Hubballi News: ಹುಬ್ಬಳ್ಳಿ: ಇಂದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್ ಭೇಟಿ ನೀಡಿದ್ದು, ಕಿಮ್ಸ್ ಆಸ್ಪತ್ರೆ ವೈದ್ಯರೊಂದಿಗೆ ಸಭೆ ನಡೆಸಿದ್ದಾರೆ.
ಬಳಿಕ ಪ್ರತಿಕ್ರಿಯಿಸಿದ ಸಚಿವರು, ಕೋವಿಡ್ ಹಗರಣದ ತನಿಖೆ ಕಾಟಾಚಾರಕ್ಕೆ ಮಾಡ್ತಿಲ್ಲ. ತಪ್ಪಿತಸ್ತರಿಗೆ ಶಿಕ್ಷೆಯಾಗಲೆಂದೇ ನ್ಯಾಯಾಂಗ ತನಿಖೆ ಮಾಡ್ತಿದ್ದೇವೆ. ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದೇನೆ. ಬಿಜೆಪಿ ಸರ್ಕಾರದಲ್ಲಿ ನಡೆದ ಹಗರಣ ತನಿಖೆ ಮಾಡ್ತಿದ್ದೇವೆ. ನಮ್ಮ ಇಲಾಖೆಯಿಂದಲೂ ಕೆಲವೊಂದು ಹಗರಣಗಳ ತನಿಖೆ ನಡೀತಿದೆ. ನಮ್ಮ ಸರ್ಕಾರದಲ್ಲಿ ಪಾರದರ್ಶಕ ಆಡಳಿತ ಕೊಡ್ತೇವೆ ಅಂತ ವಾಗ್ದಾನ ಮಾಡಿದ್ದೇವೆ. ಅದರ ಪ್ರಕಾರ ನಾವು ನಡೆದುಕೊಳ್ತೇವೆ ಎಂದು ಹೇಳಿದ್ದಾರೆ.
ಜನರಿಗೆ ನೀಡಿದ ಭರವಸೆಯಂತೆ ಮೂರು ಗ್ಯಾರಂಟಿ ಜಾರಿಗೆ ಆಗಿದೆ. ಇನ್ನೊಂದು ಈ ತಿಂಗಳು, ಯುವ ನಿಧಿ ಡಿಸೆಂಬರ್ ನಲ್ಲಿ ಆರಂಭ ಆಗುತ್ತೆ. ದ್ವೇಷದಿಂದ ನಾವು ಬಿಜೆಪಿ ಸರ್ಕಾರದ ಹಗರಣ ಮಾಡ್ತಿಲ್ಲ. ಇನ್ನೂ ತನಿಖೆಯೇ ಆರಂಭಗೊಂಡಿಲ್ಲ. ಆಗಲೇ ದ್ವೇಷದ ರಾಜಕಾರಣ ಅಂದ್ರೆ ಹೇಗೆ..? ನಮಗೇ ಟಾರ್ಗೆಟ್ ಮಾಡ್ತಿದಾರೆ ಅಂತ ಅವರೇಕೆ ಅಂದುಕೊಳ್ತಾರೆ. ತನಿಖೆಯಿಂದ ಸತ್ಯಾಸತ್ಯತೆ ಹೊರಬರಲಿದೆ. ಬಿಜೆಪಿ ಸರ್ಕಾರದಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಅಂತ ಜನ ನಮ್ಮನ್ನು ಅಧಿಕಾರಕ್ಕೆ ತಂದಿದ್ದಾರೆ ಎಂದು ಸಚಿವರು ಹೇಳಿದ್ದಾರೆ.
ಹಗರಣಗಳ ತನಿಖೆ ಮಾಡುವಂತೆ ಆಗ್ರಹಿಸಿದೆವು. ಆದ್ರೆ ಅದನ್ನು ಬಿಜೆಪಿ ಕಿವಿಗೆ ಹಾಕಿಕೊಳ್ಳಲಿಲ್ಲ. 40 ಪರ್ಸೆಂಟೇಜ್ ಭ್ರಷ್ಟಾಚಾರ ಆಗಿದೆ ಅನ್ನೋದು ಜಗಜ್ಜಾಹೀರಾಗಿದೆ. ಅದರ ಬಗ್ಗೆ ತನಿಖೆ ಮಾಡ್ತಿದ್ದೇವೆ. ಪಾರದರ್ಶಕ ಆಡಳಿತ ಕೊಡಬೇಕೆಂಬ ಉದ್ದೇಶವಿದೆ. ಆದ್ರೆ ಯಾರನ್ನಾದ್ರೂ ಟಾರ್ಗೆಟ್ ಮಾಡಬೇಕೆಂಬ ದುರುದ್ದೇಶವಿಲ್ಲ ಎಂದು ಶರಣ್ ಪ್ರಕಾಶ್ ಪಾಟೀಲ್ ಹೇಳಿದ್ದಾರೆ. .
ಕಿಮ್ಸ್ ಸಿಬ್ಬಂದಿ ಖಾಸಗಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಣ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಪಾಟೀಲರು, ದಾಖಲೆಗಳಿದ್ದರೆ ಕೊಡಿ, ಸೂಕ್ತ ಕ್ರಮ ಕೈಗೊಳ್ತೇವೆ. ಕರ್ತವ್ಯದ ಸಮಯದಲ್ಲಿ ಸಿಬ್ಬಂದಿ ಕಿಮ್ಸ್ ನಲ್ಲಿಯೇ ಇರಬೇಕಾಗುತ್ತೆ. ಕೋವಿಡ್ ಹಗರಣದ ನಿಷ್ಪಕ್ಷಪಾತ ತನಿಖೆ ಮಾಡ್ತೇವೆ. ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಮಾಡಿಸ್ತಿದ್ದೇವೆ ಎಂದು ಹೇಳಿದ್ದಾರೆ.
‘ನಾವು ಇಷ್ಟು ಬೇಗ ಗ್ಯಾರಂಟಿ ಜಾರಿ ಮಾಡ್ತೇವೆ ಅಂತ ಅವರು ಅಂದುಕೊಂಡಿರ್ಲಿಲ್ಲ’
‘ಕಾಂಗ್ರೆಸ್ ಯೋಜನೆಯಲ್ಲಿ 1% ಕೂಡ ಭ್ರಷ್ಟಾಚಾರ ನಡೆಯಲು ಚಾನ್ಸ್ ಇಲ್ಲಾ’
ಧಾರವಾಡ ಟೌನ್ ಪೊಲೀಸ್ ಇನ್ಸಪೆಕ್ಟರಿಂದ “34” ರೌಡಿ ಷೀಟರ್‌ಗಳಿಗೆ ಖಡಕ್ ವಾರ್ನಿಂಗ್…