Political News: ಬೆಂಗಳೂರು: ವಿಧಾನಸಭೆ ಚುನಾವಣೆ ಹೀನಾಯ ಸೋಲಿನ ಬಳಿಕ ರಾಜ್ಯ ಬಿಜೆಪಿ ಸ್ಥಿತಿ ಯಾರಿಗೂ ಬೇಡವಾಗಿದೆ. ರಾಜ್ಯ ನಾಯಕರು ಅಂದರೆ ಹೈಕಮಾಂಡ್‌ಗೂ ಲೆಕ್ಕಕ್ಕೇ ಇಲ್ಲ. ಈದಕ್ಕೆ ಎಲೆಕ್ಷನ್ ಮುಗಿದು ಅರ್ಧವರ್ಷವಾದರೂ ವಿಪಕ್ಷ ನಾಯಕ ರಾಜ್ಯಾಧ್ಯಕ್ಷನ ಆಯ್ಕೆ ಆಗಿಲ್ಲ. ಒಂದೆಡೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸೈಲೆಂಟ್ ಆಗಿದ್ದಾರೆ. ಈ ಮಧ್ಯೆ ಹಿರಿಯ ನಾಯಕ ಸದಾನಂದ ಗೌಡರ ಬೇಸರಕ್ಕೆ ಮುಲಾಮ್ ಹಚ್ಚುವ ಕೆಲಸಕ್ಕೆ ಕೈ ಹಾಕಿದಂತಿದೆ ಹೈಕಮಾಂಡ್.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾಯಕರ ನಡುವೆ ಫೈಟ್
ವಿಧಾನಸಭೆ ಸೋಲಿನ ಬಳಿಕ ಬಿಜೆಪಿ ರಾಜ್ಯಧ್ಯಕ್ಷರ ಬದಲಾವಣೆ ವಿಚಾರ ಮುನ್ನೆಲೆಗೆ ಬಂದರು ಹೈಕಮಾಂಡ್ ನಾಯಕರು ಮಾತ್ರ ಸುಮ್ಮನಾಗಿದ್ದರು. ಇದು ವಿಪಕ್ಷಗಳ ಟೀಕೆಗೂ ಗುರಿಯಾಗಿತ್ತು. ಅಲ್ಲದೇ ಖುದ್ದು ಡಿವಿ ಸದಾನಂದಗೌಡ ಕೂಡ ಹೈಕಮಾಂಡ್ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಆದರೆ ಈಗ ಲೋಕಸಭಾ ಚುನಾವಣೆ ದೃಷ್ಠಿಯಿಂದ ಹೊಸ ಅಧ್ಯಕ್ಷರ ನೇಮಕಕ್ಕೆ ಕಮಲ ಪಡೆ ಮುಂದಾದಂತಿದೆ.
‘ಆಸ್ಟ್ರೇಲಿಯಾಗೆ ಬೆಂಬಲ ಕೊಡಲು ಹೋಗಿದ್ರಾ,..? ಪಾಕಿಸ್ತಾನಕ್ಕೆ ಬೆಂಬಲ ಕೊಡಲು ಹೋಗಿದ್ರಾ..?’