Tuesday, August 5, 2025

Latest Posts

ಮಳೆ ಬಾರದೇ ಬಿರುಕು ಬಿಟ್ಟ ಭೂಮಿ, ಕಂಗಾಲಾದ ರೈತ: ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ..

- Advertisement -

Hubballi News: ಹುಬ್ಬಳ್ಳಿ: ಈ ವರ್ಷ ಹೆಚ್ಚು ಮಳೆ ಬಾರದ ಕಾರಣ, ಬೆಳೆಯೂ ಆಗುತ್ತಿಲ್ಲ. ಈ ಕಾರಣಕ್ಕೆ ಭೂಮಿ ಬಿರುಕು ಬಿಟ್ಟು, ಬೆಳೆ ಒಣಗುತ್ತಿದೆ. ಈ ಕಾರಣಕ್ಕೆ ರೈತ ಕಂಗಾಲಾಗಿದ್ದು, ಧಾರವಾಡದ ರೈತರಿಗೆ ಹೊಸದೊಂದು ಆತಂಕ ಶುರುವಾಗಿದೆ.

ಸರಿಯಾಗಿ ಮಳೆಯಾಗದ ಕಾರಣ, ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನಲ್ಲಿ ಮಳೆ ಇಲ್ಲದೇ, ಭೂಮಿ ಬಾಯಿ ಬಿಟ್ಟಿದೆ. ಈಗ ಒಂದು ತಿಂಗಳ ಹಿಂದೆ ಉತ್ತಮವಾಗಿ ಮಳೆ ಸುರಿದಿದ್ದು, ಒಳ್ಳೆಯ ಫಸಲು ಸಿಕ್ಕಿತ್ತೆಂದು ರೈತರು ಸಂಭ್ರಮಿಸಿದ್ದರು. ಆದರೆ ಇಷ್ಟು ಬೇಗ ಮಳೆ ಕಡಿಮೆಯಾಗಿದ್ದು, ಇದರ ಸೂಚನೆ ಇಲ್ಲದ ರೈತರು ಮುಂಗಾರು ಹಂಗಾಮಿನಲ್ಲಿ ಹೆಸರು, ಶೇಂಗಾ, ಬಿಟಿ ಹತ್ತಿ, ಸೋಯಾಬಿನ್, ಮೆಣಸಿನಕಾಯಿ ಬೆಳೆಯನ್ನು ಬಿತ್ತಿದ್ದರು. ಆದರೆ ಈಗ ಮಳೆ ಬಾರದ ಕಾರಣ, ಅಲ್ಪ ಸ್ವಲ್ಪ ಬೆಳೆದ ಬೆಳೆಯನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ.

ಟ್ಯಾಂಕರ್ ಸೇರಿದಂತೆ ಹಲವು ಮೂಲಗಳಿಂದ ಬೆಳೆಗಳಿಗೆ ನೀರು ಹಾಕುತ್ತಿದ್ದು, ಹೇಗಾದರೂ ಮಾಡಿ, ಬೆಳೆದ ಬೆಳೆಗಳನ್ನು ಉಳಿಸಿಕೊಳ್ಳಬೇಕೆಂದು ಪರದಾಡುತ್ತಿದ್ದಾರೆ. ಇನ್ನು ರೈತರು ಇಷ್ಟು ಪರದಾಡುತ್ತಿದ್ದರು, ರೈತರ ನೆರವಿಗೆ ಬಾರದ ರಾಜ್ಯ ಸರ್ಕಾರದ ವಿರುದ್ಧ ಕುಂದಗೋಳ ತಾಲೂಕಿನ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತರಿಗೆ ನೆರವಾಗಿ ಇಲ್ಲವಾದಲ್ಲಿ ರಾಜೀನಾಮೆ ನೀಡಿ ಮನೆಗೆ ಹೋಗಿ ಎಂದು ಆಕ್ರೋಶ ಹೊರಹಾಕಿದ್ದಾರೆ.

Laxmi hebbalkar; ನಂಜನಗೂಡು ಶ್ರೀಕಂಠೇಶ್ವರನ ದರ್ಶನ ಪಡೆದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

Congress: ಹತ್ತಿ ಇಳಿಯಲು ಕಾಂಗ್ರೆಸ್ ಪಕ್ಷ ಬಸ್ ಅಲ್ಲ: ಡಿಕೆ ಶಿವಕುಮಾರ್

Neharu Dream :ಇಸ್ರೋ ಯಶಸ್ಸು; ನೆಹರು ಕನಸು ನನಸಾಗಿದೆ: ಡಿ.ಕೆ.ಶಿವಕುಮಾರ್

- Advertisement -

Latest Posts

Don't Miss