Belagavi crime News: ಬೆಳಗಾವಿ : ಕೊಲೆ ಮಾಡಿ ಕಾಣೆಯಾದ ಕಥೆ ಕಟ್ಟಿದವರು ಮೂರು ವರ್ಷದ ಬಳಿಕ ಅಂದರ್ ಆದ ಘಟನೆ ಬೆಳಗಾವಿಯ, ಮೂಡಲಗಿಯಲ್ಲಿ ನಡೆದಿದೆ.
ಶೀವಲೀಲಾ ವಿಠ್ಠಲ್ ಬಂಗಿ (32) ಕೊಲೆಯಾದ ದುರ್ದೈವಿಯಾಗಿದ್ದು, ಈಕೆಯನ್ನು ಕೊಲೆಗೈದವರು, ಈಕೆ ಕಾಣೆಯಾಗಿದ್ದಾಳೆಂದು ಕಥೆ ಕಟ್ಟಿದ್ದರು. ಆದರೆ ಕೊನೆಗೂ ಸತ್ಯ ಹೊರಬಿದ್ದಿದ್ದು, ಆ ಮಹಿಳೆ ಕಾಣೆಯಾಗಿಲ್ಲ. ಬದಲಾಗಿ ಆಕೆಯ ಪತಿ ಮತ್ತು ಇನ್ನಿತರರು ಸೇರಿ, ಆಕೆಯ ಕೊಲೆ ಮಾಡಿದ್ದಾರೆಂದು ಗೊತ್ತಾಗಿದೆ. ಅಲ್ಲದೇ ಆರೋಪಿಗಳನ್ನು ಬಂಧಿಸಲಾಗಿದೆ.
ವಿಠ್ಠಲ್ ಲಕ್ಷಣ ಬಂಗಿ, ಸಿದಗೊಂಡ ಕಂಬಳಿ, ಲಕ್ಕಪ್ಪ ಕಂಬಳಿ, ಬಸವರಾಜ್ ಕಬ್ಬೂರೆ, ಅಶೋಕ್ ಮೊಕಾಶಿ ಕೊಲೆ ಆರೋಪಿಗಳಾಗಿದ್ದು, ವಿಠ್ಠಲ್ ಬಂಗಿ ಕೊಲೆಯಾದ ಶಿವಲೀಲಾಳ ಪತಿಯಾಗಿದ್ದಾನೆ. ಲಕ್ಕಪ್ಪ ಕಂಬಳಿ, ಸಿದಗೊಂಡ ಕಂಬಳಿ ಕೊಲೆಯಾದ ಶಿವಲೀಲಾ ಸಹೋದರರು.
ಇನ್ನು ಶಿವಲೀಲಾಳ ಕೊಲೆಗೆ ಕಾರಣವೇನೆಂದು ಕೇಳಿದಾಗ, ಆಕೆ ಸರಿ ಇರಲಿಲ್ಲ. ಆದ್ದರಿಂದ ಹೀಗೆ ಮಾಡಿದ್ದೇವೆಂದು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. 2020ರ ಜನವರಿಯಲ್ಲಿ ಶಿವಲೀಲಾ ಆರೋಪಿಗಳು, ಈಕೆಯ ಕೊಲೆ ಮಾಡಿ, ನಿರ್ಜನ ಪ್ರದೇಶದಲ್ಲಿ ಶವ ಎಸೆದಿದ್ದರು.
ಸವದತ್ತಿ ತಾಲೂಕಿನ ಹಿರೇಬುದುನೂರು ಗ್ರಾಮದ ಅರಣ್ಯ ಪ್ರದೇಶದಲ್ಲಿ ಶವ ಬಿಸಾಕಿದ್ದರು. ಬಳಿಕ ತಮಗೇನೂ ಗೊತ್ತೇ ಇಲ್ಲವೆಂಬಂತೆ, ಮನೆ ಸೇರಿದ್ದರು. ಆದರೆ 3 ವರ್ಷದ ಬಳಿಕ, ಶಿವಲೀಲಾ ತಲೆ ಬುರುಡೆ ಮಾತ್ರ ಪತ್ತೆಯಾಗಿದ್ದು, ಸತ್ಯ ಹೊರಬಿದ್ದಿದೆ. ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
MTB Nagaraj : ಶಾಸಕ ಶರತ್ ಬಚ್ಚೇಗೌಡ ವಿರುದ್ಧ ಮತ್ತೆ ಆರೋಪಿಸಿದ ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್
ಜನತಾ ದರ್ಶನದಲ್ಲಿ ಜನರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಭರವಸೆ ಮೂಡಿಸಿದ ಜಿಲ್ಲಾಧಿಕಾರಿ