ರಾಜ್ಯದಲ್ಲಿ ಸಾವಿರ ದಾಟಿದ ಸೋಂಕಿತರ ಸಂಖ್ಯೆ

ಕರ್ನಾಟಕ ಟಿವಿ : ರಾಜ್ಯದಲ್ಲಿ ಇಂದು 45 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 1032 ಆಗಿದೆ. ಇದುವರೆಗೂ 35 ಮಂದಿ ಸಾವಿಗೀಡಾಗಿದ್ದು 476 ಸೊಂಕಿತರು ಗುಣಮುಖರಾಗಿದ್ದಾರೆ. 520 ಸೋಂಕಿತರು ಚಿಕಿತ್ಸೆಯನ್ನ ಪಡೀತಿದ್ದಾರೆ. ದಕ್ಷಿಣಕನ್ನಡ ಜಿಲ್ಲಎಯಲ್ಲಿ 16 ಪ್ರಕರಣ ಪತ್ತೆಯಾಗಿದ್ದು ಎಲ್ಲರೂ ಸಹ ದುಬೈನಿಂದ ಹಿಂದುರಿಗಿದವರೇ ಆಗಿದ್ದಾರೆ. ಉಡುಪಿಯಲ್ಲಿ 5 ಪ್ರಕರಣ ಪತ್ತೆಯಾಗಿದ್ದು ಇವರೂ ಸಹ ದುಬೈ ನಿಂದ ವಾಪಸ್ ಆದವರೇ ಆಗಿದ್ದಾರೆ.  ಬೆಂಗಳೂರು ನಗರದಲ್ಲಿ 13 ಪ್ರಕರಣ ಪತ್ತೆಯಾಗಿದ್ದು ಇದರಲ್ಲಿ 11 ಮಂದಇಗೆ ಪಿ 653ರ ಸಂಪರ್ಕದಿಂದಲೇ ಸೋಂಕು ತಗುಲಿರುವುದು ದೃಢಪಟ್ಟಿದೆ. ಬೀದರ್ ನ ಮೂರು ಮಂದಿಯಲ್ಲಿ ಸೋಂಕುಪತ್ತೆಯಾಗಿದೆ. ಇದಲ್ಲದೇ ಹಾಸನಕ್ಕೆ ಮುಂಬೈ ನಿಂದ ಬಂದ ಮೂವರಿಗೆ ಸೋಂಕು ಧೃಢಪಟ್ಟಿದೆ. ಶಿವಮೊಗ್ಗದಲ್ಲಿ ಒಬ್ಬರಿಗೆ ಸೋಂಕುಪತ್ತೆಯಾಗಿದ್ದು ಅವರು ಸಹ ಮುಂಬೈನಿಂದ ಬಂದವರಾಗಿದ್ದಾರೆ. ಇನ್ನು ಚಿತ್ರದುರ್ಗದ ಇಬ್ಬರು ಹಾಗೂ ಕೋಲಾರದ ಒಬ್ಬರಿಗೆ ಚೆನ್ನೈ ಪ್ರಯಾಣ ಹಿನ್ನೆಲೆ ಸೋಂಕುಪತ್ತೆಯಾಗಿದೆ.  ಬಾಗಲಕೋಟೆ ಒಬ್ಬ ವ್ಯಕ್ತಿಗೆ ಇಂದು ಸೋಂಕು ಪತ್ತೆಯಾಗಿರೋದು ದೃಢಪಟ್ಟಿದೆ.

ನ್ಯೂಸ್ ಡೆಸ್ಕ್, ಕರ್ನಾಟಕ ಟಿವಿ

About The Author