ಚಿಕ್ಕೋಡಿ :ಬೆಳಗಾವಿ ಜಿಲ್ಲೆಯ ರಾಜಕೀಯದಲ್ಲಿ ಡಿಕೆ ಶಿವಕುಮಾರ್ ಹಸ್ತಕ್ಷೇಪದಿಂದ ಬೇಸರವಾಗಿರುವ ಸತೀಶ್ ಜಾರಕೀಹೊಳಿ ಕುರಿತು ಜಿಲ್ಲೆಯ ಹುಕ್ಕೇರಿಯಲ್ಲಿ ಮಾಜಿ ಸಚಿವ ಎ.ಬಿ ಪಾಟೀಲ್ ಪ್ರತಿಕ್ರಿಯೆ ವ್ಯಕ್ತಪಡಿಸಿದರು.
ಸಂಪುಟದಲ್ಲಿ ಯಾವುದೇ ಒಳಜಗಳ ಇಲ್ಲ, ಎಲ್ಲರೂ ಕೂಡಿಯೇ ಕೆಲಸ ಮಾಡುತ್ತಿದ್ದೇವೆ. ಒಂದಾಗಿ ಕೆಲಸ ಮಾಡಿ ಎರಡೂ ಲೋಕಸಭೆ ಕ್ಷೇತ್ರದಲ್ಲಿ ಗೆಲ್ಲುತ್ತೇವೆ. ಜಾರಕಿಹೊಳಿ ಬೇಸರವಾಗಿರುವ ವಿಚಾರ ಕೇವಲ ಮಾಧ್ಯಮಗಳ ಸೃಷ್ಠಿ ಎಂದು ಮಾಜಿ ಸಚಿವ ಎ.ಬಿ ಪಾಟೀಲ್ ಹೇಳಿದರು.
ಬೆಳಗಾವಿ ಜಿಲ್ಲಾ ಬಿಜೆಪಿ ನಾಯಕರು ಕಾಂಗ್ರೆಸ್ ಸೇರ್ಪಡೆ ವಿಚಾರ
ಬಿಜೆಪಿಯಿಂದ ಬಹಳಷ್ಟು ಜನ ಕಾಂಗ್ರೆಸ್ ಗೆ ಬರ್ತಿದ್ದು ನಮ್ಮ ಸಂಪರ್ಕದಲ್ಲಿದ್ದಾರೆ, ಕೆಲವೇ ದಿವಸ ಕಾದು ನೋಡಿ ಬಹಳಷ್ಟು ಬಿಜೆಪಿ ನಾಯಕರು ನಮ್ಮ ಪಕ್ಷ ಸೇರ್ತಾರೆ. ಇನ್ನು ಬಿಜೆಪಿ ಮಾಜಿ ಸಂಸದ ರಮೇಶ್ ಕತ್ತಿಯವರು ಬಿಜೆಪಿ ಟಿಕೆಟ್ ಪ್ರಯತ್ನಿಸುತ್ತಿರುವುದಾಗಿ ಹೇಳುತ್ತಿದ್ದಾರೆ. ಆದರೆ ಅವರು ಕಾಂಗ್ರೆಸ್ ಸೇರೋದಾಗಿ ಎಲ್ಲಿಯೂ ಹೇಳಿಲ್ಲ.
ಸ್ವಇಚ್ಛೆಯಿಂದ ರಮೇಶ್ ಕತ್ತಿ ಕಾಂಗ್ರೆಸ್ ಬರ್ತಾರೆ ಅಂದ್ರೆ ವಿಚಾರ ಮಾಡ್ತೀವಿ, ನಾವೇನೂ ವಿರೋಧ ಮಾಡಲ್ಲ.ಅವರ ಬಗ್ಗೆ ಈಗ ಮಾತನಾಡುವುದು ಅಪ್ರಸ್ತುತ. ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಬಣ ಇಲ್ಲ
ಡಿ.ಕೆ ಶಿವಕುಮಾರ್ ಡಿಸಿಎಂ ಆದ ನಂತರ ಮೊದಲ ಬಾರಿಗೆ ಹುಕ್ಕೇರಿಗೆ ಭೇಟಿ ನೀಡುತ್ತಿದ್ದು ಹಿರೇಮಠದ ರೇಣುಕಾ ಶ್ರೀ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರಿಂದ ಡಿಕೆಶಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಈ ಕಾರ್ಯಕ್ರಮದಲ್ಲಿ ಸಚಿವರಾದ ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ಜಿಲ್ಲಾ ಕಾಂಗ್ರೆಸ್ ಶಾಸಕರಿಗೆ ಆಹ್ವಾ ನ ನೀಡಿದ್ದೇವೆ ಎಂದು ಹುಕ್ಕೇರಿಯಲ್ಲಿ ಮಾಜಿ ಸಚಿವ ಎ.ಬಿ ಪಾಟೀಲ್ ಹೇಳಿಕೆ
ನೀಡಿದರು.
‘ಜನ ತಿರಸ್ಕಾರ ಮಾಡಿ ಮನೆಗೆ ಕಳಸಿದ್ರು, ಭ್ರಷ್ಟಾಚಾರದ ಬಗ್ಗೆ ಮಾತಾಡೋಕೆ ಏನು ನೈತಿಕತೆ ಇದೆ..?’