Bengaluru Political News: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಬೆಂಗಳೂರಿನ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ್ದು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇವತ್ತು ನಮ್ಮ ರಾಜ್ಯದಲ್ಲಿ ವಿದ್ಯುತ್ ಉತ್ಪಾದನಾ ಸಾಮರ್ಥ್ಯ 3906.6 ಮೆ.ವ್ಯಾ. ಜಲವಿದ್ಯುತ್. 5020ಮೆ. ವ್ಯಾ. ಉಷ್ಣ ವಿದ್ಯುತ್. 2050 ಮೆ.ವ್ಯಾ. ಖಾಸಗಿ ಕಂಪನಿಗಳು. ಒಟ್ಟು 9947 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ರಾಜ್ಯ ಕ್ಕೆ ಇದೆ. 16867.63 ಮೆಗಾ ವ್ಯಾಟ್ ವಿದ್ಯುತ್ ಅನ್ನು ಇವತ್ತೂ ಉತ್ಪಾದನೆ ಮಾಡಬಹುದು. ಆದ್ರೆ ಮಾಡ್ತಿಲ್ಲ. ಇಂತಹ ಬರಗಾಲದ ನಡುವೆಯೂ ಉತ್ಪಾದನೆ ಮಾಡಲು ಸಮಸ್ಯೆ ಇಲ್ಲ. ಗ್ಯಾರಂಟಿಗಳ ನಡುವೆ ಇದೆಲ್ಲಾ ಬಿಟ್ಟರು. ಮಾತಿಗೆ ಮುಂಚೆ , ಕಮಿಷನ್, ಪರ್ಸಂಟೇಜ್, ವರ್ಗಾವಣೆ ಧಂದೆ ಮಾಡಿಕೊಂಡು ಕೂತ್ರಿ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಹೆಚ್ಡಿಕೆ ಆಕ್ರೋಶ ಹೊರಹಾಕಿದ್ದಾರೆ.
ಕೃತಕ ಅಭಾವ ತೋರಿಸ್ತಾ ಇದಾರೆ. ಯಾಕೆ ತೋರಿಸ್ತಾ ಇದಾರೆ.? ಬೇರೆ ಕಡೆ ಖರೀದಿ ಮಾಡಿದ್ರೆ ತಾನೇ ಅವರಿಗೂ ಬರೋದು? ವಿದ್ಯುತ್ ಕೃತಕ ಅಭಾವ ಸೃಷ್ಟಿ ಮಾಡಿ ಖಾಸಗಿ ಕಡೆಯಿಂದ ಖರೀದಿ ಮಾಡಿ ಪರ್ಸಂಟೇಜ್ ಹೊಡೆಯುತ್ತಿದ್ದಾರೆ. ಎಷ್ಟು ಪರ್ಸಟೆಜ್ ಅಂತಾ ಅವರನ್ನೇ ಕೇಳಿ ಕೊಳ್ಳಿ. ಜಾರ್ಜ್ ಗೆ ಹಣದ ಕೊರತೆ ಇಲ್ಲ. ಹೈಕಮಾಂಡ್ ಏನಾದ್ರೂ ಇವರಿಂದ ಬಯಸಿದೆಯೋ ಏನೋ ಗೊತ್ತಿಲ್ಲ ಎಂದು ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ನಿಮ್ಮದೇ ಸಮ್ಮಿಶ್ರ ಸರ್ಕಾರ ಇತ್ತು. ಯಾಕೆ ಕ್ರಮ ತೆಗೆಕೊಳ್ಳಲಿಲ್ಲ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ, ನಾವು ಅವಕಾಶವಾದಿಗಳು. ಅವರು ಹರಿಶ್ಚಂದ್ರರು. ಎರಡು ಸಲ ಕೂಡಾ ಅವರ ಮಾತಿನ ಪ್ರಕಾರ ಅವಕಾಶವಾದಿತನದಲ್ಲಿ ಸರ್ಕಾರ ಮಾಡಿದ್ದೆ. ಅವರ ಮೇಲೆ ಕ್ರಮ ತೆಗೆದು ಕೊಳ್ಳಲು ಆಗ್ತಿತ್ತಾ..? ಎನ್ನುವ ಮೂಲಕ ಕುಮಾರಸ್ವಾಮಿ ತಮ್ಮ ಸಿಎಂ ಅವಧಿ ಬಗ್ಗೆ ವ್ಯಂಗ್ಯ ಉತ್ತರ ನೀಡಿದ್ದಾರೆ.
ಒಂದು ಕಡೆ ರೈತರಿಗೆ ಐದು ಗಂಟೆ ವಿದ್ಯುತ್ ಕೊಡ್ತೀವಿ ಅಂತೀರಿ. ಮತ್ತೊಂದು ಕಡೆ ಕೈಗಾರಿಕೋದ್ಯಮಿಗಳಿಗೆ ನಿರಂತರ ವಿದ್ಯುತ್ ಕೊಡ್ತೀವಿ ಅಂತೀರಾ. ಮತ್ತೆ ವಿದ್ಯುತ್ ಕೊರತೆ ಅಂತೀರಾ. ಕಮೀಷನ್ ಹೊಡೆದಿದ್ದು ಸಾಕು. ನಾನು ಅಸೂಯೆಗೆ ಹೇಳ್ತಾಇಲ್ಲ. ರಾಜ್ಯದ ಜನರ ಕೆಲಸ ಮಾಡಿ. ನಾನು ಮಾಹಿತಿ ಇಲ್ಲದೇ ಯಾವ ವಿಚಾರ ಕೂಡಾ ಚರ್ಚೆ ಮಾಡಲ್ಲ. ಬಿಚ್ಚಿಡ್ತೀನಿ ಅಂತಾರಲ್ಲ. ಅದೇನು ಬಿಚ್ಚಿಡ್ತೀರೋ ಇಡಲಿ. ಬಂದ ಕೂಡಲೇ ಬಂಧಿಖಾನೆ ಸಚಿವರು ಆಗಿದ್ರಿ. ಅಲ್ಲಿಂದಲೇ ಬಂದವರಲ್ವಾ. ಬಿಚ್ಡಿಡೀ ಬೇಗ. ಅದಕ್ಕೂ ಮುಂಚೆ ಬೇರೆ ಏನಾದ್ರೂ ಆದ್ರೆ ಕಷ್ಟ ಎಂದು ಹೆಚ್ಡಿಕೆ ಟಾಂಗ್ ನೀಡಿದ್ದಾರೆ.
‘ನಮ್ಮ ಲೆಕ್ಕಾಚಾರದ ಪ್ರಕಾರ 2024 ಕ್ಕೆ ಮೋದಿ ಸರ್ಕಾರ ದೇಶದಲ್ಲಿ ಇರಲ್ಲ’
ರೈತರ ಗೋಳು ಕೇಳುವರಾರು? ಕೈ ಕೊಟ್ಟ ಮಳೆರಾಯ: ನೀರಿಲ್ಲದೇ ಒಣಗಿದ ಬೆಳೆಗಳು
ಅಕ್ರಮ ಮರಳು ಫಿಲ್ಟರ್ ದಂಧೆ ಮೇಲೆ ಭೂ ಮತ್ತು ಗಣಿ ಇಲಾಖೆ ಕಡಕ್ ಅಧಿಕಾರಿ ಬಿಂದನಾ ಪಾಟೀಲ್ ದಾಳಿ