Hassan Political News: ಹಾಸನ: ಹಾಸನ ಜಿಲ್ಲಾಧಿಕಾರಿ ವಿರುದ್ಧ ಶಾಸಕರು ಕೆಂಡಾಮಂಡಲರಾಗಿದ್ದಾರೆ. ಜಿಲ್ಲಾಧಿಕಾರಿ ಸತ್ಯಭಾಮ ವಿರುದ್ಧ ಶಾಸಕ ಸ್ವರೂಪ್ ಪ್ರಕಾಶ್, ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಾಸನಾಂಬ ದೇವಸ್ಥಾನದ ಹೋಮ ಹಾಗೂ ಕಳಸ ಪ್ರತಿಷ್ಠಾಪನೆಗೆ ತಮಗೆ ಏಕೆ ಕರೆಯಲಿಲ್ಲವೆಂದು ಪ್ರಶ್ನಿಸಿದ್ದಾರೆ. ಈ ವಿಷಯವಾಗಿ ಶಾಸಕರು ಹಾಗೂ ಜಿಲ್ಲಾಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಜೆಡಿಎಸ್ ಕಾರ್ಯಕರ್ತರು ಜಿಲ್ಲಾಡಳಿತದ ವಿರುದ್ಧ ಧರಣಿ ನಡೆಸಿದ್ದಾರೆ.
ಈ ಬಗ್ಗೆ ಜಿಲ್ಲಾಧಿಕಾರಿಯನ್ನು ಪ್ರಶ್ನಿಸಿರುವ ಶಾಸಕ ಸ್ವರೂಪ್ ಪ್ರಕಾಶ್, ನೀವು ಅವೆಲ್ಲಾ ಹೇಳ್ಬೇಡಿ ಮೇಡಂ. ನಾನು ಎರಡುವರೆ ಲಕ್ಷದ ಜನಪ್ರತಿನಿಧಿ. ನನಗೂ ಜವಾಬ್ದಾರಿ ಇದೆ. ಜನರು ಫೋನ್ ಮಾಡಿ ಕೇಳ್ತಿದ್ದಾರೆ ನೀವ್ಯಾಕ್ರಿ ಪೂಜೆ ಕೂತಿಲ್ಲ ಅಂತ. ದೇವಸ್ಥಾನದ ಅಧ್ಯಕ್ಷತೆ ಯಾರು ಮೇಡಂ.? ಏನಕ್ಕೆ ಕರೆದಿಲ್ಲ ನೀವು ಎಂದು ಸ್ವರೂಪ್ ಪ್ರಶ್ನಿಸಿದ್ದಾರೆ.
ಅಲ್ಲದೇ ಜಿಲ್ಲಾಧಿಕಾರಿ ದಂಪತಿ ಶಾಸಕರನ್ನು ಕರಿಯದೇ ಪೂಜೆಗೆ ಕುಳಿತ ವೀಡಿಯೋವನ್ನು ಜೆಡಿಎಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು, ಆಕ್ರೋಶ ಹೊರಹಾಕಿದ್ದಾರೆ.
ಹಾವೇರಿಯಲ್ಲಿ ಅತ್ತಿಗೆ, ಇಬ್ಬರು ಮಕ್ಕಳನ್ನು ಕೊಚ್ಚಿ ಕೊಂದ ಕಟುಕ: ಮಾಡಿದ ತಪ್ಪಾದರೂ ಏನು?