Bengaluru News: ಬೆಂಗಳೂರು: ದಿನನಿತ್ಯ ಮದ್ಯ ಸೇವಿಸಲು ಹಣಕ್ಕಾಗಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬೆಂಗಳೂರು ನಗರದ ಗಿರಿನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಒಂದು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕದ್ದು ಅದರ ಬ್ಯಾಟರಿ, ಟೈರ್ಗಳನ್ನು ತೆಗೆದು ಮಾರಾಟ ಮಾಡಿ ಬೈಕ್ ಅನ್ನು ಮತ್ತೊಂದು ಠಾಣಾ ವ್ಯಾಪ್ತಿಯಲ್ಲಿ ಬಿಟ್ಟು ಹೋಗುತ್ತಿದ್ದನು.
ಕ್ವಾರ್ಟರ್ ಎಣ್ಣೆಗಾಗಿ ಬೈಕ್ ಕದಿಯುತ್ತಿದ್ದ ಲಕ್ಷ್ಮಣ್ ಬಂಧಿತ ಆರೋಪಿ. ದಿನನಿತ್ಯ ಮದ್ಯ ಸೇವಿಸಲು ಹಣಕ್ಕಾಗಿ ಕಳ್ಳತನವನ್ನೇ ವೃತ್ತಿಯಾಗಿಸಿಕೊಂಡಿದ್ದ ಈತ, ಮದ್ಯ ಸೇವಿಸಲು ಬೈಕ್ ಕದ್ದು ಬ್ಯಾಟರಿ ಮಾರಾಟ ಮಾಡಿ ಬಂದ ಹಣದಲ್ಲಿ ಮದ್ಯ ಸೇವನೆ ಮಾಡುತ್ತಿದ್ದನು.
ಕೆಲವು ತಿಂಗಳ ಹಿಂದೆ ಪೊಲೀಸರ ಕೈಗೆ ಲಾಕ್ ಆಗಿ ಜೈಲು ಸೇರಿದ್ದ ಆರೋಪಿ, ಜೈಲಿಂದ ಬಿಡುಗಡೆ ಬಳಿಕ ಮತ್ತೆ ಬೈಕ್ ಕಳ್ಳತನ ಮುಂದುವರೆಸಿದ್ದ. ಈತನ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಒಟ್ಟು 15 ಪ್ರಕರಣ ದಾಖಲಾಗಿವೆ.
ಸದ್ಯ ಆರೋಪಿ ಲಕ್ಷ್ಮಣನನ್ನು ಬಂಧಿಸಿದ ಗಿರಿನಗರ ಠಾಣಾ ಪೊಲೀಸರು, ಈತನಿಂದ 11.55 ಲಕ್ಷ ಮೌಲ್ಯದ 20 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಅಲ್ಲದೆ, ತನಿಖೆಯನ್ನು ಮುಂದುವರಿಸಿದ್ದಾರೆ.
‘ದೊಡ್ಡ ಮಟ್ಟದಲ್ಲಿ ಅನಾಹುತವಾದರೆ ನೇರವಾಗಿ ರೂರಲ್ ಪೊಲೀಸ್ ಠಾಣೆಯವರೇ ಕಾರಣರಾಗುತ್ತಾರೆ’
ಮೇಕ್ ಇನ್ ಇಂಡಿಯಾ ಯೋಜನೆಯಡಿ ಮಹಿಳೆಗೆ ಮೋಸ: 1.2 ಕೋಟಿ ರೂ. ವಂಚಿಸಿದ ಉದ್ಯಮಿ
‘ಕಾಂಗ್ರೆಸ್ ಪಕ್ಷಕ್ಕೆ ಜಯವಾಗಲಿ. ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಜಯವಾಗಲಿ’