ಕಾರ ಹೇಳ್ತಿದೆ. ಬಳಕೆದಾರರ ಡೇಟಾ ಸೇಫಲ್ಲದ ಕಾರಣ ಹಲವು ಬಾರಿ ಜೂಮ್ ಕಂಪನಿಗೆ ಕೇಂದ್ರ ಸರ್ಕಾರ ನೋಟಿ ಸ್ ನೀಡಿದ್ರು ಯಾವುದೇ ಉತ್ತರ ಬಂದಿಲ್ಲ, ಹೀಗಾಗಿ ಜೂಮ್ ಆಪ್ ಬಳಕೆಗೆ ಯೋಗ್ಯವಲ್ಲ, ಸುರಕ್ಷಿತವಲ್ಲ ಅಂತ ಕೇಂದ್ರ ಸರ್ಕಾರ ಹೇಳಿದೆ. ಹೀಗಾಗಿ ಜೂಮ್ ಆಪ್ ಬಳಸೋರು ಮತ್ತೊಂದು ಸಾರಿ ಯೋಜನೆ ಮಾಡೋದು ಒಳ್ಳೆಯದು

https://www.youtube.com/watch?v=0S_Dtq5-Z3Q

ಇದರ ಬಗ್ಗೆ  ಹೆಚ್ಚಿನ ಮಾಹಿತಿಗಾಗಿ ಗೂಗಲ್ ನಲ್ಲಿ ಜೂಮ್ ನ್ಯೂಸ್ ಎಂದು ಸರ್ಚ್ ಮಾಡಿ ನ್ಯೂಸ್ ವಿಭಾಗದಲ್ಲಿ ನೋಡಿ ಹಾಗೆಯೇ ಈ ವಿಡಿಯೋ  ನೋಡಿ ನಿಮಗೆ  ಹೆಚ್ಚಿನ ಮಾಹಿತಿ ಸಿಗುತ್ತದೆ..

ಪ್ರವೀಣ್ ಕುಮಾರ್ ಜಿಟಿ, ಕರ್ನಾಟಕ ಟಿವಿ,

About The Author