Thursday, February 6, 2025

Latest Posts

ವರ್ಗಾವಣೆ ಮಾಡಿರುವ ಅಧಿಕಾರಿಗಳ ಸೇವಾ ವಿವರ ನೀಡುವಂತೆ ಸಂತೋಷ್ ಲಾಡ್ ಟಿಪ್ಪಣಿ.

- Advertisement -

Political News: ಬೆಂಗಳೂರು: ಆಗಸ್ಟ್ ತಿಂಗಳಲ್ಲಿ ಸಚಿವರ ಗಮನಕ್ಕೇ ತಾರದೇ 40 ಮಂದಿ ಕಾರ್ಮಿಕ ಇಲಾಖೆ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿತ್ತು. ಇದೀಗ ಅಧಿಕಾರಿಗಳು ಸಚಿವರಿಗೂ ಮಾಹಿತಿ ನೀಡದೇ ಸಿಎಂ ಸಚಿವಲಾಯದ ಅಧಿಕಾರಿಗಳು ವರ್ಗಾವಣೆ ಪಟ್ಟಿಯನ್ನು ಸಿದ್ಧಪಡಿಸಿರುವುದು ಸಚಿವ ಸಂತೋಷ್ ಲಾಡ್ ಕೋಪಕ್ಕೆ ಕಾರಣವಾಗಿದೆ.

ಸಚಿವ ಸಂತೋಷ್ ಲಾಡ್ ಅವರ ಶಿಫಾರಸುಗಳನ್ನೇ ಕಸದ ಬುಟ್ಟಿಗೆ ಹಾಕಿರುವ ಸಿಎಂ ಸಚಿವಾಲಯದ ಅಧಿಕಾರಿಗಳು, ಸಚಿವರಿಗೇ ಮಾಹಿತಿ ನೀಡದೇ ಅಧಿಕಾರಿಗಳ ವರ್ಗಾವಣೆ ಪಟ್ಟಿ ಸಿದ್ಧಪಡಿಸಿದ್ದಾರೆ. ಇದು ಸಂತೋಷ್ ಲಾಡ್ ಹಾಗೂ ಸಿಎಂ ಸಚಿವಾಲಯ ಅಧಿಕಾರಿಗಳ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ.

ಸಚಿವರ ಹೆಸರಲ್ಲಿ ತಾವೇ ಅಧಿಕಾರ ಚಲಾಯಿಸುತ್ತಿರುವ ಸಿಎಂ ಸಚಿವಾಲಯದ ಅಧಿಕಾರಿಗಳ ಅಬ್ಬರಕ್ಕೆ ತೀವ್ರ ಕೋಪಗೊಂಡಿರುವ ಸಚಿವ ಸಂತೋಷ್ ಲಾಡ್, ಅತ್ತ ಸಿಎಂ ಸಿದ್ದರಾಮಯ್ಯ ಅವರಿಗೆ ಹೇಳಲೂ ಆಗದೇ, ಸುಮ್ಮನಿರಲೂ ಆಗದೇ ಇರುವ ಸ್ಥಿತಿಯಲ್ಲಿ ಕುಳಿತಿದ್ದಾರೆ. ಅಲ್ಲದೆ, ವರ್ಗಾವಣೆ ಮಾಡಿರುವ ಅಧಿಕಾರಿಗಳ ಸೇವಾ ವಿವರ ನೀಡುವಂತೆ ಟಿಪ್ಪಣಿ ಕಳಿಸಿದ್ದಾರೆ.

ಏನಿದು ಜಟಾಪಟಿ?

