Saturday, July 12, 2025

Latest Posts

ಹಾಸನಾಂಬಾ ಜಾತ್ರಾ ಮಹೋತ್ಸವಕ್ಕೆ ಪೌರ ಕಾರ್ಮಿಕರ ಕಡೆಗಣನೆ ಆರೋಪ: ಐಡಿ ಕಾರ್ಡ್ ಹಿಂದಿರುಗಿಸಿ ಪ್ರತಿಭಟನೆ

- Advertisement -

Hassan Political News: ಹಾಸನ: ಹಾಸನ ಜಿಲ್ಲಾಡಳಿತದಿಂದ ಎಡವಟ್ಟುಗಳ ಸುರಿಮಳೆಯೇ ಆಗಿದೆ. ಹಾಸನಾಂಬೆಯ ಪೂಜಾ ಸಮಾರಂಭಕ್ಕೆ ಸಂಬಂಧಿಸಿದಂತೆ, ಜಿಲ್ಲಾಧಿಕಾರಿ ಮತ್ತು ಸಿಬ್ಬಂದಿಗಳು ಹಲವರನ್ನು ಮರೆತಂತಿದೆ. ಮತ್ತು ಹಲವರನ್ನು ಕಡೆಗಣಿಸಿದಂತಿದೆ ಎಂಬ ಆರೋಪ ಕೇಳಿಬಂದಿದೆ.

ಶಾಸಕರಾದ ಸ್ವರೂಪ್ ಪ್ರಕಾಶ್ ಅವರನ್ನು ಕೂಡ ಹಾಸನ ಜಿಲ್ಲಾಧಿಕಾರಿ, ಹಾಸನಾಂಬೆಯ ಪೂಜೆಗೆ ಕರೆದಿರಲಿಲ್ಲ. ಅದಕ್ಕಾಗಿ ಜೆಡಿಎಸ್ ಕಾರ್ಯಕರ್ತರು, ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದ್ದರು. ಇನ್ನೊಂದೆಡೆ ಪೌರಕಾರ್ಮಿಕರು ಕೂಡ ಪ್ರತಿಭಟನೆ ನಡೆಸಿದ್ದು, ಹಾಸನಾಂಬೆಯ ಉತ್ಸವಕ್ಕೆ ಸಂಬಂಧಪಟ್ಟಂತೆ, ನಗರಸಭೆ ಅಧಿಕಾರಿಗಳನ್ನು ಮತ್ತು ಪೌರಕಾರ್ಮಿಕರನ್ನು ಜಿಲ್ಲಾಧಿಕಾರಿ, ಕಡೆಗಣಿಸಿದ್ದಾರೆಂದು ಆರೋಪಿಸಿದ್ದಾರೆ.

ಅಲ್ಲದೇ, ಎಲ್ಲಾ ಸ್ವಚ್ಚತಾ ಕಾರ್ಯಗಳಲ್ಲಿ  ನಮ್ಮನ್ನು ಬಳಸಿಕೊಂಡು. ಉತ್ಸವದಲ್ಲಿ ಮಾತ್ರ ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂದು  ಶಾಸಕರ ಬಳಿ ತಮ್ಮ ಅಳಲು ತೋಡಿಕೊಂಡರು. ಹೀಗಾಗಿ ನಗರಸಭಾ ಆರೋಗ್ಯ ನಿರಕ್ಷಕರಿಗೆ ಹಾಸನಾಂಬ ಜಾತ್ರಾ ಮಹೋತ್ಸವದ ಗುರುತಿನ ಚೀಟಿ ನೀಡಿ, ನಗರಸಭೆ ಎದುರು ಪೌರಕಾರ್ಮಿಕರು ಪ್ರತಿಭಟನೆ ನಡೆಸಿದ್ದಾರೆ. ಈ ಮೂಲಕ ನಗರಸಭಾ ಆರೋಗ್ಯ ನೀರೀಕ್ಷಕ, ಪ್ರಸಾದ್ ಬೆಂಬಲಕ್ಕೆ ಪೌರ ಕಾರ್ಮಿಕರು ನಿಂತಿದ್ದಾರೆ.

ಬೆಂಗಳೂರಿನ ಈ ಅಪಾರ್ಟ್ಮೆಂಟ್ನಲ್ಲಿ ನಾಯಿಯನ್ನು ಸಾಕಲು 10 ಸಾವಿರ ರೂ. ಕೊಡಬೇಕಂತೆ!

ಕೋಲಾರದಲ್ಲಿ ಮತ್ತೆ ಹರಿದ ನೆತ್ತರು: 17 ವರ್ಷದ ಬಾಲಕನ ಭೀಕರ ಕೊಲೆ

ಮೂರು ದಿನ ಚಿಕ್ಕಮಗಳೂರಿನ ಪ್ರವಾಸಿ ತಾಣಗಳಿಗೆ ನಿರ್ಬಂಧ, ಜಿಲ್ಲೆಯಾದ್ಯಂತ ಹೈ ಅಲರ್ಟ್

- Advertisement -

Latest Posts

Don't Miss