Saturday, July 12, 2025

Latest Posts

‘ಡಿಸಿಎಂಗೆ ಕಡಿವಾಣ ಹಾಕಲು, ಡಿನ್ನರ್ ಮೀಟಿಂಗ್ ಶರುವಾಗಿದೆ’

- Advertisement -

Bengaluru political news: ಬೆಂಗಳೂರಿನಲ್ಲಿಂದು ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ, ಕಾಂಗ್ರೆಸ್ ಆಡಳಿತದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ಬಂದು ಆರು ತಿಂಗಳಾಗಿದೆ. ಚಕ್ರ ಮುಂದಕ್ಕೆ ಹೋಗ್ತಿಲ್ಲ. ಆಶ್ವಾಸನೆ ಈಡೇರಿಸಲು ಪರದಾಡ್ತಿದೆ. ಸಿದ್ದರಾಮಯ್ಯ ಅವರಿಗೆ ಎರಡನೇ ಅವಧಿಯಲ್ಲಿ ಸರ್ಕಾರದ ಮೇಲೆ ಹಿಡಿತ ಇಲ್ಲ. ಪಕ್ಷದ ಮೇಲೂ ಹಿಡಿತ ಇಲ್ಲ. ಗೃಹ ಲಕ್ಷ್ಮಿ ಯೋಜನೆ ಅರ್ಧದಷ್ಟು ಜನರಿಗೆ ತಲುಪಿಲ್ಲ. ಎಲ್ಲ ಅಭಿವೃದ್ಧಿ ಕಾರ್ಯ ಸ್ಥಗಿತವಾಗಿದೆ ಎಂದು ಹೇಳಿದ್ದಾರೆ.

ವಿದ್ಯುತ್ ಉಚಿತ ಎಂದ್ರು, ದರದಲ್ಲಿ ಭಾರಿ ಹೆಚ್ಚಳ ಮಾಡಿದ್ರು. ಬರಪೀಡಿತ ಪ್ರದೇಶಕ್ಕೆ ಒಬ್ಬ ಸಚಿವ ಕೂಡ ಹೋಗಿಲ್ಲ. ಸರ್ಕಾರ ದಿವಾಳಿ ಆಗಿದೆ, mla ಗ್ರಾಂಟ್ಸ್ ಕೇವಲ 50 ಲಕ್ಷ ಕೊಟ್ಟಿದ್ದಾರೆ. ತಾಂಡಾ ನಿಗಮ, ಅಂಬೇಡ್ಕರ್ ನಿಗಮ, ಬೋವಿ, ವಾಲ್ಮೀಕಿ ನಿಗಮಳಿಗೆ ಒಂದು ಪೈಸೆ ಹಣ ಬಿಡುಗಡೆ ಮಾಡಿಲ್ಲ. ಕೃಷಿ ಪಂಪ್ಸೆಟ್ ಗಳಿಗೆ  ಉಚಿತ ಟ್ರಾನ್ಫರ್ಮರ್ ಯೋಜನೆ ರದ್ದು ಮಾಡಿದ್ದಾರೆ. ರೈತನೇ ಸ್ವಂತ ಖರ್ಚಿನಿಂದ ಬರಿಸಬೇಕು ಎಂಬ ಆದೇಶ ಮಾಡಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ಆಡಳಿತದ ಬಗ್ಗೆ ಮಾಜಿ ಸಿಎಂ ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಐಟಿ ದಾಳಿಯಲ್ಲಿ ಭ್ರಷ್ಟಾಚಾರ ಬಯಲಾಗಿದೆ. ಲೂಟಿ ಸರ್ಕಾರ ಎಂದು ಸಾಬೀತಾಗಿದೆ. 100 ಕೋಟಿಗೂ ಹೆಚ್ಚು ಹಣ ಸಿಕ್ಕಿದೆ ಇವರ ಬಣ್ಣ ಬಯಲಾಗಿದೆ. ನಾಯಕತ್ವಕ್ಕಾಗಿ ಕಚ್ಚಾಟ ಶುರುವಾಗಿದ್ದು, ಸಿದ್ದು ಡಿಕೆ ನಡುವೆ ಜಟಾಪಟಿ ತಾರಕಕ್ಕೆ ಏರಿದೆ. ಡಿಸಿಎಂಗೆ ಕಡಿವಾಣಕ್ಕೆ, ಡಿನ್ನರ್ ಮೀಟಿಂಗ್ ಶರುವಾಗಿದೆ ಎಂದು ಯಡಿಯೂರಪ್ಪ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಿರಂತರ ವಿದ್ಯುತ್ ನೀಡುವಲ್ಲಿ ವಿಫಲವಾಗಿದೆ. ಬರ ನಿರ್ವಹಣೆಯಲ್ಲಿ ವಿಫಲ, ಕೇಂದ್ರ ಸರ್ಕಾರದತ್ತ ಬೆರಳು ಮಾಡ್ತಿದಾರೆ. ವೈಫಲ್ಯ ಮರೆ ಮಾಚಲು ಕೇಂದ್ರ ಸರ್ಕಾರವನ್ನ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಯತ್ನಿಸಲಾಗುತ್ತಿದೆ. ಸಿಎಂ ಈ ಎಲ್ಲ ಕುತಂತ್ರ ಮಾಡ್ತಿದಾರೆ. ಸಂಪನ್ಮೂಲದ ಒತ್ತಡ ಇದೆ ಹಾಗಾಗಿ ಎಲ್ಲದಕ್ಕೂ ಕೇಂದ್ರದತ್ತ ನೋಡ್ತಿದಾರೆ. ವೇಣುಗೋಪಾಲ್ ಸುರ್ಜೆವಾಲಾ ಕಲೆಕ್ಷನ್ ಟಾರ್ಗೆಟ್ ನೀಡಲು ಭೇಟಿ ನೀಡ್ತಿರೋದು. ಕಾಂಗ್ರೆಸ್ ಗೆ ರಾಜ್ಯ ATM ಆಗಿದೆ. ನಿತ್ಯ ಮೋದಿಯವರನ್ನ ಟೀಕಿಸೋದು ಸಿದ್ದರಾಮಯ್ಯ ಅವರ ಚಾಳಿ ಎಂದು ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.

