ಮಂಡ್ಯ ಜಿಲ್ಲೆ : ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ ನೀರು ಬೇಡಬೇಕೆಂದು ಆದೇಶ ಹೊರಡಿಸಿರುವ ಸುಪ್ರೀಕೋರ್ಟ್ ತೀರ್ಪಿನ ವಿರುದ್ದ ಮಂಡ್ಯ ಜನತೆ ಇಂದು ಮಂಡ್ಯವನ್ನು ಬಂದ್ ಮಾಡುವಂತೆ ಕರೆಕೊಟ್ಟು ಪ್ರತಿಭಟನೆ ಮಾಡುತ್ತಿದ್ದಾರೆ.
ಮಂಡ್ಯದಲ್ಲಿ ಹಿತರಕ್ಷಣಾ ವೇದಿಕೆ ವತಿಯಿಂದ ಸಂಜಯ್ ವೃತ್ತದಲ್ಲಿ ಮಂಡ್ಯ ಜಿಲ್ಲೆಯ ರೈತರು ರಸ್ತೆಯಲ್ಲಿ ಕಾವೇರಿ ನೀರು ಪ್ರಾಧಿಕಾರದ ಆದೇಶ ಪತ್ರವನ್ನು ಸುಟ್ಟು ಟೀ ಮಾಡುವ ಮೂಲಕ ವಿನೂತನ ಪ್ರತಿಭಟನೆ ಕೈಗೊಳ್ಳತ್ತಿದ್ದಾರೆ. ಮಂಡ್ಯಹಿತರಕ್ಷಣಾ ವೇದಿಕೆಯಿಂದ ಬಂದ್ ಗೆ ಕರೆಕೊಟ್ಟಿದ್ದು ಬೆಳಿಗ್ಗೆ 8 ಗಂಟೆಯಿಂದ ಸ್ವಯಂ ಪ್ರೇರಿತವಾಗಿ ವ್ಯಾಪಾರಸ್ತರು ಬಂದ್ ಗೆ ಬೆಂಬಲ ಸೂಚಿಸಿದ್ದಾರೆ.ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ದ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಬೇಕೆಂದು ಆಗ್ರಹಿಸಿದರು.
ಇನ್ನು ಕಾವೇರಿ ವಿಚಾರವಾಗಿ ಮಂಡ್ಯದಲ್ಲಿನ ಬಂದ್ ಪ್ರತಿಭಟನೆ ಕುರಿತು ಹೇಳಿಕೆ ನೀಡಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಂದ್ ನಿಂದ ಏನೂ ಪ್ರಯೋಜನವಿಲ್ಲ ಎಂಬ ಹೇಳಿಕೆ ವಿರುದ್ದ ಮಾಜಿ ಎಮ್ಎಲ್ ಸಿ ಕೆಟಿ ಶ್ರೀ ಕಂಠೇಗೌಡ ಅಧಿಕಾರದಲ್ಲಿರುವ ಅವರು ಮಾತನಾಡಲೇಬೇಕು ಪಾದಯಾತ್ರ ಮಾಡಿದ್ದನ್ನು ಮರೆತಿದ್ದಾರೆ ಈರೀತಿ ಮಾತುಗಳನ್ನಾಡುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.
ಪ್ರತಿಭಟೆನೆ ಹಿನ್ನೆಲೆ ಸ್ಥಳದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ಸಂಭವಿಸಬಾರದು ಎನ್ನವು ದೃಷ್ಟಿಯಿಂದ ಬಿಗಿ ಪೊಲಿಸ್ ಬಮದೋಬಸ್ತ್ ಮತ್ತು ಯ್ರಾಪಿಡ್ ಆ್ಯಕ್ಷನ್ ಪೋರ್ಸ್ ನಿಯೋಜನೆ ಮಾಡಲಾಗಿದೆ.