Tuesday, December 24, 2024

Latest Posts

ವೇದಿಕೆ ಮೇಲೆ ಬೇಲೂರು ಶಾಸಕ-ಅರಸಿಕೆರೆ ಶಾಸಕರ ಜಗಳ: ಸ್ಪಷ್ಟನೆ ನೀಡಿದ ಸಚಿವ ರಾಜಣ್ಣ

- Advertisement -

Hassan Political News: ಹಾಸನ: ಕೆಲ ದಿನಗಳ ಹಿಂದೆ ನಡೆದ ಕಾಂಗ್ರೆಸ್ ಸಭೆಯಲ್ಲಿ, ಸಚಿವ ರಾಜಣ್ಣರ ಎದುರಲ್ಲೇ, ಬೇಲೂರು ಶಾಸಕ ಮತ್ತು ಅರಸಿಕೆರೆ ಶಾಸಕರು ಜಿದ್ದಾ ಜಿದ್ದಿ ನಡೆಸಿದ್ದು, ಈ ಬಗ್ಗೆ ರಾಜಣ್ಣ ಪ್ರತಿಕ್ರಿಯಿಸಿದ್ದಾರೆ.

ಸಭೆ ಸಮಾರಂಭದಲ್ಲಿ ಅಧ್ಯಕ್ಷರ ಭಾಷಣದ ನಂತರ ಅಥವಾ ಗುರುಗಳ ಆಶೀರ್ವಾದ ವಚನದ ಬಳಿಕ ಸಾಮಾನ್ಯವಾಗಿ ಯಾರಿಗೂ ಮಾತನಾಡಲಿಕ್ಕೆ ಅವಕಾಶ ಕೊಡುವುದಿಲ್ಲ. ಆ ದಿವಸದ ಸಭೆಯ ಅಧ್ಯಕ್ಷರು ಶಿವಲಿಂಗೇಗೌಡರು ಅವರು ಅಧ್ಯಕ್ಷರ ಭಾಷಣದ ಬಳಿಕ ಬಂದು ಮಾತನಾಡಿದರು.  ಆದ್ರೂ ಸಭೆಯ ಸಂಪ್ರದಾಯದ ವಿರುದ್ಧವಾಗಿ ನಾವು ಮಾತನಾಡಕ್ಕೆ ಅವಕಾಶ ಕೊಟ್ಟೆವು.

ಹಾಗೆ ಅವಕಾಶ ಕೊಟ್ಟಾಗ, ಅವರು ಮಾತತನಾಡುವ ಅವಸರದಲ್ಲಿ ತಪ್ಪು ಮಾಹಿತಿಯನ್ನು ಕೊಟ್ಟಿದ್ದಾರೆ. ಆಗ ಅವರು ನೀಡಿದ ಮಾಹಿತಿ ಸರಿಯಿಲ್ಲವೆಂದು ಅಧ್ಯಕ್ಷರು ಮಾತನಾಡಿದ್ದಾರೆ ಅಷ್ಟೇ. ಅದರಲ್ಲಿ ಏನೂ ಗೊಂದಲವಿಲ್ಲ. ಅವರು ಹೇಳಿದ ಮಾಹಿತಿ ಸರಿಯಿಲ್ಲ ಅಂತ ಅಧ್ಯಕ್ಷರು ಮಾತನಾಡಿದರೆ ಅಷ್ಟೇ ಅದರಲ್ಲಿ ಏನು ಗೊಂದಲವಿಲ್ಲ. ಅವರ ಹೇಳಿಕೆಯ ಉದ್ದೇಶವೇನೆಂದರೆ, ಜನರಿಗೆ ಅನಾನಕೂಲವಾಗುವ ಬದಲು, ಅನುಕೂಲವಾಗಲಿ ಎಂದಷ್ಟೇ. ಅದಕ್ಕೆ ಹೆಚ್ಚು ಮಹತ್ವ ಕೊಡುವ ಅವಶ್ಯಕತೆ ಇಲ್ಲ. ಎಂದು ರಾಜಣ್ಣ ಸ್ಪಷ್ಟನೆ ನೀಡಿದ್ದಾರೆ.

‘ಯಾರೋ ಗಿರಾಕಿ ಲಂಚ ಪಡೆದಿರುವ ಆರೋಪಿ ಯಾರೆಂದು ಬಹಿರಂಗ ಪಡಿಸಲಿ’

‘ಶುಭ ಅಷ್ಟಮಿ ದಿನ, ನನಗೆ ಅಷ್ಟೈಶ್ವರ್ಯ ಒಲಿದ ಸಂಭ್ರಮ!’

ಚೆಂದದ ನರ್ಸ್ಗಳು ಅಜ್ಜ ಅಂತಾರೆ: ಕಾಂಗ್ರೆಸ್ ಶಾಸಕ ಬೇಸರ

- Advertisement -

Latest Posts

Don't Miss