Political News: ಹುಬ್ಬಳ್ಳಿ: ಮಾಜಿ ಸಿಎಂ ಕುಮಾರಸ್ವಾಮಿ ಅವರು ಶೀಘ್ರ ಗುಣಮುಖರಾಗಲಿ ಎಂದು ಜೆಡಿಎಸ್ ಹಾಗೂ ಮುಸ್ಲಿಂ ಸಮುದಾಯದ ಮುಖಂಡರು ಹುಬ್ಬಳ್ಳಿಯ ಪತ್ತೆಶಾವಲಿ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಹುಬ್ಬಳ್ಳಿಯ ಜೆಡಿಎಸ್ ಪಕ್ಷದ ಮುಖಂಡರು ಹಳೇ ಹುಬ್ಬಳ್ಳಿಯ ಪತ್ತೆಶಾವಲಿ ದರ್ಗಾದಲ್ಲಿ ಅನ್ನಸಂತರ್ಪಣೆ ಮಾಡುವ ಮೂಲಕ ಕುಮಾರಸ್ವಾಮಿಯವರು ಶೀಘ್ರ ಗುಣಮುಖರಾಗಿ ಮುಂದಿನ ದಿನಗಳಲ್ಲಿ ಉತ್ತಮವಾದ ಆಡಳಿತ ಹಾಗೂ ರಾಜ್ಯದ ಸಮಗ್ರ ಅಭಿವೃದ್ಧಿಗೆ ಅವರು ಶ್ರಮಿಸಲಿ ಎಂದು ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪತ್ತೇಶಾವಲಿ ದರ್ಗಾದ ಗುರುಗಳು, ಜೆಡಿಎಸ್ ಮುಖಂಡರಾದ ತಬರೇಜ್ ಸಂಶಿ, ಜಾಫರಸಾಬ ಕ್ಯಾಲಕೊಂಡ, ಗಜಾನನ ಅಣ್ವೇಕರ, ಸಲೀಂ ಕುಡಚಿ, ಸೇರಿದಂತೆ ಮೊದಲಾದ ಮುಖಂಡರು ಭಾಗಿಯಾಗಿದ್ದರು.
HDK Fans: ಎಚ್.ಡಿ.ಕೆ ಆರೋಗ್ಯ ಚೇತರಿಕೆಗಾಗಿ ಅಭಿಮಾನಿಯಿಂದ ಉರುಳು ಸೇವೆ
ಮಂತ್ರಾಲಯದಲ್ಲಿ ರಾಯರ 352ನೇ ಆರಾಧನೆಗೆ ಶೇಷವಸ್ತ್ರ ಸಮರ್ಪಣೆ.. ಏನಿದರ ವಿಶೇಷ..?
ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಲಾಗಿದೆ- ಮೇಯರ್ ವೀಣಾ ಬರದ್ವಾಡ್ …

