ಕೊಪ್ಪ : ಚುನಾವಣೆಯಲ್ಲಿ ಟಿಕೆಟ್ ಕೊಡಿಸುವುದಾಗಿ ಕೋಟಿಗಟ್ಟಲೆ ಹಣ ವಂಚನೆ ಆರೋಪದ ಮೇಲೆ ಚೈತ್ರಾ ಕುಂದಾಪುರ ಅವರನ್ನು ಸಿಸಿಬಿ ಪೋಲಿಸಿರು ಬಂಧಿಸಿದ್ದಾರೆ. ಈ ಹಿಂದೆ ಹಲವಾರು ಕಡೆ ಹಿಂದುತ್ವ ಪರ ಭಾಷಣ ಮಾಡಿದ್ದು ಜನರು ಅವರ ಭಾಷಣಕ್ಕೆ ಮಾರು ಹೋಗಿದ್ದರು. ಆದರೆ ಈಗ ಚೈತ್ರಾ ಭಾಷಣ ಮಾಡಿದ ಸ್ಥಳವನ್ನುಮೈಲಿಗೆ ಎಂದು ದೇವರ ತೀರ್ಥ ತೀರ್ಥ ಸಿಂಪಡಿಸಿ ಶುದ್ದಿ ಮಾಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಮಾವಿನಕಟ್ಟೆ ಗ್ರಾಮದಲ್ಲಿ ಕಳೆದ ಅಕ್ಟೋಬರ್ ನಲ್ಲಿ ಹಿಂದುತ್ವ ಪರ ಕಾರ್ಯಕ್ರಮದಲ್ಲಿ ಅನ್ಯ ಜಾತಿಯ ವಿರುದ್ದ ಭಾಷಣ ಮಾಡಿದ್ದರು ಅದಕ್ಕೆ ತಕ್ಕ ಪ್ರತಿಯಾಗಿ ಈಗ ಅವಳಿಗೆ ತಕ್ಕ ಶಾಸ್ತಿಯಾಗಿದೆ ಎಂದು ಗ್ರಾಮಸ್ಥರು ಭಾನುವಾರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಕಳೆದ ಬಾರಿ ಚೈತ್ರಾ ಭಾಷಣ ಮಾಡಿದ ಸ್ಥಳದಲ್ಲಿ ತೀರ್ಥ ಸಿಂಪಡಿಸಿ ಮೈಲಿಗೆ ನಿವಾರಣೆ ಮಾಡಿದರು.
ಕಳೆದ ಮೂರ್ನಾಲ್ಕು ದಶಕಗಳಿಂದ ತುಂಬಾ ವಿಜೃಂಭಣೆಯಿಂದ ಗಣೇಶ ಹಬ್ಬವನ್ನು ಯಾವುದೇ ಜಾತಿ ಭೇದವಿಲ್ಲದೆ ಆಚರಣೆ ಮಾಡಿಕೊಂಡು ಬಂದಿದ್ದೆವು ಆದರೆ ಕಳೆದ ಬಾರಿ ಗಣೇಶ ಹಬ್ಬವನ್ನು ಕೇಸರೀಕರಣ ಮಾಡಬೇಡಿ ಎಂದಿದ್ದಕ್ಕೆ ಚೈತ್ರಾ ಅವರನ್ನು ಕರೆಸಿ ಗ್ರಾಮದಲ್ಲಿ ದ್ವೇಷ ಭಾಷಣ ಮಾಡಿಸಿದ್ದರು ಇತರೆ ಸಮುದಾಯದ ಕುರಿತು ಅವಹೇಳನಕಾರಿ ಭಾಷಣ ಮಾಡಿ ಗ್ರಾಮಸ್ಥರಿಗೆ ಮಾನಸಿಕವಾಗಿ ನೋವುಂಟು ಮಾಡಿದ್ದರು ಎಂದು ಗ್ರಾಮಸ್ಥರು ಹೇಳಿದ್ದಾರೆ.
ಆಗ ಗ್ರಾಮಸ್ಥರು, ಗ್ರಾಮದ ನೆಮ್ಮದಿಯನ್ನು ಹಾಳು ಮಾಡಿದವರನ್ನು ಸುಮ್ಮನೆ ಬಿಡಬಾರದು ಹಾಗೂ ಅವರಿಗೆ ತಕ್ಕ ಶಾಸ್ತಿ ಆಗಬೇಕು ಎಂದು ಮನಸ್ಸಿನಲ್ಲೇ ಸಂಕಲ್ಪಿಸಿ ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡರು. ಪ್ರಾರ್ಥನೆ ಮಾಡಿದ ಒಂದೇ ವರ್ಷದೊಳಗೆ ಪ್ರಾರ್ಥನೆ ಫಲಿಸಿದ್ದಕ್ಕೆ ಸ್ವಾಮಿಯ ಸೇವೆ ಮಾಡಿ ತೆಂಗಿನಕಾಯಿ ಒಡೆದು ಕಳೆದ ಬಾರಿ ಚೈತ್ರಾ ಭಾಷಣ ಮಾಡಿದ ಸ್ಥಳವನ್ನು ತೀರ್ಥ ಸಿಂಪಡಿಸಿ ಶುದ್ದಿ ಮಾಡಿದರು.




