ರೈತರು ಬಿತ್ತುವ ಬಿತ್ತನೆ ಬೀಜಗಳ ದರ ಹೆಚ್ಚಳ ಮಾಡಿದ ಸರ್ಕಾರ, ರೈತ ಕಂಗಾಲು

Hubballi News: ಹುಬ್ಬಳ್ಳಿ: ಉಪ್ಪಿನಬೆಟಗೇರಿ: ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಐದು ಗ್ಯಾರಂಟಿಗಳ ಪೈಕಿ ಈಗಾಗಲೇ 4 ಗ್ಯಾರಂಟಿಯನ್ನು ಜಾರಿಗೆ ತಂದಿದೆ. ಗ್ಯಾರಂಟಿಗಳಿಗೆ ಹಣ ಹೊಂದಿಸಲು ಸರ್ಕಾರ ಬೇರೆ ಬೇರೆ ಮೂಲಗಳಿಂದ ತೆರಿಗೆ ವಸೂಲಿ ಮಾಡುತ್ತಿದೆ. ಇದೀಗ ರೈತರು ಬಿತ್ತುವ ಬಿತ್ತನೆ ಬೀಜಗಳ ದರ ಹೆಚ್ಚಳ ಮಾಡಿದೆ.

ಅಮ್ಮಿನಬಾವಿ ಹೋಬಳಿ ಮಟ್ಟದ ಉಪ್ಪಿನಬೆಟಗೇರಿ ಗ್ರಾಮದ ಸುತ್ತ ಮುತ್ತಲಿನ ನೂರಾರು ಎಕರೆ ಪ್ರದೇಶದಲ್ಲಿ ಮುಂಗಾರು ಮಳೆ ಕೈ ಕೊಟ್ಟಿದ್ದರಿಂದ ರೈತರು ಕಂಗಾಲಾಗಿದ್ದಾರೆ. ಹಿಂಗಾರಿ ಬೆಳೆಯಾದರೂ ಉತ್ತಮ ಫಸಲು ಬರುವ ನಿರೀಕ್ಷೆಯಲ್ಲಿರುವ ರೈತರಿಗೆ ಸರ್ಕಾರ ಹಿಂಗಾರು ಬಿತ್ತನೆ ಬೀಜಗಳ ದರ ಹೆಚ್ಚಳ ಮಾಡಿ ರೈತರ ಮೇಲೆ ಬರೆ ಎಳೆದಿದೆ.

ಉತ್ತಮ ಮಳೆ ನಿರೀಕ್ಷೆಯಲ್ಲಿರುವ ರೈತರು ಈಗಾಗಲೇ ಹೊಲಗಳನ್ನು ಸ್ವಚ್ಛ ಮಾಡಿ ಹಿಂಗಾರಿ ಬೆಳೆಗಳಾದ ಜೋಳ, ಗೋಧಿ, ಕಡಲೆ ಬಿತ್ತನೆ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ. ಆದರೆ, ಬೀಜ ದರ ಏರಿಕೆ ಪೆಟ್ಟು ನೀಡಿದೆ. ಕಳೆದ ವರ್ಷ ಪ್ರತಿ 20 ಕೆಜಿ ಕಡಲೆ ಪ್ಯಾಕೇಟ್‌ಗೆ 900 ರೂಪಾಯಿ ದರವಿತ್ತು. ಈ ವರ್ಷ 1200 ರೂಪಾಯಿ ನಿಗದಿ ಮಾಡಿ, 300 ರೂಪಾಯಿ ಹೆಚ್ಚಳ ಮಾಡಲಾಗಿದೆ. 3 ಕೆಜಿ ಜೋಳಕ್ಕೆ 189 ರೂಪಾಯಿ, 5 ಕೆಜಿ ಕುಸುಬೆ ಬೀಜಕ್ಕೆ 325 ರೂಪಾಯಿ ಹಾಗೂ 30 ಕೆಜಿ ಗೋಧಿಗೆ 1230 ರೂಪಾಯಿ ಈ ವರ್ಷ ದರ ನಿಗದಿ ಮಾಡಿದ್ದಾರೆ.

ಇನ್ನು ರೈತರಿಗೆ ಎಕರೆವಾರು ಬಿತ್ತನೆ ಮಾಡಲು 20 ಕೆಜಿ ಪ್ಯಾಕೇಟ್ ಸಾಕಾಗುವುದಿಲ್ಲ. ಹೆಚ್ಚಿನ ಬೀಜ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂಬುದು ರೈತರಒತ್ತಾಯ. ಈ ವರ್ಷ ಬೆಲೆ ಹೆಚ್ಚಳ ಮಾಡಿರುವುದರಿಂದ ಬರಗಾಲದ ಮಧ್ಯೆ ಸರ್ಕಾರ ರೈತರ ಮೇಲೆ ಮತ್ತೊಂದು ಬರೆ ಎಳೆದಂತಾಗಿದೆ.

ಉಪ್ಪಿನಬೆಟಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕೃಷಿ ಇಲಾಖೆಯಿಂದ ಬಿತ್ತನೆ ಬೀಜಗಳನ್ನು ಹೆಚ್ಚಾಗಿ ಪರಸ್ಥಳದವರೇ ಪಡೆಯುತ್ತಿದ್ದು,ಇದರಿಂದ ಸ್ಥಳೀಯ ರೈತರು ಪರದಾಡುವಂತಾಗಿದೆ ಎಂದು ಸ್ಥಳೀಯ ರೈತರು ಕೃಷಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪರಿಸರ ಜಾಗೃತಿಗಾಗಿ ಪಾದಯಾತ್ರೆ: ಮಾದರಿಯಾದ ಅಯೋಧ್ಯೆಯ ಯುವಕ

‘ಬಿಜೆಪಿ ಜತೆ ಮೈತ್ರಿಯಾಗಿದೆ ಎಂದರೆ ಅಲ್ಪಸಂಖ್ಯಾತರಿಗೆ ಭಯ ಬೇಡ’

ಎಂಥ ವಸ್ತುಗಳನ್ನು ಉಡುಗೊರೆಯಾಗಿ ನೀಡಬಾರದು ಗೊತ್ತೇ..?

About The Author