Tuesday, October 14, 2025

Latest Posts

‘ಬಿಜೆಪಿ ಹಾಗೂ ಜನತಾದಳಕ್ಕೆ ಪರಿಸ್ಥಿತಿಗೆ ಕೆಟ್ಟಿದೆ. ಅವರು ಏನಾದ್ರೂ ಹುಡುಕ್ತಾ ಇರ್ತಾರೆ’

- Advertisement -

Hassan Political News: ಹಾಸನ: ಹಾಸನದಲ್ಲಿ ಲೋಕಸಭೆ ಚುನಾವಣೆಯ ಪೂರ್ವಭಾವಿ ಸಭೆ ನಡೆದಿದ್ದು, ಈ ವೇಳೆ ಮಾತನಾಡಿದ ಕೃಷಿ ಸಚಿವ ಚೆಲುವರಾಯಸ್ವಾಮಿ, ಡಿಕೆಶಿ ನೀಡಿರುವ ಹೇಳಿಕೆ ಬಗ್ಗೆ ಮಾತನಾಡಿದ್ದಾರೆ.

ಸರ್ ಡಿಕೆ ಶಿವಕುಮಾರ್ ಹೇಳಿದರಲ್ಲ, ಶಾಸಕರು ಯಾವುದೇ ಮಾಧ್ಯಮದವರ ಮುಂದೆ ಮಾತಾಡಬಾರದು ಅಂತ. ಪಕ್ಷದ ಅಧ್ಯಕ್ಷರನ್ನು ಕೇಳಬೇಕು ನೀವು. ನನ್ನ ಕೇಳಿದ್ರೆ..? ಅಧ್ಯಕ್ಷರು ಯಾವ ಕಾರಣಕ್ಕೆ ಯಾವ ವಿಚಾರಕ್ಕೆ ಹೇಳಿದ್ದಾರೆ ನನಗೆ ಗೊತ್ತಿಲ್ಲ.  ಬೇರೆ ಪಾರ್ಟಿ ಮುಜುಗರ ಆಗುವಂತದ್ದು ಇದ್ದರೆ ನನ್ನ ಬಳಿ ಅಥವಾ ಮುಖ್ಯಮಂತ್ರಿಗಳು ಮಾತನಾಡಿ ಅಂತ ಹೇಳಿರಬಹುದು. ಸೂಚನೆ ಕೊಟ್ಟಿರೋದು ನಂಗೆ ಗೊತ್ತೂ ಇಲ್ಲ ಎಂದು ಹೇಳಿದ್ದಾರೆ.

ಸರ್ ಒಂದು ಕಡೆ ಡಿಸಿಎಂ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಸತೀಶ್ ಜಾರಕಿಹೊಳಿ ಅಸಮಾಧಾನ ಏನು ಇದು ..? ಡಿಸಿಎಂ ಯಾರಿಗೂ ಹೇಳಿಲ್ಲ. ಅದು ಒಂದು ಮಠದ ಒಂದು ಕಾರ್ಯಕ್ರಮ. ಮಂತ್ರಿಗೂ ಹೇಳಿಲ್ಲ ಯಾವ ಶಾಸಕರುಗಳಿಲ್ಲ ಎಂದು ಅವರೇ ಕ್ಲಾರಿಟಿ ಮಾಡಿದ್ದಾರೆ. ಮಂತ್ರಿ ಬಂದಾಗ ಯಾರು ಇರಲಿಲ್ಲ ಅಂದ್ರೆ ಅರ್ಥವೇನು..? ಎಲ್ಲವನ್ನೂ ನಾವು ರಾಜಕೀಯವಾಗಿ ನೋಡಬಾರದು. ಬಿಜೆಪಿ ಹಾಗೂ ಜನತಾ ದಳಕ್ಕೆ ಪರಿಸ್ಥಿತಿಗೆ ಕೆಟ್ಟಿದೆ ಅವರು ಏನಾದ್ರೂ ಹುಡುಕ್ತಾ ಇರ್ತಾರೆ ಎಂದು ಸಚಿವರು ಟಾಂಗ್ ಕೊಟ್ಟಿದ್ದಾರೆ.

ಬೆಳಗಾವಿಯಲ್ಲಿ ಯಾವುದೇ ತರಹದ ಅಸಮಾಧಾನ ಇಲ್ಲ.  ನಮ್ಮ ಪಾರ್ಟಿಯಲ್ಲಿ ಭಿನ್ನಾಭಿಪ್ರಾಯ ಇಲ್ಲ. ಅಸಮಾಧಾನ ಇಲ್ಲ. ಪಕ್ಷದ ದೃಷ್ಟಿಯಿಂದ ಆಡಳಿತಾತ್ಮಕ ದೃಷ್ಟಿಯಿಂದ ಒಳ್ಳೆಯ ವಿಚಾರಗಳನ್ನು ಚರ್ಚಿಸುತ್ತೇವೆ ಎಂದಿದ್ದಾರೆ.

ಎರಡು ಶಕ್ತಿನೂ ಇಲ್ಲ. ಶಕ್ತಿ ಕೇಂದ್ರಗಳು ಇಲ್ಲ. ಭಿನ್ನಾಭಿಪ್ರಾಯವಿಲ್ಲ. ನೀವು ಚುನಾವಣೆಯ ಮೊದಲು ಹೇಳಿದ್ರಿ, ಸಿದ್ದರಾಮಯ್ಯ ಡಿಕೆಶಿ ಸೇರಲ್ಲ, ಟಿಕೇಟ್ ಹಂಚಿಕೆ ವಿಚಾರಕ್ಕೆ ಕಿತ್ತಾಡ್ತಾರೆ ಅಂತ.  ಟಿಕೇಟ್ ಹಂಚಿಕೆ ಆಯ್ತು. ಸರ್ಕಾರ ಬಂದು ಆಯ್ತು. 136 ಸಿಟ್ ಗೆದ್ದು ಆಯ್ತು. ಮುಖ್ಯಮಂತ್ರಿಯೂ ಆಯ್ತು. ಎಲ್ಲ ಯೋಜನೆಗಳು ಅನುಷ್ಟಾನ ಆಯ್ತು. ಇನ್ನು ಮುಂದೆ ಬರಗಾಲವನ್ನು ಎದುರಿಸುತ್ತಿದ್ದೇವೆ. ಎಲ್ಲ ಸಮಸ್ಯೆನ್ನೂ ಬಗೆಹರಿಸುತ್ತೇವೆ ಎಂದು ಸಚಿವ ಚೆಲುವರಾಯಸ್ವಾಮಿ ಹೇಳಿದ್ದಾರೆ.

‘ಯಾರೋ ಗಿರಾಕಿ ಲಂಚ ಪಡೆದಿರುವ ಆರೋಪಿ ಯಾರೆಂದು ಬಹಿರಂಗ ಪಡಿಸಲಿ’

‘ಶುಭ ಅಷ್ಟಮಿ ದಿನ, ನನಗೆ ಅಷ್ಟೈಶ್ವರ್ಯ ಒಲಿದ ಸಂಭ್ರಮ!’

ಚೆಂದದ ನರ್ಸ್ಗಳು ಅಜ್ಜ ಅಂತಾರೆ: ಕಾಂಗ್ರೆಸ್ ಶಾಸಕ ಬೇಸರ

 

- Advertisement -

Latest Posts

Don't Miss