ಗದಗ: ಹಿರೇ ಹಡಗಲಿಯ ಅಭಿನವ ಹಾಲಾಶ್ರೀ ಸ್ವಾಮಿಜಿ ಗೋವಿಂದ್ ಬಾಬುಗೆ ಟಿಕೆಟ್ ಕೊಡಿಸುವುದಾಗಿ ವಂಚಿಸಿದ ಆರೊಪದ ಬೆನ್ನಲ್ಲೆ ಅವರ ವಿರುದ್ದ ಅಂತಹದ್ದೇ ಮತ್ತೊಂದು ಪ್ರಕರಣ ದಾಖಲಾಗಿದೆ.
ಶಿರಹಟ್ಟಿ ತಾಲೂಕಿನ ರಣತೂರು ಗ್ರಾಮ ಪಂಚಾಯಿತಿ ಪಿಡಿಒ ಸಂಜಯ್ ಚವಡಾಳ್ ಅವರಿಗೆ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಒಂದು ಕೋಟಿ ರೂಗಳನ್ನು ವಂಚಿಸಿದ ಆರೋಪದ ಮೇಲೆ ಮುಂಡರಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಕರ್ತವ್ಯ ಲೋಪದ ಆರೋಪದಲ್ಲಿ ಸದ್ಯ ಅಮಾನತುಗೊಂಡಿರುವ ಸಂಜಯ್ ಚವಡಾಳ್ ಶಿರಹಟ್ಟಿ ಮೀಸಲು ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎಂದು ಬಿಂಬಿಸಿಕೊಂಡಿದ್ದ ಸಂಜಯ್ ಚುನಾವಣಾ ಮುಂಚಿತವಾಗಿ ಹಾಲಾ ಶ್ರೀ ಸ್ವಾಮಿಜಿಗೆ 1 ಕೋಟಿ ನೀಡಿದ್ದೆ ಎಂದು ಸೆಪ್ಟೆಂಬರ್ 19 ರಂದು ಮಧ್ಯರಾತ್ರಿ ಮುಂಡರಗಿ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.
ಇನ್ನು ಮೂರು ಹಂತದಲ್ಲಿ ಹಣ ನೀಡಿರುವುದಾಗಿ ತಿಳಿಸಿರುವ ಸಂಜಯ್ ಸರಿಯಾದ ದೂರನ್ನು ದಾಖಲಿಸಿಲ್ಲ. ಸೂಕ್ತ ದಾಖಲೆ ಇಲ್ಲದೆ ಹಿನ್ನೆಲೆ ಕೇವಲ ಎಸ್ ಸಿ ದಾಖಲಿಸಿ, ಸೂಕ್ತ ದಾಖಲೆ ತರುವಂತೆ ಸೂಚಿನಿ ಪಿಟಿಷನ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ, ಆದರೆ ದೂರು ದಾಖಲಿಸಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
Cauvery water: ರಸ್ತೆಯಲ್ಲಿ ಟೀ ಮಾಡಿ ಪ್ರತಿಭಟನೆ: ಸ್ವಯಂ ಪ್ರೇರಿತವಾಗಿ ಬಂದ್ ಗೆ ಬೆಂಬಲ;
Joshi: ಚೈತ್ರಾ ಕುಂದಾಪುರಗೆ ಗರಿಷ್ಠ ಶಿಕ್ಷೆಯಾಗಬೇಕು: ಪ್ರಹ್ಲಾದ್ ಜೋಶಿ..!