Thursday, February 6, 2025

Latest Posts

‘ಒಂದು ರಾಷ್ಟ್ರ ಒಂದು ಚುನಾವಣೆ’ ಗೆ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ವಿರೋಧ

- Advertisement -

Political News: ಬೆಂಗಳೂರು: ಒಂದು ರಾಷ್ಟ್ರ ಒಂದು ಚುನಾವಣೆಗೆ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೆಲವು ಸಲಹೆ ನೀಡಿದ್ದಾರೆ.

ಪ್ರಧಾನಿ ಮೋದಿ ಅವರ ಸರ್ಕಾರ ಪ್ರಚಾರ ಮಾಡಿಕೊಳ್ಳುವುದರಲ್ಲಿ ನಂಬರ್ 1 ಆಗಿದೆ. ಚುನಾವಣೆ ಹತ್ತಿರ ಬಂದಂತೆ ತಮ್ಮದೇ ಗಿಮಿಕ್ ಮೂಲಕ ಸಮಾಜ ಹಾಗೂ ಜನರ ಕಣ್ಣು ಕಟ್ಟುವ ವಿದ್ಯೆಯನ್ನು ಕರಗತ ಮಾಡಿಕೊಂಡಿದೆ. ಕೇವಲ ಒಂದು ರಾಷ್ಟ್ರ ಒಂದು ಚುನಾವಣೆ ಎನ್ನದೇ ಒಂದು ರಾಷ್ಟ್ರ ಉಚಿತ ಶಿಕ್ಷಣವನ್ನು ನೀಡಲಿ ಎಂದು ಆಗ್ರಹಿಸಿದ್ದಾರೆ.

ಕಳೆದ 10 ವರ್ಷದಲ್ಲಿ ಎಷ್ಟೊಂದು ಬಡ ಜನರು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಹಾಗೂ ಕೇವಲ ಶ್ರೀಮಂತರ ಮಕ್ಕಳಿಗೆ ಮಾತ್ರ ಉತ್ತಮ ಶಿಕ್ಷಣ ದೊರೆಯುತ್ತಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಆಲೋಚನೆ ಮಾಡಲಿ ಅದು ಬಿಟ್ಟು ಇಂತಹುದರ ಬಗ್ಗೆ ಅಲ್ಲ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ಅವರು ತಮ್ಮ ಪ್ರಚಾರ ಕಾರ್ಯಗಳಿಗೆ ಖರ್ಚು ಮಾಡುವ ಹಣವನ್ನು ಬಡವರ ಮಕ್ಕಳಿಗೆ ಉಚಿತ ಶಿಕ್ಷಣ‌ ನೀಡಲು ಬಳಸಲಿ ಎಂದು ಲಾಡ್ ಸಲಹೆ ನೀಡಿದ್ದಾರೆ.

ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ: ಸಂಗ್ರಹ ಘಟಕದ ಬಳಿ ಚರಂಡಿಗೆ ಪೋಲಾಗುತ್ತಿರುವ ನೀರು

ಹುಣಸೂರಿನಲ್ಲಿ ಕರ್ತವ್ಯನಿರತ ಹೋಂಗಾರ್ಡ್ ಮೇಲೆ ಹಲ್ಲೆ, ಆರೋಪಿ ಬಂಧನ

‘ಅಧರ್ಮ ಅಳಿಸಲು ಶ್ರೀಕೃಷ್ಣನ ಅವತಾರದಂತೆ ನರೇಂದ್ರ ಮೋದಿಯವರು ದೇಶದಲ್ಲಿ ಇದ್ದಾರೆ’

- Advertisement -

Latest Posts

Don't Miss