Political News: ಹುಬ್ಬಳ್ಳಿ, ಅಕ್ಟೋಬರ್ : ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಸೋಲಿಗೆ ಕಾರಣ ಎನು ಎಂಬುದನ್ನು ಪಕ್ಷದ ಮಾಜಿ ಶಾಸಕ ಬಂಡೆಪ್ಪ ಕಾಶಂಪೂರ ಕಂಡುಹಿಡಿದಿದ್ದಾರೆ. ಪಕ್ಷದ ಪುನಃಶ್ಚೇತನ ಪರ್ವದಲ್ಲಿ ಭಾಷಣ ಮಾಡಿದ ಕಾಶಂಪೂರ ಅವರು ಮಾಟ ಮಂತ್ರದಿಂದಲೇ ನಾವು ಸೋತಿದ್ದು ಎಂದಿದ್ದಾರೆ. ಕಳೆದ ಚುನಾವಣೆಯಲ್ಲಿ ಕೇರಳ ಮಾದರಿ ಮಾಟ ಮಂತ್ರದಿಂದಲೇ ನಾವು ಸೋತಿದ್ದು. ಕಳೆದ ಚುನಾವಣೆಯಲ್ಲಿ ನಾವು 37 ಜನ ಗೆದ್ದಿದ್ವಿ. ಅದರಲ್ಲಿ ಏಳು ಜನ ಹೋಗಿ 30 ಜನ ಉಳಿದುಕೊಂಡಿದ್ವಿ. ಆದರೆ ಆ 30 ಜನರಲ್ಲಿ ಕೇವಲ ನಾಲ್ಕು ಜನ ಗೆದ್ದಿದ್ದಾರೆ. ಉಳಿದವರು ಸೋಲಲು ಮಾಟ ಮಂತ್ರ ಕಾರಣ ಎಂದು ಬಂಡೆಪ್ಪ ಹೇಳಿದ್ದಾರೆ.
ಇದು ನಿಮಗೆ ಯಾರಿಗೂ ಅರ್ಥ ಆಗಿಲ್ಲ. ಮಾಟ ಮಂತ್ರ ಮಾಡಿರೋದು ನೂರಕ್ಕೆ ನೂರು ನಿಜ. ಕಾಂಗ್ರೆಸ್ ನವರಿಗೆ 135 ಸೀಟ್ ಬರುತ್ತೆ ಅನ್ನೋದು ಗೊತ್ತಿರಲಿಲ್ಲ. ನಾವು 55 ಸೀಟ್ ಗೆಲ್ಲಬೇಕಿತ್ತು ಎಂದು ಬಂಡೆಪ್ಪ ಕಾಶಂಪೂರ ವ್ಯಾಖ್ಯಾನಿಸಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಒಂದೂ ಸ್ಥಾನವನ್ನ ಗೆಲ್ಲಬಾರದು. ಕಾಂಗ್ರೆಸ್ ವಿರುದ್ದ ಅವರದೇ 35 ಶಾಸಕರು ದಿನಾ ಒಂದು ಡೈಲಾಗ್ ಹೊಡಿತೀದಾರೆ. ಇನ್ನೊಂದು 20 ರಿಂದ 25 ಜನ ಡೈಲಾಗ್ ಹೊಡೆದರೂ ಸರ್ಕಾರದ ಕಥೆ ಮುಗೀತು ಎಂದು ಕಾಶಂಪೂರ ಅಭಿಪ್ರಾಯಪಟ್ಟಿದ್ದಾರೆ.
ದೇಶದ ಸುಭಿಕ್ಷೆಗಾಗಿ ಬಿಜೆಪಿ ಜತೆ ಹೊಂದಾಣಿಕೆ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ ಹೇಳಿಕೆ