Chanakya Neeti: ನಾವು ಬೆಳಿಗ್ಗೆ ಎದ್ದ ತಕ್ಷಣ ಹೇಗಿರುತ್ತೇವೋ, ಅದೇ ರೀತಿ ನಮ್ಮ ಇಡೀ ದಿನ ಇರುತ್ತದೆ. ಹಾಗಾಗಿ ನಮ್ಮ ಮುಂಜಾನೆ ಉತ್ತಮವಾಗಿರಬೇಕು ಅಂತಾರೆ ಚಾಣಕ್ಯರು. ಹಾಗಾದ್ರೆ ನಾವು ಯಾವ ತಪ್ಪುಗಳನ್ನು ಮುಂಜಾನೆ ಮಾಡಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಹರಿಭರಿಯಲ್ಲಿ ದಿನ ಶುರು ಮಾಡಬೇಡಿ: ಬೆಳಿಗ್ಗೆ ಎದ್ದ ತಕ್ಷಣ, ಹರಿಭರಿಯಾಗಿ ದಿನ ಶುರು ಮಾಡಲೇಬೇಡಿ. ಬೆಳಿಗ್ಗೆ ಎದ್ದ ತಕ್ಷಣ ಮಲಗಿದ್ದಲ್ಲೇ, 2 ನಿಮಿಷ ಸರಿಯಾಗಿ ಕಣ್ಣು ಬಿಡಿ. ನಿಧಾನವಾಗಿ ಎದ್ದು ಕುಳಿತು 5 ನಿಮಿಷ ಧ್ಯಾನ ಮಾಡಿ. ನಿಮ್ಮಿಷ್ಟದ ದೇವರನ್ನು ನೆನೆಸಿಕ“ಳ್ಳಿ. ಬಳಿಕ ಎದ್ದು ಸ್ನಾನಾದಿಗಳನ್ನು ಮಾಡಿ. ಪೂಜೆ ಪುನಸ್ಕಾರದ ಬಳಿಕ ಆರೋಗ್ಯಕರ ಆಹಾರ ಸೇವನೆ ಮಾಡಿ. ಇದನ್ನು ನಿಮ್ಮ ದಿನದ ಶುರುವಾಗಿರಬೇಕು. ನಿಮ್ಮ ದಿನ ಇಷ್ಟು ತಾಳ್ಮೆಯಿಂದ ಶುರುವಾದರೆ, ನಿಮ್ಮ ಇಡೀ ದಿನ ಉತ್ತಮವಾಗಿರುತ್ತದೆ.
ಜಗಳವಾಡುತ್ತಲೇ ಏಳಬೇಡಿ: ಯಾವುದೋ ಕಾರಣಕ್ಕೆ ಮನೆಯಲ್ಲಿ ಬೆಳ್ಳಂಬೆಳಿಗ್ಗೆ ಮಾತು ಶುರುವಾಗಬಹುದು. ನಿಮ್ಮ ನೆಮ್ಮದಿ ಹಾಳು ಮಾಡಲು, ಎದುರಿನವರು ನಿಮ್ಮನ್ನು ಟ್ರಿಗರ್ ಮಾಡುವ ಪ್ರಯತ್ನ ಮಾಡಬಹುದು. ಆ ಸಮಯದಲ್ಲಿ ನೀವು ತಾಳ್ಮೆಯಿಂದ ವರ್ತಿಸಿ. ಶಾಂತವಾಗಿರಿ. ನಿಮ್ಮ ಮನಸ್ಸನ್ನು ಹಾಳು ಮಾಡುವ ಮಾತನ್ನು ನಿರ್ಲಕ್ಷಿಸಿ.
ತಿಂಡಿ ರುಚಿಯಾಗಿಲ್ಲವೆಂದು ಅಗೌರವ ತೋರಬೇಡಿ: ಪ್ರತಿದಿನ ಅಡುಗೆ ಮಾಡುವ ಮನೆಯ ಹೆಂಗಸರು 1 ದಿನ ಸರಿಯಾಗಿ ಅಡಿಗೆ ಮಾಡಿಲ್ಲವೆಂಬ ಕಾರಣಕ್ಕೆ, ತಿಂಡಿ ಸರಿಯಾಗಿಲ್ಲ. ನಿಮಗೆ ಮಾಡಲು ಬರುವುದೇ ಇಲ್ಲವೆಂದು ಬೈಯ್ಯಬೇಡಿ. ಇದರಿಂದ ನಿಮ್ಮ ದಿನವೂ ಹಾಳು, ಅವರ ದಿನವೂ ಹಾಳಾಗುತ್ತದೆ. ಅದರ ಬದಲು ಬೇರೆ ಉಪಾಯ ಮಾಡಿ, ಹಸಿವಿನ ನಿಮ್ಮನ್ನು ನೀವು ಕಾಪಾಡಿ.




