Hassan Political news: ಹಾಸನ: 2024ರ ಲೋಕಸಭಾ ಚುನಾವಣೆಗಾಗಿ ಹಾಸನದಲ್ಲಿ ಕಾಂಗ್ರೆಸ್ ಸಭೆ ಏರ್ಪಡಿಸಲಾಗಿತ್ತು. ಆದರೆ ಈ ವೇಳೆ ಕಾಂಗ್ರೆಸ್ ನಾಯಕರ ನಡುವೆ ಜಟಾಪಟಿ ಏರ್ಪಟ್ಟಿದ್ದು, ವೇದಿಕೆ ಮೇಲೆ ಕಾರ್ಯಕರ್ತರ ವರ್ತನೆಗೆ ಕೃಷಿ ಸಚಿವ ಚೆಲುವರಾಯಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ. ನೀವು ಈ ರೀತಿ ಗಲಾಟೆ ಮಾಡಿದ್ರೆ ನಾನು ಹೊರಟು ಹೋಗ್ತಿನಿ. ನನ್ನ 40 ವರ್ಷದಲ್ಲಿ ಈ ರೀತಿ ಸಭೆ ನಾನು ನೋಡಿಲ್ಲ ಎಂದು ಹೇಳಿದರು.
ಇನ್ನು ಈ ಜಗಳ ನಡೆಯೋಕ್ಕೆ ಕಾರಣವೇನು ಅಂತಾ ಹೇಳಿದರೆ, ಹಾಸನ ಹೊರವಲಯದ ಕಲ್ಯಾಣ ಮಂಟಪವೊಂದರಲ್ಲಿ, ಕಾಂಗ್ರೆಸ್ ಸಭೆ ನಡೆಯುತ್ತಿತ್ತು. ಈ ವೇಳೆ ಮುಖಂಡ ಹೆಚ್ ಕೆ ಮಹೇಶ್ ಅವ್ರಿಗೆ ವೇದಿಕೆ ಮೇಲೆ ಆಸನ ಸಿಕ್ಕಿಲ್ಲ ಎಂಬ ಕಾರಣಕ್ಕೆ, ಅವರ ಬೆಂಬಲಿಗರು ಗದ್ದಲ ಶುರು ಮಾಡಿದ್ದಾರೆ. ಈ ವೇಳೆ ಮಾತನಾಡಿದ ಸಚಿವ ಚೆಲುವರಾಯಸ್ವಾಮಿ, ನೀವು ಈ ರೀತಿ ಮಾಡಿದ್ರೆ ಕಷ್ಟ. ಎಲ್ಲವನ್ನ ಸರಿ ಮಾಡೋಣ. ಸಣ್ಣ ಪುಟ್ಟ ವ್ಯತ್ಯಾಸಗಳನ್ನ ಸರಿ ಮಾಡಿಕೊಂಡು ಹೋರಾಡೋಣ ಎಂದು ಹೇಳುವ ಮೂಲಕ, ಎಲ್ಲ ಕಾರ್ಯಕರ್ತರನ್ನು ಸಮಾಧಾನ ಪಡಿಸಿದ್ದಾರೆ.