Viral Song : ನಾನು ನಂದಿನಿ ಹಾಡು ಸೋಶಿಯಲ್ ಮೀಡಿಯಾದ ಸದ್ಯದ ವೈಬ್ . ಇದೀಗ ಮತ್ತೊಂದು ದಾಖಲೆ ಬರೆದ ನಂದಿನಿ ಹಾಡು 30 ಮಿಲಿಯನ್ ವೀವ್ಸ್ ದಾಟಿದೆ.
ಹಳೇಯ ಫೇಮಸ್ ಹಾಡು ಐಯಮ್ ಬಾರ್ಬಿ ಗರ್ಲ್ ಎಂಬ ಇಂಗ್ಲೀಷ್ ಹಾಡಿನ ಟ್ಯೂನ್ ಗೆ ನಾನು ನಂದಿನಿ ಎಂಬ ಕನ್ನಡ ಲಿರಿಕ್ಸ್ ಬಳಸಿ ಇದೀಗ ಹೊಸ ಪ್ರಯೋಗ ಮಾಡಲಾಗಿದೆ. ಇದು ಸೋಶಿಯಲ್ ಮೀಡಿಯಾದಲ್ಲಿ ರಾತ್ರಿ ಬೆಳಗಾಗುವುದರ ಒಳಗೆ ಹೈಪ್ ಸೃಷ್ಟಿಸಿಯೇ ಬಿಟ್ಟಿತ್ತು.
ಹಾಗಂತ ಹಾಗ್ ಬಂದು ಹೀಗ್ ಹೋಯ್ತು ಅನ್ನೋದಕ್ಕಂತೂ ಆಗಲ್ಲ ಯಾಕಂದ್ರೆ ದಿನ ನಿತ್ಯ ಈ ಹಾಡಿನ ಕ್ರೇಜ್ ಅಂತೂ ಹೆಚ್ಚುತ್ತಲೇ ಇದೆ. ಇನ್ನು ವಿಕಿಪೀಡಿಯಾ ಖ್ಯಾತಿಯ ವಿಕ್ಕಿ ವಿಕಾಸ್ ಈ ಹಾಡಿನ ಸೂತ್ರದಾರ. ಸಾಕಷ್ಟು ಹಾಸ್ಯಮಯ ವೀಡಿಯೋ ಗಳನ್ನು ಈ ವಿಕಿಪೀಡಿಯಾ ವಿಕ್ಕಿ ರಚಿಸಿ ಎಲ್ಲರನ್ನು ರಂಜಿಸುತ್ತಿರುವುದಂತೂ ಸತ್ಯ.
Viral video: ಶಿಸ್ತಿನ ಇಲಾಖೆಯಲ್ಲಿ ಅಶಿಸ್ತು ತೋರಿದ ಪೋಲಿಸ್ ಸಿಬ್ಬಂದಿ .!ಕ್ರಮ ಕೈಗೊಳ್ಳುವವರೇ ಹಿರಿಯ ಅಧಿಕಾರಿಗಳು?