Vidur Neeti: ಇಂಥವರ ಮನೆಯಲ್ಲಿ ಮಾತ್ರ ಲಕ್ಷ್ಮೀ ನೆಲೆಸುತ್ತಾಳೆ ಅಂತಾರೆ ವಿದುರರು

Vidur Neeti: ಇನ್ನೇನು ಕೆಲವೇ ದಿನಗಳಲ್ಲಿ ದೀಪಾವಳೆ ಬಂದೇ ಬಿಡುತ್ತದೆ. ಲಕ್ಷ್ಮೀ ನಮ್ಮ ಮನೆಯಲ್ಲಿ ನೆಲೆಸಲಿ ಎಂದು ಜನ ಭಕ್ತಿಯಿಂದ ಪೂಜಿಸುತ್ತಾರೆ. ಆದರೆ ಪೂಜಿಸಿದರೆ ಸಾಕಾಗುವುದಲ್ಲಿ. ಬದಲಾಗಿ ನಾವು ನಮ್ಮ ಜೀವನದಲ್ಲಿ ಕೆಲ ನಿಯಮಗಳನ್ನು ಪಾಲಿಸಬೇಕು ಅಂತಾರೆ ವಿದುರರು. ಹಾಗಾದ್ರೆ ಯಾವುದು ಆ ಕೆಲಸ ಅಂತಾ ತಿಳಿಯೋಣ ಬನ್ನಿ.

ಇಂದ್ರಿಯಗಳನ್ನು ನಿಯಂತ್ರಿಸುವವರು: ಯಾವ ವ್ಯಕ್ತಿಗೆ ತನ್ನ ಇಂದ್ರಿಯಗಳನ್ನು ನಿಯಂತ್ರಿಸುವ ಶಕ್ತಿ ಇರುತ್ತದೆಯೋ, ಅಂಥ ವ್ಯಕ್‌ತಿಯ ಮೇಲೆ ಸದಾ ಲಕ್ಷ್ಮೀ ದೇವಿಯ ಕೃಪೆ ಇರುತ್ತದೆ ಅಂತಾರೆ ವಿದುರರು. ಏಕೆಂದರೆ ಯಾರು ಇಂದ್ರಿಯಗಳ ಮೇಲೆ ನಿಯಂತ್ರಣ ಇರಿಸಿರುವುದಿಲ್ಲವೋ, ಅಂಥ ವ್ಯಕ್ತಿ ಮುಂದೆ 1 ದಿನ ಸಮಸ್ಯೆಗೆ ಸಿಲುಕಿ, ತನ್ನೆಲ್ಲ ಹಣಗಳನ್ನು ಕಳೆದುಕ“ಳ್ಳುತ್ತಾನೆ. ಹಾಗಾಗಿ ಇಂದ್ರಿಯಗಳನ್ನು ನಿಯಂತ್ರಿಸುವವರ ಬಳಿ ಮಾತ್ರ ಲಕ್ಷ್ಮೀ ನೆಲೆಸಿರುತ್ತಾಳೆ.

ಜೀವನದಲ್ಲಿ ದಯೆ ಇರಲಿ: ಯಾರಿಗೆ ಕರುಣೆ, ದಯೆ ಇರುವುದಿಲ್ಲವೋ, ಅಂಥ ಸ್ಥಳದಲ್ಲಿ ಲಕ್ಷ್ಮೀ ಎಂದಿಗೂ ನೆಲೆಸಲು ಸಾಧ್ಯವಿಲ್ಲ. ಸಂಬಂಧದಲ್ಲಿ ದಯೆ ಇರಬೇಕು. ಮೂಕ ಪ್ರಾಣಿಗಳ ಬಗ್ಗೆ ದಯೆ ಇರಬೇಕು. ಅನಾರೋಗ್ಯ ಪೀಡಿತರ ಬಗ್ಗೆ ದಯೆ ಇರಬೇಕು. ಇಲ್ಲವಾದಲ್ಲಿ ಲಕ್ಷ್ಮೀ ದೇವಿಯ ಕೃಪೆ ಎಂದಿಗೂ ಇರಲು ಸಾಧ್ಯವಿಲ್ಲ ಅಂತಾರೆ ವಿದುರರು.

ಯಾರನ್ನೂ ದ್ವೇಷಿಸಬೇಡಿ: ನಿಮ್ಮ ಮನಸ್ಸಿನಲ್ಲಿ ದ್ವೇಷವಿದ್ದಲ್ಲಿ, ನೀವೆಂದೂ ನಿಮ್ಮ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುವುದಿಲ್ಲ. ಏಕೆಂದರೆ ದ್ವೇಷವಿರುವ ಮನುಷ್ಯನಿಗೆ ಎಂದಿಗೂ ಮಾನಸಿಕ ನೆಮ್ಮದಿ ಇರಲು ಸಾಧ್ಯವಿಲ್ಲ. ಅಂಥ ಮನುಷ್ಯರು ಏಕಾಗೃತೆಯಿಂದ, ತಾಳ್ಮೆಯಿಂದ ಇರಲು ಸಾಧ್ಯವಿಲ್ಲ. ಹಾಗಾಗಿ ಇಂಥವರ ಬಳಿ ಲಕ್ಷ್ಮೀ ನೆಲೆಸಲು ಸಾಧ್ಯವೇ ಇಲ್ಲ.

ತಾಳ್ಮೆ ಇರಲಿ: ತಾಳ್ಮೆ ಇರುವವರು ಜಗತ್ತನ್ನೇ ಗೆಲ್ಲಬಹುದಂತೆ. ಹಾಗಾಗಿ ತಾಳ್ಮೆ ಇದ್ದವರು ಯಾವುದೇ ವಿಷಯದಲ್ಲಾದರೂ ಗೆದ್ದೇ ಗೆಲ್ಲುತ್ತಾರೆ. ಮತ್ತು ಇಂಥವರ ಜೀವನದಲ್ಲಿ ಲಕ್ಷ್ಮೀ ಸದಾ ನೆಲೆಸಿರುತ್ತಾಳೆ ಅಂತಾರೆ ವಿದುರರು.

 

About The Author