ಕಾರು -ಟಾಟಾ ಏಸ್ ನಡುವೆ ಭೀಕರ ಅಪಘಾತ – ಇಬ್ಬರು ಸ್ಥಳದಲ್ಲೇ ಸಾವು

Bellary crime news: ಬಳ್ಳಾರಿ: ಕಾರು ಹಾಗೂ ಟಾಟಾ ಏಸ್ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವಿಗೀಡಾದ ಘಟನೆ ಬಳ್ಳಾರಿ ತಾಲೂಕಿನ ಹಲಕುಂದಿ ಮತ್ತು ಮೀಂಚೇರಿ ಮಧ್ಯೆ ಹಾದು ಹೋಗುವ ಬೆಂಗಳೂರು ಹೆದ್ದಾರಿಯಲ್ಲಿ ನಡೆದಿದೆ. ಘಟನೆಯಲ್ಲಿ ಇಬ್ಬರು ಸಾವನಪ್ಪಿ ಮತ್ತೊರ್ವನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಟಾಟಾ ಏಸ್‌ನಲ್ಲಿ ಮಿಂಚೇರಿ ಕಡೆಯಿಂದ ಹಲಕುಂದಿಗೆ ತೆರಳುತ್ತಿದ್ದರು. ಈ ವೇಳೆ ಬೆಂಗಳೂರು ಕಡೆಯಿಂದ ಬಳ್ಳಾರಿಗೆ ಹೊರಟಿದ್ದ ಕಾರು ಮಧ್ಯೆ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಟಾಟಾ ಏಸ್‌ನಲ್ಲಿದ್ದ ಇಬ್ಬರು ಸಾವಿಗೀಡಾಗಿದ್ದಾರೆ. ಮೃತರನ್ನು ಬಳ್ಳಾರಿ ತಾಲೂಕಿನ ಮೀಂಚೇರಿ ನಿವಾಸಿಗಳಾದ ಕಂಪ್ಲಿ ಹುಸೇನ್ ಮತ್ತು ಮುಸ್ಕಿಲ್ ಎಂದು ಗುರುತಿಸಲಾಗಿದೆ. ಈ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಬಿಚ್ಚಿಡ್ತೀನಿ ಅಂತಾರಲ್ಲ. ಅದೇನು ಬಿಚ್ಚಿಡ್ತಾರೋ ಇಡಲಿ’

‘ಜನರೂ ಕೂಡಾ ಕಾಂಗ್ರೆಸ್ಸಿಗರ ನುಡಿ ಮುತ್ತುಗಳನ್ನು ಕೇಳ್ತಾ ಇದ್ದಾರೆ’

‘ಆಸ್ಟ್ರೇಲಿಯಾಗೆ ಬೆಂಬಲ ಕೊಡಲು ಹೋಗಿದ್ರಾ,..? ಪಾಕಿಸ್ತಾನಕ್ಕೆ ಬೆಂಬಲ ಕೊಡಲು ಹೋಗಿದ್ರಾ..?’

About The Author