ಆಗಸ್ಟ್ ತಿಂಗಳಲ್ಲಿ ಕಾರ್ಮಿಕ ಇಲಾಖೆಯ 40 ಅಧಿಕಾರಿಗಳನ್ನು ಸಚಿವರು ವರ್ಗಾವಣೆ ಮಾಡಿದ್ದರು. ವರ್ಗಾವಣೆಗೆ ಸಿಎಂ ಸಿದ್ದರಾಮಯ್ಯ ಅವರ ಅನುಮೋದನೆ ಇಲ್ಲ ಎಂದು ಐದೇ ದಿನಕ್ಕೆ ವರ್ಗಾವಣೆ ರದ್ದುಗೊಳಿಸಲಾಗಿತ್ತು. ಇದೀಗ ಮತ್ತೆ ಸಚಿವರು ಕೇವಲ ನಾಲ್ಕು ಅಧಿಕಾರಿಗಳ ವರ್ಗಾವಣೆಗಾಗಿ ಸಿಎಂ ಅನುಮೋದನೆಗೆ ಶಿಫಾರಸ್ಸು ಮಾಡಿದ್ದರು.

ಸಿಎಂ ಅನುಮೋದನೆ ಪಡೆಯುವ ವೇಳೆ ಸಿಎಂ ಸಚಿವಲಾಯದ ಅಧಿಕಾರಿಗಳು ಹೆಚ್ಚುವರಿ ಪಟ್ಟಿ ಸಿದ್ಧಪಡಿಸಿ ಬಿಟ್ಟಿದ್ದಾರೆ. ಸಚಿವರು ಕೊಟ್ಟಿದ್ದ ಪಟ್ಟಿ ಕಸದ ಬುಟ್ಟಿಗೆ ಹಾಕಿ ಸಚಿವರ ಗಮನಕ್ಕೇ ತಾರದೇ 40 ಮಂದಿ ಕಾರ್ಮಿಕ ಇಲಾಖೆ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಸಚಿವರ ಬೇಸರ ಗೊತ್ತಿಲ್ಲದೇ ಸಿದ್ದರಾಮಯ್ಯ ಅವರು ವರ್ಗಾವಣೆ ಪಟ್ಟಿಗೆ ಅನುಮೋದನೆ ನೀಡಿದ್ದಾರೆ.

ಸಚಿವರು ಹಾಗೂ ಮುಖ್ಯಮಂತ್ರಿ ಅವರಿಗೆ ಮಾಹಿತಿ ನೀಡದೆ ಅಧಿಕಾರಿಗಳೇ ವರ್ಗಾವಣೆ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಸಿಎಂ ಕಚೇರಿ ಅಧಿಕಾರಿಗಳ ನಡೆಗೆ ಸಚಿವ ಸಂತೋಷ್ ಲಾಡ್ ತೀವ್ರ ಬೇಸರಗೊಂಡಿದ್ದಾರೆ. ಅಲ್ಲದೆ, ಅಧಿಕಾರಿಗಳಿಂದ ನೇರ ವರ್ಗಾವಣೆ ಪಟ್ಟಿ ತಯಾರಿಕೆ ವೇಳೆ ಮಾರ್ಗಸೂಚಿ ಉಲ್ಲಂಘನೆಯ ಆರೋಪ ಹಿನ್ನೆಲೆ ವರ್ಗಾವಣೆ ಮಾಡಿರುವ ಅಧಿಕಾರಿಗಳ ಸೇವಾ ವಿವರ ನೀಡುವಂತೆ ಸಚಿವರು ಟಿಪ್ಪಣಿ ಕಳಿಸಿದ್ದಾರೆ.

‘ದೊಡ್ಡ ಮಟ್ಟದಲ್ಲಿ ಅನಾಹುತವಾದರೆ ನೇರವಾಗಿ ರೂರಲ್ ಪೊಲೀಸ್ ಠಾಣೆಯವರೇ ಕಾರಣರಾಗುತ್ತಾರೆ’

ಮೇಕ್ ಇನ್ ಇಂಡಿಯಾ ಯೋಜನೆಯಡಿ ಮಹಿಳೆಗೆ ಮೋಸ: 1.2 ಕೋಟಿ ರೂ. ವಂಚಿಸಿದ ಉದ್ಯಮಿ

‘ಕಾಂಗ್ರೆಸ್ ಪಕ್ಷಕ್ಕೆ ಜಯವಾಗಲಿ. ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಜಯವಾಗಲಿ’

- Advertisement -

Latest Posts

Don't Miss