ವಿಜಯನಗರ :ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟರ ಬೇಟೆಗೆ ಟೊಂಕ ಕಟ್ಟಿ ನಿಂತತ್ತೆ ಕಾಣುತ್ತಿದೆ. ಯಾಕೆಂದರೆ ಬೆಳಿಗ್ಗೆ ಆದರೆ ಹಾಲು ಮಾರುವವರು ತಟ್ಟುಟ್ಟಿದ್ದ ಬಾಗಿಲನ್ನು ಕೆಲವು ದಿನಗಳಿಂದ ಸರ್ಕಾರಿ ಅಧಿಕಾರಿಗಳ ಮನೆ ಬಾಗಿಲನ್ನು ಲೋಕಾಯುಕ್ತ ಅಧಿಕಾರಿಗಳು ತಟ್ಟುತ್ತಿದ್ದಾರೆ.
ಈಗಾಗಲೇ ಸಾಕಟ್ಟು ಕಡೆ ದಾಳಿ ನಡೆಸಿರುವ ಲೋಕಾಯುಕ್ತರು ಇಂದು ವಿಜಯನಗರ ಜಿಲ್ಲೆಯ ಕೆಲವು ಕಡೆ ಲಗ್ಗೆ ಇಟ್ಟು ದಾಳಿ ನಡೆಸಿದ್ದಾರೆ. ಹೌದು ವೀಕ್ಷಕರೇ ವಿಜಯನಗರದ ಕುಡ್ಲಗಿ ತಾಲೂಕಿನ ಕಾನಾಹೊಸಹಳ್ಳಿಯಲ್ಲಿ ರಾಣೆಬೆನ್ನೂರಿನ ಆರ್ ಎಫ್ ಓ ಅಧಿಕಾರಿಯಾಗಿರುವ ಮಹಾಂತೇಶ್ ಎಂಬುವವರ ಪತ್ನಿಗೆ ಸೇರಿದ ಮನೆ ಮೇಲೆ ದಾಳಿ ನಡೆಸಿ ಶೋಧ ಕಾರ್ಯ ನಡೆಸುತ್ತಿದ್ದಾರೆ
ಇನ್ನು ಈ ದಾಳಿ ದಾವಣಗೆರೆ ಲೋಕಾಯುಕ್ತ ಪಿಐ ಮಧುಸೂದನ್ ನೇತೃತ್ವದಲ್ಲಿ ಹಾವೇರಿಯ ಲೋಕಾಯುಕ್ತ ತನಿಖಾಧಿಕಾರಿ ಮಂಜುನಾಥ್ ಪಂಡಿತ್ ಮಾರ್ಗದರ್ಶನದಲ್ಲಿ 8 ಜನರ ತಂಡದಿಂದ ನಡೆದಿದೆ.
ಭರ್ಜರಿ ಬೇಟೆಯಾಡಿದ ಹುಬ್ಬಳ್ಳಿ ಉಪನಗರ ಪೊಲೀಸರು; ಸ್ಕೂಟರ್ ನಿಂದ ಕಾಣೆಯಾಗಿದ್ದ ಹಣ ಪತ್ತೆ..!
ಸರ್ಕಾರಿ ಬಸ್ ನ್ನು ಬಿಡದ ಕದೀಮರು..! ರಾತ್ರಿ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್ ಬೆಳಗಾಗೊದರೊಳಗೆ ಮಾಯ..!

