Health News : ಕೇರಳದಲ್ಲಿ ಮತ್ತೆ ಕಾಡಲಾರಂಭಿಸಿದೆ. ಇತ್ತೀಚೆಗೆ ನಿಫಾ ವೈರಸ್ ನಿಂದಾಗಿ ಕೇರಳದಲ್ಲಿ ಇಬ್ಬರು ಸಾವನ್ನಪ್ಪಿದ ಘಟನೆ ಕೂಡಾ ನಡೆದಿದೆ. ನಿಫಾ ವೈರಸ್ ಪ್ರಾಣಿಗಳಿಂದ ಬರುವ ರೋಗ ಎಂದು ಹೇಳಲಾಗುತ್ತಿದೆ. ನಿಫಾ ವೈರಸ್ ನಿಂದ ಶೇಕಡಾ 70 ರಷ್ಟು ಜನ ಸಾಯುತ್ತಾರೆ ಅನ್ನೋ ಹೇಳಿಕೆ ಕೂಡಾ ಇದೆ. ಹಾಗಿದ್ರೆ ಈ ವೈರಸ್ ಲಕ್ಷಣಗಳೇನು ಇದಕ್ಕೆ ಮುಂಜಾಗ್ರತಾ ಕ್ರಮವಾಗಿ ಏನೇನು ಮಾಡಬಹುದು ಎನ್ನುವ ಸಂಪೂರ್ಣ ಮಾಹಿತಿಯನ್ನು ನಾವು ಇಲ್ಲಿ ನಾವು ಕೊಡುತ್ತೇವೆ.
ನಿಫಾ ವೈರಸ್ ಒಂದು ಝೂನೋಟಿಕ್ ವೈರಸ್ ಆಗಿದ್ದು, ಇದರಿಂದ ತೀವ್ರವಾದ ಉಸಿರಾಟ ಮತ್ತು ನರವೈಜ್ಞಾನಿಕ ಕಾಯಿಲೆ ಬರುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ನಿಫಾ ಸೋಂಕು ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಸೋಂಕಾಗಿದೆ. ಇದು ಕಲುಷಿತ ಆಹಾರದ ಮೂಲಕ ಅಥವಾ ನೇರವಾಗಿ ಮನುಷ್ಯರಿಗೆ ಹರಡುತ್ತದೆ ಎಂದು ಹೇಳಲಾಗಿದೆ.
ನಿಫಾ ವೈರಸ್ ತಗುಲಿದವರ ಪೈಕಿ ಶೇ.40 ರಿಂದ ಶೇ.75 ರಷ್ಟು ಜನರು ಸಾವನ್ನಪ್ಪುತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ ಕೂಡಾ. ನಿಫಾ ವೈರಸ್ಗೆ ಯಾವುದೇ ನಿಖರವಾದ ಔಷಧಿಯೂ ಇಲ್ಲ. ಹೀಗಾಗಿ ನಿಫಾ ವೈರಸ್ ಡೆಡ್ಲಿ ವೈರಸ್. ಕೊರೊನಾ ವೈರಸ್ಗಿಂತ ನಿಫಾ ವೈರಸ್ ಅತಿ ಅಪಾಯಕಾರಿ. ಕೋವಿಡ್ನಂತೆ ಸಾಂಕ್ರಾಮಿಕವಾಗಿರುವ ನಿಫಾ ವೈರಸ್ ಬಾವಲಿಗಳಿಂದ ಹುಟ್ಟಿಕೊಂಡು ಮನುಷ್ಯರಿಗೆ ಹರಡುತ್ತದೆ. ಇದು ಸಾಮಾನ್ಯವಾಗಿ ಹಂದಿ, ನಾಯಿ, ಕುದುರೆಗಳಿಗೂ ಹರಡುತ್ತದೆ. ಆದರೆ, ಮನುಷ್ಯರಿಗೆ ಹರಡಿದರೆ ಅದು ತೀರಾ ಅಪಾಯಕಾರಿಯಾಗಿರುತ್ತದೆ.
ನಿಫಾ ವೈರಸ್ ಲಕ್ಷಣಗಳು:
ನಿಫಾ ವೈರಸ್ ತಗುಲಿರುವುದರ ಸಾಮಾನ್ಯ ಲಕ್ಷಣಗಳೆಂದರೆ, ಅನಾರೋಗ್ಯ, ಜ್ವರ, ಮೈ ಕೈ ನೋವು, ಸ್ನಾಯುಗಳ ನೋವು, ತಲೆನೋವು, ಸುಸ್ತು, ವಾಂತಿ. ನಿಫಾ ವೈರಸ್ ಮನುಷ್ಯರಲ್ಲಿ ಬಹಳ ವೇಗವಾಗಿ ಹರಡುತ್ತದೆ.
ಬಾವಲಿ, ಹಂದಿ, ಕುರಿ ಸೇರಿದಂತೆ ಸಾಕು ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ. ಬಾವಲಿ ಅಥವಾ ಹಕ್ಕಿಗಳು ಅರ್ಧಂಬರ್ಧ ತಿಂದು ಬಿಟ್ಟ ಹಣ್ಣುಗಳನ್ನು ಸೇವನೆ ಮಾಡುವುದರಿಂದ ನಿಫಾ ವೈರಸ್ ತಗುಲುತ್ತದೆ. ಬಾವಲಿಗಳು ತಿಂದ ಹಣ್ಣುಗಳನ್ನು ಸೇವನೆ ಮಾಡುವುದರಿಂದ ನಿಫಾ ವೈರಸ್ ತಗುಲುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ನಿಫಾ ವೈರಸ್ ಮನುಷ್ಯರಿಂದ ಮನುಷ್ಯರಿಗೆ ಹರಡದಂತೆ ತಡೆಯಲು, ನಿಫಾ ವೈರಸ್ ತಗುಲಿದವರಿಂದ ಭೌತಿಕ ಅಂತರ ಕಾಪಾಡಿಕೊಳ್ಳಬೇಕು. ನಿಫಾ ವೈರಸ್ ತಗುಲಿದವರನ್ನು ಭೇಟಿಯಾದ ಬಳಿಕ ಕೈಗಳನ್ನು ತಪ್ಪದೇ ತೊಳೆಯಬೇಕು. ನಿಫಾ ವೈರಸ್ ಹರಡದಂತೆ ತಡೆಯಲು, ನಿಫಾ ವೈರಸ್ ತಗುಲಿರುವ ಪ್ರಾಣಿ, ಪಕ್ಷಿಗಳನ್ನು ಸೂಕ್ತ ಮುನ್ನೆಚ್ಚರಿಕೆಯೊಂದಿಗೆ ಹತ್ಯೆ ಮಾಡಿ ಮಣ್ಣಿನಲ್ಲಿ ಹೂತುಹಾಕಬೇಕು.
Book Publish: ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಿಂದ ಪುಸ್ತಕ ಬಿಡುಗಡೆ ಕಾರ್ಯಕ್ರಮ..!
ಈ 5 ಆಹಾರಗಳ ಸೇವನೆಯಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ..