ಹುಣಸೂರು ತಾಲೂಕಿನ ಯಮಗೊಂಬ ಗ್ರಾಮದಲ್ಲಿ ಕಾಲುವೆಗಳಲ್ಲಿ ನೀರಿಲ್ಲದೆ ರೈತರು ಬೆಳೆದಿರುವ ಬೆಳೆಗಳು ನಾಶವಾಗುತ್ತಿವೆ. ಇನ್ನೊಂದು ಕಡೆ ಕಳೆದ ಒಂದು ತಿಂಗಳಿಂದ ಗ್ರಾಮದಲ್ಲಿ ವಿದ್ಯುತ್ ವ್ಯತ್ಯಯವಾಗಿ ಬೋರ್ವೆಲ್ ಮೂಲಕ ನೀರು ಹರಿಸಲು ಸಹ ಸಾದ್ಯವಾಗದೆ ಬೆಳೆಗಳು ಒಣಗುತ್ತಿವೆ.
ಹೌದು ಕಳೆದ ಒಂದು ತಿಂಗಳಿಂದ ಗ್ರಾಮದಲ್ಲಿ ಟಿಸಿ ಸುಟ್ಟು ಹೋಗಿ ಇಡಿ ಗ್ರಾಮದ ಜನ ಕತ್ತಲೆಯಲ್ಲಿ ಜೀವನ ಸಾಗಿಸುತ್ತಿದ್ದರು ಇತ್ತ ಕಡೆ ಕೆಇಬಿ ಅಧಿಕಾರಿಗಳು ಗಮನ ಹರಿಸಿದೆ ನಿರ್ಲಕ್ಷ ವಹಿಸುತ್ತಿದ್ದಾರೆ. ನಿಮಗೆ ರೈತರ ಮೇಲೆ ಕಾಳಜಿ ಇಲ್ಲ ಇಂತಹ ಅಧಿಕಾರಿಗಳನ್ನು ತಾಲೂಕಿನಿಂದ ತೊಲಗಿಸಿ ಎಂದು ಹಿಡಿ ಹಿಡಿ ಶಾಪ ಹಾಕಿದರು.
ಜನ ಪ್ರತಿನಿಧಿಗಳಾದ ಶಾಸಕರು ಇದಕ್ಕೆ ಆದಷ್ಟು ಬೇಗ ಪರಿಹಾರ ಒದಗಿಸಿ ರೈತರ ಕಷ್ಟಕ್ಕೆ ಸ್ಪಂದಿಸಿ, ಲಕ್ಷಾಂತರ ರೂ ಹಣ ಖರ್ಚು ಮಾಡಿ ಭತ್ತ ಮತ್ತು ಶುಂಠಿ ಬೆಳೆದಿದ್ದೇವೆ ಆದರೆ ನೀರಲ್ಲದೆ ಬೆಳೆಗಳು ಒಣಗುತ್ತಿವೆ ಎಂದು ಶಾಸಕರ ವಿರುದ್ದ ಬೇಸರ ವ್ಯಕ್ತಪಡಿಸಿದರು.
ರೈತರ ಮೇಲೆ ದರ್ಪ ತೋರುವ ಅಧಿಕಾರಿಗಳ ಮೇಲೆ ಕ್ರಮವಯಿಸಿ ಇಲ್ಲವಾದರೆ ರೈತರು ಬದುಕುವುದೇ ಕಷ್ಟವಾಗಿದೆ ಮಾನ್ಯ ಶಾಸಕರು ನಮಗೆ ನ್ಯಾಯ ಕೊಡಿಸಬೇಕು ಎಂದು ನ್ಯಾಯಕಾಗಿ ಗ್ರಾಮದ ರೈತರು ಅಂಗಲಾಚಿದರು.
Ganesh instalation: ಈದ್ಗಾ ಮೈದಾನಕ್ಕೆ ವೈಭವದೊಂದಿಗೆ ಪ್ರವೇಶ ಮೂಷಿಕ ವಾಹನ
Ganesh statue: ಹುಬ್ಬಳ್ಳಿಯ ಬೀದಿಗಳಲ್ಲಿ ಗಣೇಶ ಮೂರ್ತಿ ಭರ್ಜರಿ ಮೆರವಣಿಗೆ..!
BJP: ಕಾಂಗ್ರೆಸ್ನಲ್ಲಿ ಶೆಟ್ಟರ್ ಅವರನ್ನು ಯಾರು ಗುರುತಿಸುತ್ತಿಲ್ಲ: ಟೆಂಗಿನಕಾಯಿ.!