Ndrf ನಲ್ಲಿ 12744, Sdrf 3977 ಕೋಟಿ ರೂ.  2015 ರಿಂದ ಈವರೆಗೆ 5.23 ಲಕ್ಷ ಕೋಟಿ ಕೇಂದ್ರ ರಾಜ್ಯಕ್ಕೆ ಕೊಟ್ಟಿದೆ. ಕಿಸಾನ್ ಸಮ್ಮಾನ್ ಅಡಿ  ಕೇಂದ್ರ ಸರ್ಕಾರ 11.75 ಲಕ್ಷ ರೈತರಿಗೆ 20 ಸಾವಿರ ಕೋಟಿ ನೀಡಿದೆ. ಮೋದಿಯವರು ತಾರತಮ್ಯ ಇಲ್ಲದೇ ಕೆಲಸ ಮಾಡ್ತಿದಾರೆ. ರಾಜಕೀಯಕ್ಕಾಗಿ ಸಿದ್ದರಾಮಯ್ಯ ಅವರು ಮೋದಿಯವರನ್ನ ಟೀಕೆ ಮಾಡುತ್ತಾ ಕಾಲಹರಣ ಮಾಡ್ತಿದ್ದಾರೆ ಎಂದು ಯಡಿಯೂರಪ್ಪ ಮೋದಿ ಪರ ಬ್ಯಾಟ್ ಬೀಸಿದ್ದಾರೆ.

ಜನವಿರೋಧಿ ರೈತ ವಿರೋಧಿ ಸರ್ಕಾರ ಇದು. ಒಳಜಗಳದಲ್ಲೇ ನಿರತವಾಗಿದೆ. 6 ತಿಂಗಳು ಸಮಯ ಕೊಟ್ಟಿದ್ದೇವೆ. ಹೀಗೆ ಮುಂದುವರೆದರೆ ದೊಡ್ಡಮಟ್ಟದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

‘ಆಯ್ತಪ್ಪಾ, ನಮ್ಮ ಸರ್ಕಾರ ಬೀಳಿಸ್ಕೊಳ್ಳಿ. ಸರ್ಕಾರ ಬೀಳುತ್ತೆ ಎಂಬ ಮಾತು ಕೇಳಿ ನಮಗೂ ಸಾಕಾಗಿದೆ’

ಬಿಜೆಪಿ ಸಂಸದರು ಕೇಂದ್ರದಿಂದ ಬರಪರಿಹಾರ ಕೊಡಿಸಲಿ : ಮುಖ್ಯಮಂತ್ರಿ ಸಿದ್ದರಾಮಯ್ಯ

ಸಿಎಂ ಪಾತ್ರದಲ್ಲಿ ಶಾಸಕ ಶಿವಲಿಂಗೇಗೌಡ ;ಶೂಟಿಂಗ್ ನಲ್ಲಿ ಬ್ಯುಸಿ..!

- Advertisement -

Latest Posts

Don't Miss