Hubballi News: ಹುಬ್ಬಳ್ಳಿ: ಹಿಂದಿನಿಂದ ಬಂದ ಲಾರಿ, ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ, ಯುವಕನೋರ್ವ ಮೃತಪಟ್ಟ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಧಾರವಾಡದ ನಿಜಾಮುದ್ದಿನ ಕಾಲೋನಿ ಫಸ್ಟ್ ಕ್ರಾಸ್ ನಿವಾಸಿ ಇಜಾಝ ಹಾವೇರಿಪೇಟ (20) ಎಂಬ ಯುವಕ, ಸಾವನ್ನಪ್ಪಿದ್ದು, ಹುಬ್ಬಳ್ಳಿಯ ಪ್ರೆಸಿಡೆಂಟ್ ಹೊಟೇಲ್ ಬಳಿ, ಈ ಘಟನೆ ನಡೆದಿದೆ.
ಮೃತ ದೇಹ ಹುಬ್ಬಳ್ಳಿ ಕೆ ಎಂ ಸಿ ಆಸ್ಪತ್ರೆಗೆ ( ಪಿ.ಎಂ) ಮಾಡಲು ಕಳಿಸಲಾಗಿದೆ. ಕಾಟನ್ ಮಾರ್ಕೆಟ್ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ದಾಖಲಾಗಿ ತನಿಖೆ ಮಾಡಲಾಗುತ್ತಿದೆ.




