Thursday, February 6, 2025

Latest Posts

ಅದ್ಧೂರಿಯಾಗಿ ನೆರವೇರಿದ ಚಿತ್ರದುರ್ಗದ ಹಿಂದೂ ಮಹಾಗಣಪತಿ ಉತ್ಸವ ಯಾತ್ರೆ..

- Advertisement -

Chithradurga news: ಚಿತ್ರರದುರ್ಗ: ಏಷ್ಯಾದಲ್ಲಿಯೇ ಹೆಚ್ಚು ಜನ ಸೇರುವ ಎರಡನೇ ಅದ್ದೂರಿ ಶೋಭಾ ಯಾತ್ರೆ ಅಂದರೆ ಅದು ನಮ್ಮ ಚಿತ್ರದುರ್ಗದ ಹಿಂದೂ ಮಹಾಗಣಪತಿ ಉತ್ಸವದ ಯಾತ್ರೆ. ಎಲ್ಲರ ಬಾಯಲ್ಲೂ ಗಣಪತಿ ಬಪ್ಪ ಮೋರೆಯಾ ಎಂಬ ಮಂತ್ರಘೋಷ ದಿಂದ ಪ್ರಾರಂಭವಾಗಿ, ಬಿಗಿ ಪೋಲಿಸ್ ಭದ್ರತೆ ಯೊಂದಿಗೆ ಅದ್ದೂರಿಯಾಗಿ ನಡೆಯಿತು.

ರಾಜ್ಯದ ವಿವಿಧ ಭಾಗಗಳಿಂದ ಈ ಯಾತ್ರೆಗೆ ಜನ ಆಗಮಿಸುತ್ತಾರೆ. ಇದರ ಜೊತೆಗೆ ಕಲಾತಂಡಗಳು . ಸ್ತಬ್ಧ ಚಿತ್ರಗಳ ಮೆರವಣಿಗೆ ಕಣ್ಮನ ಸೆಳೆಯುತ್ತದೆ. ಮನರಂಜನೆಗೆಂದು ಶಾಸಕರಾದ ವಿರೇಂದ್ರ ಪಪ್ಪಿಯವರು ಕರೆಸಿದ್ದ ಮುಂಬೈ ಡಿಜೆಗೆ, ಜನ ಹುಚ್ಚೆದ್ದು ಕುಣಿದು ಕುಪ್ಪಳಿಸಿದರು. ಇದರ ಜೊತೆಗೆ 3 ಡಿಜೆಗಳಿದ್ದವು. ನಗರದ ರಾಜ ಬೀದಿಗಳಲ್ಲಿ ಜನಸಾಗರವೇ ನೆರೆದಿತ್ತು .ವಯಸ್ಸಿನ ಹಂಗಿಲ್ಲದೇ, ಚಿಕ್ಕ ಮಕ್ಕಳು, ಮಹಿಳೆಯರು ಎಲ್ಲರೂ ಈ ಶೋಭ ಯಾತ್ರೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ಈ ಯಾತ್ರೆಯಲ್ಲಿ ಅಂದಾಜು 4 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಜನ ಬಾಗಿಯಾಗಿದ್ದರು ಈ ಯಾತ್ರೆಗೆ ಬರುವ ಭಕ್ತರಿಗೆ ನಗರದ ಕೆಲ ದಾನಿಗಳು ಸ್ವಯಂ ಅನ್ನದಾನ, ನೀರು, ಉಪಹಾರಗಳನ್ನು ನೀಡಿ ಸಹಕರಿಸಿದ್ದಾರೆ .ಡಿಜೆಗಳ ಮುಂದೆ ಯುವಕರ ಡ್ಯಾನ್ಸ್ ಜನಸಾಗರದ ನಡುವೆ ಬರಿ ಕೈಗಳೇ ಕಾಣುತ್ತಿತ್ತು. ಡಿಜೆ ಬೆಳಕಿನ ಚಿತ್ತಾರದ ನಡುವೆ ಯುವಕರ ಮಸ್ತ್ ಡಾನ್ಸ್ ಕಂಡು ಬಂತು.

ಒಟ್ಟಾರೆಯಾಗಿ ಹೇಳುವುದಾದರೆ ಏಷ್ಯಾದಲ್ಲಿಯೇ ಅತ್ಯಂತ ಪ್ರಸಿದ್ಧಿ ಪಡೆದ ಉತ್ಸವದ ವಿಸರ್ಜನಾ ಮೆರವಣಿಗೆ ಶಾಂತ ರೀತಿಯಿಂದ, ಸರ್ಕಾರದ ಮಾರ್ಗಸೂಚಿಗಳ ಪಾಲನೆಯ ಜೊತೆಗೆ, ಜನಸಾಗರದ ಜೈಕಾರ ಡ್ಯಾನ್ಸ್ ಇವುಗಳಿಂದ ಚಿತ್ರದುರ್ಗದ ಹಿಂದು ಮಹಾಗಣಪತಿ ವಿಸರ್ಜನ ಉತ್ಸವ ಅದ್ದೂರಿಯಾಗಿ ನಡೆಯಿತು..

ಆಂಜನೇಯ ನಾಯಕನಹಟ್ಟಿ, ಕರ್ನಾಟಕ ಟಿವಿ, ಚಿತ್ರದುರ್ಗ

Basavaraj Bommai : ಹುಬ್ಬಳ್ಳಿ : ಕಾಂಗ್ರೆಸ್ ವಿರುದ್ಧ ಬೊಮ್ಮಾಯಿ ವಾಗ್ದಾಳಿ

KMF-24 : ಮಹಾನಗರ ಪಾಲಿಕೆಯ ಸಾಧನೆ : ಕೆಎಂಎಫ್-24ರಲ್ಲಿ 3ನೇ ಸ್ಥಾನ..!

Election : ಪಂಚರಾಜ್ಯ ಚುನಾವಣೆಗಳ ದಿನಾಂಕ ಪ್ರಕಟ

- Advertisement -

Latest Posts

Don't Miss