Wednesday, September 24, 2025

Latest Posts

ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಅಚಾನಕ್ ಆಗಿ ಸಾವು: ವೈದ್ಯರ ವಿರುದ್ಧ ಕುಟುಂಬಸ್ಥರ ಆಕ್ರೋಶ..

- Advertisement -

Hubballi News: ಹುಬ್ಬಳ್ಳಿ: ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ, ಏಕಾಏಕಿ ಸಾವನ್ನಪ್ಪಿದ್ದು, ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ.

ಮುಂಡಗೋಡ ಮೂಲದ ಅನ್ನಪೂರ್ಣ ಶಂಕರ ಹುಲಿಯಾಳ್ ಎಂಬ ಮಹಿಳೆ, ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅಡುಗೆ ಮುಖ್ಯಸ್ಥರಾಗಿದ್ದರು. ಕಳೆದ ಶನಿವಾರ ಸಿದ್ದಪಡಿಸಿದ ಬಿಸಿ ಸಾಂಬಾರ್ ನಲ್ಲೇ ಬಿದ್ದು ಮೈ ಕೈ ಸುಟ್ಟಿಕೊಂಡಿದ್ದರು. ಅವರನ್ನು ಕೂಡಲೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಲಾಗುತ್ತಿತ್ತು.

ಈ ಕಾರಣಕ್ಕೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ಒಂದು ವಾರದಿಂದ ಕಿಮ್ಸ್‌ನ ಸುಟ್ಟಗಾಯ ಮತ್ತು ಪ್ಲಾಸ್ಟಿಕ್ ಸರ್ಜರಿ ಚಿಕಿತ್ಸಾ ವಿಭಾಗದಲ್ಲಿ ಈಕೆ ಚಿಕಿತ್ಸೆ ಪಡೆಯುತ್ತಿದ್ದರು. ಹೀಗೆ ಚಿಕಿತ್ಸೆ ಪಡೆಯುವಾಗಲೂ ಮಹಿಳೆ ಆರೋಗ್ಯವಾಗಿದ್ದು, ಈಗ ಸಡನ್ ಆಗಿ ಮಹಿಳೆ ಸಾವನ್ನಪ್ಪಿದ್ದಾಳೆ ಎಂಬುದು ಕುಟುಂಬಸ್ಥರ ಆರೋಪವಾಗಿದೆ.

ಅಲ್ಲದೇ, ಇದು ವೈದ್ಯರ ನಿಷ್ಕಾಳಜಿಯಿಂದ ಆದ ಸಾವು ಎಂದು ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ. ಅಲ್ಲದೇ ರಾತ್ರಿ ವೇಳೆ ಇಲ್ಲಿನ ಆಸ್ಪತ್ರೆ ಸಿಬ್ಬಂದಿ ಕುಡಿದು ಬರುತ್ತಿದ್ದರು ಎಂದು ಕೂಡ ಕುಟುಂಬಸ್ಥರು ಆರೋಪಿಸಿದ್ದಾರೆ. ಆಸ್ಪತ್ರೆ ಎಂದುರು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸರಿಯಾಗಿ ಚಿಕಿತ್ಸೆ ನೀಡದೇ, ಪ್ರಾಣ ತೆಗೆದಿದ್ದಾರೆಂದು ಆಕ್ರೋಶ ಹೊರಹಾಕಿದ್ದಾರೆ.

Laxmi hebbalkar; ನಂಜನಗೂಡು ಶ್ರೀಕಂಠೇಶ್ವರನ ದರ್ಶನ ಪಡೆದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

Congress: ಹತ್ತಿ ಇಳಿಯಲು ಕಾಂಗ್ರೆಸ್ ಪಕ್ಷ ಬಸ್ ಅಲ್ಲ: ಡಿಕೆ ಶಿವಕುಮಾರ್

Neharu Dream :ಇಸ್ರೋ ಯಶಸ್ಸು; ನೆಹರು ಕನಸು ನನಸಾಗಿದೆ: ಡಿ.ಕೆ.ಶಿವಕುಮಾರ್

- Advertisement -

Latest Posts

Don't Miss