Monday, December 23, 2024

Latest Posts

ನಾಯಕನಹಟ್ಟಿಯಲ್ಲಿ ಪ್ರಪ್ರಥಮ ಬಾರಿಗೆ ಹೊನಲು ಬೆಳಕಿನ ಕಬ್ಬಡ್ಡಿ ಪ್ರೀಮಿಯರ್ ಲೀಗ್

- Advertisement -

ನಾಯಕನಹಟ್ಟಿ: ಸ್ಪೋರ್ಟ್ಸ್ ಕ್ಲಬ್ ವತಿಯಿಂದ ನಾಯಕನಹಟ್ಟಿ ಪ್ರಪ್ರಥಮ ಬಾರಿಗೆ ಹೊನಲು ಬೆಳಕಿನ ಕಬ್ಬಡಿ ಪ್ರೀಮಿಯರ್ ಲೀಗ್ ನಡೆಯಿತು. ಎಸ್ ಟಿ ಎಸ್ ಸರ್ ಶಾಲಾ ಆವರಣದಲ್ಲಿ ಚಿತ್ರದುರ್ಗ ಸ್ಪೋರ್ಟ್ಸ್ ಕ್ಲಬ್ ಇವರ ಸಹಾಯದೊಂದಿಗೆ ಪ್ರೊ ಮಾದರಿಯ 18 ವರ್ಷದೊಳಗಿನ ತಾಲೂಕು ಮಟ್ಟದ ಪುರುಷರ ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿಯನ್ನು ಆರಂಭಿಸಲಾಯಿತು.

ಗ್ರಾಮೀಣ ಕ್ರೀಡೆಯಾದ ಕಬ್ಬಡಿಯು ತಾಲೂಕಿನ ಗ್ರಾಮಗಳ ಪ್ರತಿಭೆಗಳನ್ನು ಹೊರ ತೆಗೆಯುವುದಕ್ಕಾಗಿ. ಉತ್ತಮ ತರಬೇತಿ ನೀಡುವುದಕ್ಕಾಗಿ ಹಾಗೂ ಯುವಕರಲ್ಲಿ ಸದೃಢತೆ ಚೈತನ್ಯ ಕ್ರೀಡೆಗಳ ಮೇಲೆ ಆಸಕ್ತಿಯನ್ನು ಬೆಳೆಸಲು. ಹಾಗೂ ಈ ಭಾಗದ ಕೆಲ ಕಬ್ಬಡಿ ಆಟಗಾರರು ಕರ್ನಾಟಕ ಜೂನಿಯರ್ ಕಬ್ಬಡಿ ತಂಡದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಥಮ ಸ್ಥಾನ ತಂದ ಆಭಿನಂದನ್ ನಾಯಕನಹಟ್ಟಿ ಪಟ್ಟಣದವರಾಗಿ ದೇಶಕ್ಕೆ ಕೀರ್ತಿ ತಂದಿದ್ದಾರೆ.  ಅದೇ ರೀತಿ 18 ವರ್ಷದ ಒಳಗಿನ ಕ್ರೀಡಾಪಟುಗಳನ್ನು ಸಜ್ಜುಗೊಳಿಸುವ ಗ್ರಾಮೀಣ ಕ್ರೀಡೆಯನ್ನು ಹೆಸರಿಸುವ ಒಂದು ಉತ್ತಮ ವೇದಿಕೆಯಾಗಿದೆ ಎಂದು ಕಬ್ಬಡಿ ಅಯೋಜಕರದ ಅಫೀಜ್ ಮತ್ತು ಚಂದು ತಿಳಿಸಿದರು. ಈ ಸಂದರ್ಭದಲ್ಲಿ ತ್ರಿಶೂಲ್, ಮಧು ಮುಂತಾದವರು ಭಾಗಿಯಾಗಿದ್ದರು.

ವಿಶೇಷ ಆಹ್ವಾನಿತರಾಗಿ ದಾದಾಪೀರ್ ಕ್ವಸ್ತಂ ಇನ್ಸ್ಪೆಕ್ಟರ್ ಚಿತ್ರದುರ್ಗ, ಪ್ರವೀಣ್ ಕಬ್ಬಡಿ ತರಬೇತಿದಾರರು, ಭಾರತೀಯ ಕ್ರೀಡಾ ಪ್ರಾಧಿಕಾರ ಬೆಂಗಳೂರು ಮತ್ತು ನಾಯಕನಹಟ್ಟಿಯ ಸಮಸ್ತ ಗ್ರಾಮಸ್ಥರು, ಪಟ್ಟಣ ಪಂಚಾಯಿತಿ ಸದಸ್ಯರು, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಕ ವೃಂದ, ವಾಲಿಬಾಲ್ ಕ್ರೀಡಾಪಟುಗಳು, ಆರೀಫ್ ಮತ್ತು ಗಿರೀಶ್ ಕ್ರೀಡಾಪಟುಗಳು ಮುಂತಾದವರು ಶುಭ ಕೋರಿದರು.

ಕೋಲಾರದಲ್ಲಿ ಮತ್ತೆ ಹರಿದ ನೆತ್ತರು: 17 ವರ್ಷದ ಬಾಲಕನ ಭೀಕರ ಕೊಲೆ

ಹಾವೇರಿಯಲ್ಲಿ ಅತ್ತಿಗೆ, ಇಬ್ಬರು ಮಕ್ಕಳನ್ನು ಕೊಚ್ಚಿ ಕೊಂದ ಕಟುಕ: ಮಾಡಿದ ತಪ್ಪಾದರೂ ಏನು?

ವೇತನ ಕೊಡದ ಟೋಲ್ ನಾಕಾ, ಲೇಬರ್ ಗುತ್ತಿಗೆದಾರ ಆತ್ಮಹತ್ಯೆ

- Advertisement -

Latest Posts

Don't Miss