Friday, March 14, 2025

Latest Posts

ಚಿಕ್ಕಿಯ ಮೂಗುತಿ ಮೆಚ್ಚಿಕೊಂಡ ಅಪ್ಪು ಪತ್ನಿ ಅಶ್ವಿನಿ..!

- Advertisement -

ಚಿಕ್ಕಿಯ ಮೂಗುತಿ .. ಕನ್ನಡ ಚಿತ್ರರಂಗದಲ್ಲಿ ಮಹಿಳೆಯರಿಂದಲೇ ಸಿದ್ಧವಾದ ಮತ್ತೊಂದು ಮಹಿಳಾ ಪ್ರಧಾನ ಸಿನಿಮಾ. ಇತ್ತೀಚಿಗೆ ಈ ಚಿತ್ರದ ಟೀಸರ್ ಬಿಡುಗಡೆ ಆಯಿತು. ಅಶ್ವಿನಿ ಪುನೀತ್ ರಾಜ್ ಕುಮಾರ್ ಚಿತ್ರದ ಟೀಸರ್ ನ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

ದೇವಿಕಾ ಜನಿತ್ರಿ ಈ ಚಿಕ್ಕಿಯ ಮೂಗುತಿ ಹಿಂದಿನ ಶಕ್ತಿ. ವಿಶೇಷ ಅಂದರೆ ಇದೇ ಹೆಸರಿನಲ್ಲಿ ಹಿಂದೆ ಇವರು ಕಾದಂಬರಿಯನ್ನ ಬರೆದಿದ್ದರು. ಇದೀಗ ತಮ್ಮದೇ ಕಾದಂಬರಿಯನ್ನಾಧರಿಸಿ ದೇವಿಕಾ ಸಿನಿಮಾವನ್ನ ನಿರ್ದೇಶಿಸಿದ್ದಾರೆ.  ಇಷ್ಟೇ ಅಲ್ಲ ಚಿತ್ರಕ್ಕೆ ತಮ್ಮ ಕಾಸನ್ನೇ ಸುರಿದಿದ್ದಾರೆ. ವಸ್ತ್ರ ವಿನ್ಯಾಸವನ್ನೂ ಮಾಡಿದ್ದಾರೆ. ಹೊಸದೊಂದು ಪ್ರಯಾಣವನ್ನ ಈ ಮೂಲಕ ಕನ್ನಡ ಚಿತ್ರರಂಗದಲ್ಲಿ ದೇವಿಕಾ ಜನಿತ್ರಿ ಪ್ರಾರಂಭ ಮಾಡಿದ್ದಾರೆ.

ಸಿಂಪಲ್ ಸುಂದರಿ ಶ್ವೇತಾ ಶ್ರೀವಾತ್ಸವ್.. ಹಿರಿಯ ನಟಿ ತಾರಾ.. ಭವಾನಿ ಪ್ರಕಾಶ್.. ಉರ್ವಿಯ ಬಾಬಿ ಭವಾನಿ ಪ್ರಕಾಶ್.. ಈ ಚಿತ್ರದ ಕೇಂದ್ರ ಬಿಂದು. ಇವರ ಜೊತೆ ಹಿರಿಯರಾದ ಅವಿನಾಶ್.. ತಬಲಾನಾಣಿ.. ರಂಗಾಯಣ ರಘು.. ಭರತ್ ಬೋಪಣ್ಣ ಕೂಡ ಚಿಕ್ಕಿಯ ಮೂಗುತಿಯ ಪ್ರಮುಖವಾದ ಭಾಗವಾಗಿದ್ದಾರೆ.

ಪೂರ್ಣಚಂದ್ರ ತೇಜಸ್ವಿ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ವೆಂಕಟೇಶ್ ಚಿತ್ರದ ಸಂಕಲನದ ಜೊತೆಗೆ ಛಾಯಾಗ್ರಹಣದ ಜವಾಬ್ದಾರಿಯನ್ನೂ ವಹಿಸಿಕೊಂಡು ಕೆಲಸ ಮಾಡಿದ್ದಾರೆ. ಸದ್ಯಕ್ಕೆ ಚಿಕ್ಕಿಯ ಮೂಗುತಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಡಿಸೆಂಬರ್ ಅಥವಾ ಜನವರಿಯಲ್ಲಿ ಚಿತ್ರ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Prajwal deveraj; ಮತ್ತೊಂದು ಸವಾಲಿನ ಪಾತ್ರಕ್ಕೆ ಡೈನಾಮಿಕ್ ಪ್ರಿನ್ಸ್ ಸಿದ್ದ..!

Priya wariyar : ಪಡ್ಡೆಗಳ ಹೃದಯಕ್ಕೆ ಕಿಚ್ಚು ಹಚ್ಚಿದ ಮಲಯಾಳಿ ಬೆಡಗಿ..!

Dhruva Sarja : ಥಾಯ್ಲೆಂಡ್ ಗೆ ಹೊರಟ ಮಾರ್ಟಿನ್ ಧ್ರುವ ಸರ್ಜಾ..? !

- Advertisement -

Latest Posts

Don't Miss