Monday, December 23, 2024

Latest Posts

ಪೌರ ಕಾರ್ವಿುಕರಿಂದ ಬಾಯಿ ಬಡಿದುಕೊಂಡು ಪ್ರತಿಭಟನೆ..!

- Advertisement -

Hubballi News: ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯು ಕಾನೂನುಬಾಹಿರವಾಗಿ ಮುಂದುವರಿಸಿರುವ ಸ್ವಚ್ಛತೆ ಹೊರ ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ, ಗುತ್ತಿಗೆ ಪೌರ ಕಾರ್ವಿುಕರು ಕೆಲಸ ಸ್ಥಗಿತಗೊಳಿಸಿ ಲಬೋ ಲಬೋ ಎಂದು ಬಾಯಿ ಬಡದುಕೊಂಡು ಪ್ರತಿಭಟಿಸುತಿದ್ದು, ಅನಿರ್ದಿಷ್ಟ ಅವಧಿಯ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದೆ.

ಧಾರವಾಡ ಜಿಲ್ಲಾ ಎಸ್ಸಿ ಎಸ್ಟಿ ಪೌರ ಕಾರ್ವಿುಕರ ಮತ್ತು ನೌಕರಕ ಸಂಘದ ಅಧ್ಯಕ್ಷ ವಿಜಯ ಗುಂಟ್ರಾಳ ನೇತೃತ್ವದಲ್ಲಿ ಗುತ್ತಿಗೆ ಪೌರ ಕಾರ್ವಿುಕರು ಪ್ರತಿಭಟನೆ ನಿರತರಾಗಿದ್ದು ಪಾಲಿಕೆ ವಿರುದ್ದ ಘೋಷಣೆ ಕೂಗಿ ಆಕ್ರೋಶ ಹೋರ ಹಾಕಿದ್ದಾರೆ.

ರಾಜ್ಯ ಸರ್ಕಾರ 2017ರಲ್ಲಿಯೇ ಗುತ್ತಿಗೆ ಪದ್ಧತಿಯನ್ನು ರದ್ದು ಪಡಿಸಿ, ನೇರ ನೇಮಕಾತಿ ಹಾಗೂ ನೇರ ವೇತನ ಪಾವತಿಸಲು ಆದೇಶ ಹೊರಡಿಸಿತ್ತು. ಆದರೆ, ಹು-ಧಾ ಮಹಾನಗರ ಪಾಲಿಕೆಯಲ್ಲಿ ಇದು ಜಾರಿಗೆ ಬಂದಿಲ್ಲ. ಪಾಲಿಕೆಯ 799 ಗುತ್ತಿಗೆ ಪೌರ ಕಾರ್ವಿುಕರಿಗೆ ನೇರ ವೇತನ ಪಾವತಿಸುವಂತೆ ಹಾಗೂ ಖಾಲಿ ಉಳಿದಿರುವ 340 ಪೌರ ಕಾರ್ವಿುಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳುವಂತೆ ಮತ್ತು ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಈ ಕುರಿತಂತೆ ಠರಾವು ಪಾಸ್ ಮಾಡಬೇಕೆಂದು ಪೌರ ಕಾರ್ಮಿಕರು ಆಗ್ರಹಿಸಿದ್ದಾರೆ.

ಗೋವಾದ ಮಾಪುಸಾದಲ್ಲಿ ಶಾಪಿಂಗ್ ಅನುಭವ ಹೇಗಿರತ್ತೆ ಗೊತ್ತಾ..? ಇಲ್ಲಿದೆ ನೋಡಿ ವೀಡಿಯೋ..

12 ಗಂಟೆಯಲ್ಲಿ 120 ಕಿಮೀ ನಡೆದು ಎಲ್ಲಮ್ಮನ ಗುಡ್ಡಕ್ಕೆ ಬಂದು ಹರಕೆ ತೀರಿಸಿದವರಿಗೆ ಸನ್ಮಾನ..

7 ಮಂತ್ರಿ ಕೊಟ್ಟಿದ್ದೇವೆ, ಇನ್ನೆಷ್ಟು ಬೇಕು? ಸಿಎಂ ಸ್ಥಾನ ಬೇಕಾ? ಶಾಮನೂರು ವಿರುದ್ಧ ಹಳ್ಳಿಹಕ್ಕಿ ಗುಟುರು!

- Advertisement -

Latest Posts

Don't Miss