ಹಬ್ಬಕ್ಕೆ ವಿಶೇಷ ರೈಲು, ಹುಬ್ಬಳ್ಳಿ-ಮಂಗಳೂರು- ಬೆಂಗಳೂರು ಪ್ರಯಾಣ ಸುಲಭ!

Hubballi News: ರೈಲು ಒಟ್ಟು ಹತ್ತೊಂಬತ್ತು ಕೋಚ್‌ಗಳನ್ನು ಹೊಂದಿರುತ್ತದೆ ಎಂದು ನೈಋತ್ಯ ರೈಲ್ವೆ ಮಾಹಿತಿ ನೀಡಿದೆ. ಅಲ್ಲದೇ ಈ ರೈಲಿನ ಸದುಪಯೋಗ ಪಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

ದಸರಾ ಸಮಯದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾದ ಕಾರಣ ನೈಋತ್ಯ ರೈಲ್ವೆ (SWR) ದಸರಾ ವಿಶೇಷ ರೈಲು ಸೇವೆಗಳನ್ನು ಆರಂಭಿಸಿದೆ. ಹುಬ್ಬಳ್ಳಿ-ಮಂಗಳೂರು-ಬೆಂಗಳೂರಿನ ಪ್ರಯಾಣಿಕರಿಗಂತೂ ಈ ವಿಶೇಷ ರೈಲುಗಳು ಉತ್ತಮ ಸೌಲಭ್ಯ ಒದಗಿಸಲಿವೆ.ರೈಲು ಸಂಖ್ಯೆ 07303/07304 ದಸರಾ ಹಬ್ಬದ ಸಲುವಾಗಿ ಹುಬ್ಬಳ್ಳಿ, ಮಂಗಳೂರು ಜಂಕ್ಷನ್ ಮತ್ತು ಯಶವಂತಪುರಗಳ ನಡುವೆ ಎರಡು ಟ್ರಿಪ್ ವಿಶೇಷ ಸೇವೆಯನ್ನು ಮೂಲಕ ನಡೆಸುತ್ತದೆ.

ರೈಲು ಸಂಖ್ಯೆ 07303 ಅಕ್ಟೋಬರ್ 20 ಮತ್ತು 23, 2023 ರಂದು ಹುಬ್ಬಳ್ಳಿಯಿಂದ ಹೊರಟು ಮರುದಿನ ಮಂಗಳೂರು ಜಂಕ್ಷನ್‌ಗೆ ಆಗಮಿಸುತ್ತದೆ. ರೈಲು ಸಂಖ್ಯೆ 07304 ಅಕ್ಟೋಬರ್ 21 ಮತ್ತು 24, 2023 ರಂದು ಮಂಗಳೂರು ಜಂಕ್ಷನ್‌ನಿಂದ ಹೊರಟು ಮರುದಿನ ಹುಬ್ಬಳ್ಳಿಗೆ ಆಗಮಿಸುತ್ತದೆ.

ರೈಲು ಒಟ್ಟು ಹತ್ತೊಂಬತ್ತು ಕೋಚ್‌ಗಳನ್ನು ಹೊಂದಿರುತ್ತದೆ ಎಂದು ನೈಋತ್ಯ ರೈಲ್ವೆ ಮಾಹಿತಿ ನೀಡಿದೆ. ಅಲ್ಲದೇ ಈ ರೈಲಿನ ಸದುಪಯೋಗ ಪಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ರೈಲಿನ ದರ ನಿಲುಗಡೆ ಮತ್ತು ಸಮಯಗಳ ಬಗ್ಗೆ ನಿರ್ದಿಷ್ಟ ವಿವರಗಳಿಗಾಗಿ, ಪ್ರಯಾಣಿಕರು ಭಾರತೀಯ ರೈಲ್ವೆಯ ಅಧಿಕೃತ ವಿಚಾರಣೆ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಮಾಹಿತಿ ಪಡೆಯಬಹುದಾಗಿದೆ.

ಒಟ್ಟಾರೆ ಹಬ್ಬದ ರಜಾದಿನಗಳಿಗೆ ಪ್ರವಾಸಕ್ಕೆ ತೆರಳುವವರು ಈ ವಿಶೇಷ ರೈಲ್ವೆ ಸೇವೆಯನ್ನು ಬಳಸಿಕೊಳ್ಳಬಹುದಾಗಿದೆ.

‘ನಾನೇ ಅಂತರ್ಜಾತಿ ವಿವಾಹ ಆಗಿದ್ದೇನೆ. ನಾನೇನು ಚೇಂಜ್ ಆಗಿದ್ದೀನಾ..?’

1150 ಪ್ಯಾಕೇಟ್ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿ ವಶ

ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ತಮ್ಮ ಹೆಸರು ಪ್ರಸ್ತಾಪ ವಿಚಾರಕ್ಕೆ ಸ್ಪಷ್ಟನೆ ನೀಡಿದ ಸವದಿ..

About The Author